PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ. ನ. ೨೮. ಶಿರಡಿ ಸಾಯಿ ಭಿಕ್ಷಾ ಕೇಂದ್ರ ಹಮ್ಮಿಕೊಂಡಿರುವ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ಶಿಬಿರ ಉತ್ತಮ ಸಮಾಜ ಸೇವೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ನಗರದ ನಗರದ ಹಳೇ ಜಿಲ್ಲಾ ಆಸ್ಪತ್ರೆ ಹತ್ತಿರ ವಿದ್ಯಾನಗರ ಕ್ರಾಸ್‌ನಲ್ಲಿ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವಾರ್ಷಿಕೋತ್ಸವ ನಿಮಿತ್ಯ ಯುವಚೇತನ ಶಿವರಾಜ ತಂಗಡಗಿ ವೇದಿಕೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗದೊಂದಿಗೆ ಹೃದಯ, ಮಧುಮೇಹ, ಸ್ತ್ರೀ ರೋಗ, ಮೂಳೆ ರೋಗ ಕುರಿತು ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಿರಡಿ ಸಾಯಿ ಭಿಕ್ಷಾ ಕೇಂದ್ರ ನಿರಂತರವಾಗಿ ಸಾಮಾಜಿಕ ಸೇವೆ ಮಾಡುತ್ತಿರುವದು ಗಮನಕ್ಕೆ ಬಂದಿದೆ, ಮುಂದಿನ ದಿನಗಳ ಅದಕ್ಕೆ ಸೂಕ್ತ ಸಹಾಯ ಮಾಡುವುದಾಗಿ ಭರವಸೆ ನೀಡಿದ ಅವರು, ಈ ರೀತಿಯ ಶಿಬಿರಗಳಿಂದ ಬಡವರಿಗೆ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ ಎಂದರು. ಕಾರ್ಯಕ್ರಮ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಅಧ್ಯಕ್ಷತೆವಹಿಸಿ ಮಾತನಾಡಿ, ಶಿರಡಿ ಸಾಯಿ ಭಿಕ್ಷಾ ಕೇಂದ್ರ ಎಲ್ಲಾ ರೀತಿಯ ಉಚಿತ ಕಾರ್ಯಗಳನ್ನು ಮಾಡುತ್ತಿದೆ, ಮುದ್ರಾ ರಹಸ್ಯವನ್ನು ಗುರುಗಳು ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದು, ಜನ
    ಹೃದಯಕ್ಕೆ ಸಂಬಂಧಿಸಿದ ಇಸಿಜಿ, ಎಕೋ, ಶುಗರ್ ಮುಂತಾದ ಸುಮಾರು ಹದಿನೈದು ನೂರು ರುಪಾಯಿಗಳ ವೆಚ್ಚದ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ನೂರಾರು ಜನರಿಗೆ ಮಾಡಲಾಯಿತು.
    ನಾರಾಯಣ ಹೃದಯಾಲಯದ ವೈದ್ಯ ಡಾ|| ಮಂಜುನಾಥ ಎಂ.ಬಿ., ಕೀಲು ಮೂಳೆ ವೈದ್ಯ ಡಾ|| ವಿಜಯೆಂದ್ರ ಶಹಪೂರ, ಮಧುಮೇಹ ಮತ್ತು ಪಂಚಕರ್ಮ ವೈದ್ಯ ಡಾ|| ಸುನೀಲ ಅರಳಿ, ಸ್ತ್ರೀರೋಗ ವೈದ್ಯರಾದ ಡಾ|| ರಾಧಿಕಾ ಅರಳಿ, ಸಾಮಾನ್ಯ ರೋಗಗಳ ವೈದ್ಯರಾದ ಡಾ|| ಮಹಮ್ಮದ್ ಮೀರಾಜ್ ಹಾಗೂ ಡಾ|| ಶಿವಕುಮಾರ ಅರಳಿ, ಡಾ|| ಪ್ರಶಾಂತ, ಡಾ|| ಶಿವಕುಮಾರ ಕಂಬಳಿ ಹಾಗೂ ಹೊಮಿಯೋಪಥಿ ವ್ಯದ್ಯ ಡಾ|| ಎಸ್. ಕೆ. ರಾಜೂರ, ಕಲಾವತಿ ಮುನಿರಾಬಾದ್ ಇತರರು ಇದ್ದರು. ನರಸಿಂಹಮೂರ್ತಿ ಆನಂದಕರ್ ಸ್ವಾಗತಿಸಿದರು, ಮಂಜುನಾಥ ರೀಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಜಯಕುಮಾರ ಗೊಂಡಬಾಳ ಪ್ರಾರ್ಥಿಸಿದರು, ಮಧುಸೂದನರೆಡ್ಡಿ ನಿರೂಪಿಸಿದರು, ಮಾರುತಿ ಮುನಿರಾಬಾದ ವಂದಿಸಿದರು.
ರು ಜ್ಯೋತಿಷಿಗಳ ಬಳಿಗೆ ಹೋಗಿ ಹಣ ಕಳೆದುಕೊಳ್ಳದೇ ತಮ್ಮನ್ನು ತಾವೇ ಅರಿತುಕೊಂಡು ನಡೆಯುವ, ವಾಸ್ತುವನ್ನು ತಾವೇ ತಿಳಿದುಕೊಂಡು ತಿದ್ದಿಕೊಳ್ಳುವಂತೆ ಮಾಡುವ ಗುರಿ ಹೊಂದಿದ್ದು, ಹಂತಹಂತವಾಗಿ ಆ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
28 Nov 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top