ಕೊಪ್ಪಳ ಡಿ. ೨೬ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಲ್ಟಿಜಿಮ್‌ಗಳ ನಿರ್ವಹಣೆಯ ಬಗ್ಗೆ ಯುವ ಜನರಿಗೆ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಮಲ್ಟಿಜಿಮ್‌ಗಳನ್ನು ಅಳವಡಿಸಲಾಗುತ್ತಿದ್ದು, ಇಂತಹ ಮಲ್ಟಿಜಿಮ್‌ಗಳ ನಿರ್ವಹಣೆ ಮಾಡಲು ಯುವಜನರ ಸೇವೆ ಅವಶ್ಯಕತೆ ಇರುತ್ತದೆ. ಈ ಹಿನ್ನಲೆಯಲ್ಲಿ ಯುವ ಜನರಿಗೆ ಮಲ್ಟಿಜಿಮ್ ನಿರ್ವಹಣೆ ಕುರಿತ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ೧೮ ರಿಂದ ೨೮ರ ವಯೋಮಿತಿಯೊಳಗಿರಬೇಕು. ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಮಲ್ಟಿಜಿಮ್ ಉಪಕರಣಗಳನ್ನು ಉಪಯೋಗಿಸಿ ಅನುಭವ ಹೊಂದಿರಬೇಕು. ತರಬೇತಿಗೆ ಆಸಕ್ತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಇತರೆ ಸಾಮಾನ್ಯ ವರ್ಗದ ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅರ್ಹರು ಡಿ. ೩೦ ರ ಒಳಗಾಗಿ ಕೊಪ್ಪಳದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಸಂಪೂರ್ಣವಾದ ವಿವರದೊಂದಿಗೆ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಅಥವಾ ಮೊಬೈಲ್ ಸಂಖ್ಯೆ : ೭೮೯೯೪೩೨೨೨೭ಗೆ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

0 comments:
Post a Comment
Click to see the code!
To insert emoticon you must added at least one space before the code.