ಕೊಪ್ಪಳ-26- ಯುನೆಸೆಪ್ ನ ಸರ್ವೇ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ತಜ್ಞರ ಪ್ರತಿನಿಧಿಗಳ ಬೇಟಿ ದಿ: ೨೬/೧೧/೨೦೧೫ ಗುರುವಾರ ಯತ್ನಟ್ಟಿಯ ಶ್ರೀ ಬಸವರಾಜೇಂದ್ರ ಮಠದ ಆವರಣದಲ್ಲಿ ಗ್ರಾಮ ಪಂಚಾಯತಿ ಓಜನಳ್ಳಿ ವತಿಯಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಯನೆಸೆಪ್‌ನ ಸರ್ವೇ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ತಜ್ಞರ ಪ್ರತಿನಿಧಿಗಳಾದ ಎಫ್.ಫಾರುಕ್, ರುತ್‌ಲಿಯೋನೋ, ಸೋನಿಕುಟ್ಟಿಜಾರ್ಜ, ದೀಪಕ ಆಂಡೋರ್, ಶ್ರೀ ಹರೀಶ ಜೋಗಿ, ಶ್ರೀ ಶಿವರಾಮ, ಶ್ರೀ ಸಂಗಣ್ಣ, ಯುನೆಸೆಪ್ ನ ಸಮುದಾಯ ಸಂಘಟಕರಾದ ಆನಂದ ಹಳ್ಳಿಗುಡಿ ಸಾಮೂಹಿಕ ವಿವಾಹ ಆಯೋಜಕರು ಹಾಗೂ ಮಕ್ಕಳ ರಕ್ಷಣಾ ಸಮಿತಿ ಓಜನಳ್ಳಿ ಇವರೊಂದಿಗೆ ಮಕ್ಕಳ ರಕ್ಷಣಾ ವ್ಯವಸ್ಥೆಯ ಜಾರಿ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯತ್ನಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿ ಭಾಷಣದಲ್ಲಿ ರುತ್‌ಲಿಯೋನೋ ರವರು ಮಕ್ಕಳ ರಕ್ಷಣಾ ವ್ಯವಸ್ಥೆಯ ಜಾರಿಯಲ್ಲಿ ಓಜನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯವನ್ನು ಶ್ಲ್ಯಾಘಿಸಿ ನೀವು ಚೆನ್ನಾಗಿ ಪ್ರಯತ್ನ ಪಡುತ್ತಿದ್ದೀರಿ, ಹೆಚ್ಚಿನ ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ನನಸಾಗಿಲು ಪ್ರಯತ್ನಿಸಬೇಕೆಂದು ಕರೆ ನೀಡಿದರು. ಗ್ರಾಮ ಪಂಚಾಯತ ಅಧ್ಯಕ್ಷರು ಶ್ರೀ ಬಿ.ವಾಯ್.ಯಮನೂರಪ್ಪ ನಾಯಕ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಶಿವವ್ವ ಪೂಜಾರ, ಬಸವರಾಜ ಬಂಡಿಹಾಳ, ಶ್ರೀಮತಿ ಶಿವಗಂಗವ್ವ ಮಂಗಳೂರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿದ್ದಪ್ಪ ಬಿಡನಾಳ, ಶ್ರೀ ಚಿರಂಜೀವಿ ಪೂಜಾರ, ಚೇತನ ಸಂಸ್ಕೃತಿ ಕಲಾ ಸಂಘದ ಶಿವಮೂರ್ತೆಪ್ಪ ಮೇಟಿ ಅವರಿಂದ ಜಾಗೃತಿ ಗೀತೆಗಳನ್ನು ಹಾಡಿದರು. ಯುವ ಚೇತನ ಯುವಕ ಮಂಡಳಿಯ ಶಿವಪುತ್ರಪ್ಪ ಮೇಟಿ, ಪರಶುರಾಮ ನಾಯಕ, ಸುಭಾಷ, ಪಿ.ಡಿ.ಒ
ಶ್ರೀ ಆದಯ್ಯ ಹೇರೂರ, ಶ್ರೀ ಸಿದ್ದೇಶ್ವರ ಸಮಿತಿಯ ದೇವಪ್ಪ ಕುಟಗನಹಳ್ಳಿ, ಸಿ.ಆರ್.ಪಿ ಶ್ರೀ ಅಂದಾನಗೌಡ ಪೊಲೀಸ್ ಪಾಟೀಲ್, ವೀರಯ್ಯ ಜಡಿಮಠ, ಶಿಕ್ಷಕರಾದ ಶ್ರೀ ದೇವಪ್ಪ, ಮೃತ್ಯುಂಜಯ, ಬಸವರಾಜ, ಬಾಲ ವಿಕಾಸ ಅಕಾಡೆಮಿ ಸದಸ್ಯರಾದ ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಕರ್ಕಿಹಳ್ಳಿ, ಶ್ರೀಮತಿ ಅಂಬುಜಾ.ಟಿ, ಶ್ರೀ ಪ್ರಭುರಾಜ, ಶ್ರೀ ಪ್ರಭುರಾಜ.ಬಿ, ಗ್ರಾಮ ಪಂಚಾಯತ ಓಜನಹಳ್ಳಿ ಬಾಲಿಕಾ ಸಂಘದ ಕಿಶೋರಿಯರು, ಎಸ್.ಜೆ.ಪಿ,ಯು ನ ಶ್ರೀ ಸೋಮಶೇಖರ, ಜಗದೀಶ್ವರಯ್ಯ, ಡಿ.ಸಿ.ಪಿ.ಯು ನ ರವಿ ಬಡಿಗೇರ, ೧೦೯೮ ಮಕ್ಕಳ ಸಹಾಯವಾಣಿ ಶ್ರೀ ಶರಣಪ್ಪ ಬಸವರಾಜ, ವಿಸ್ತಾರ ಸಂಸ್ಥೆ ಶ್ರೀ ಸುಧಾಕರ, ಶ್ರೀದೇವಿ ಕಲ್ಬುರ್ಗಿ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಬಸಮ್ಮ, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಯತ್ನಟ್ಟಿ ಗ್ರಾಮದ ಗುರು ಹಿರಿಯರು, ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗ ಹಾಗೂ ಓಜನಹಳ್ಳಿ ಗ್ರಾಮ ಪಂಚಾಯತಿಯ ಎಲ್ಲಾ ಶಾಲೆಯ ಮಕ್ಕಳು, ಕಿಶೋರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳು ಶಾಲೆ ಬಿಟ್ಟ ಕಿಶೋರಿಯರಿಗೆ ಹೋಲಿಗೆ ತರಬೇತಿ, ಆಟದ ಮೈದಾನ, ಶಾಲಾ ರಸ್ತೆ, ಬೆಂಚ್, ಕಂಪ್ಯೂಟರ್, ಶೌಚಾಲಯ ಬಳಕೆ ಬಗ್ಗೆ ಬೇಡಿಕೆ ಪ್ರಸ್ತಾವಿಸಿದರು. ಶ್ರೀ ಆನಂದ ಹಳ್ಳಿಗುಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಿ.ಆರ್.ಪಿ ಶ್ರೀ ಅಂದಾನಗೌಡ ರವರು ಸ್ವಾಗತಿಸಿದರು ಮಕ್ಕಳ ಸಹಾಯವಾಣಿಯ ಶ್ರೀ ಶರಣಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯ ಶಿಕ್ಷಕರಾದ ಶ್ರೀ ವೀರಯ್ಯ ಜಡಿಮಠ ವಂದಿಸಿದರು.
Home
»
Koppal News
»
koppal organisations
» ಮಕ್ಕಳ ಹಕ್ಕುಗಳ ಗ್ರಾಮ ಸಭೆ - ಯತ್ನಟ್ಟಿ ದೆಹಲಿ ಹಾಗೂ ಯುನೆಸೆಪ್ ಪ್ರತಿನಿಧಿಗಳ ಬೇಟಿ.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.