PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೨೬ (ಕ ವಾ) ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ ತೋಟಗಾರಿಕೆ ಮಹಾವಿದ್ಯಾಲಯಗಳ ೭ ನೇ ಕ್ರೀಡಾಕೂಟವು ನವೆಂಬರ್ ೨೮ ಹಾಗೂ ೨೯ ರಂದು ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಆಟದ ಮೈದಾನದಲ್ಲಿ ಜರುಗಲಿದೆ.
     ಕ್ರೀಡಾಕೂಟದ ಉದ್ಘಾಟನೆಯನ್ನು ತೋಟಗಾರಿಕೆ ವಿವಿ ಕುಲಪತಿ ಡಾ. ಡಿ.ಎಲ್. ಮಹೇಶ್ವರ್ ನೆರವೇರಿಸುವರು.   ಹೆಚ್.ವೈ. ಮೇಟಿ, ಶಾಸಕರು ಹಾಗೂ ತೋವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ರಾಜೀವ ಚಾವ್ಲಾ, ಐ.ಎಸ್.ಎನ್.ಪ್ರಸಾದ್,   ಜೆ.ಟಿ. ಪಾಟೀಲ ಶಾಸಕರು, ಬಸವರಾಜ ಎಸ್. ಹೊರಟ್ಟಿ ವಿಧಾನ ಪರಿಷತ್ ಸದಸ್ಯರು,  ಎಸ್. ಬಿ. ಬೊಮ್ಮನಹಳ್ಳಿ, ಡಾ. ಟಿ.ವ್ಹಿ. ಮುನಿಯಪ್ಪ, ಪಿ.ಎಸ್. ಸುರೇಶ, ಬಾಬು ರಾಜೇಂದ್ರ ನಾಯಕ, ಗೋವಿಂದಪ್ಪ ಗುಜ್ಜನ್ನವರ, ಹೆಚ್. ಕೆ. ಶ್ರೀಕಂಠ,   ಲಕ್ಷ್ಮೀಬಾಯಿ ಜಿ. ಗೌರ್,  ಡಾ. ಎಸ್. ಡಿ. ಸಾವಂತ, ಹಾಗೂ ಡಾ. ಎಚ್. ಬಿ. ಲಿಂಗಯ್ಯ, ಡೀನ್, ತೋಮವಿ, ಬೆಂಗಳೂರು ಡಾ. ಎಂ. ಬಿ. ಮಾಡಲಗೇರಿ, ಕುಲಸಚಿವರು, ಭಾಗವಹಿಸಲಿದ್ದಾರೆ ಎಂದು ಡಾ.ವೈ.ಕೆ. ಕೋಟಿಕಲ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು ಹಾಗೂ ಆಯೋಜನಾ ಅಧ್ಯಕ್ಷರು ಹಾಗೂ ಡಾ. ಆರ್. ಎಮ್. ಹೀರೆಮಠ, ಸಹಾಯಕ ಪ್ರಾಧ್ಯಾಪಕರು ಹಾಗೂ ಆಯೋಜನಾ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷವೂ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿದೆ. ಪ್ರಸಕ್ತ ಸಾಲಿನ ೭ನೇ ಕ್ರೀಡಾಕೂಟವನ್ನು ತೋವಿವಿಯ ಮುಖ್ಯ ಆವರಣದಲ್ಲಿ ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಂಟು ಮಹಾವಿದ್ಯಾಲಯಗಳಾದ ತೋ.ಮ.ವಿ ಅರಭಾವಿ, ಬಾಗಲಕೋಟ, ಬೆಂಗಳೂರು, ಬೀದರ್, ಕೋಲಾರ್, ಮುನಿರಾಬಾದ್(ಕೊಪ್ಪಳ), ಮೈಸೂರು, ಶಿರಸಿಗಳಿಂದ ತಲಾ ೫೦ ರಂತೆ ಒಟ್ಟು ೪೦೦ ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಆಟೋಟ ಸ್ಪರ್ಧೆಗಳ ಜೊತೆಗೆ ಟೇಬಲ್ ಟೆನ್ನಸ್, ಶಟಲ್‌ಬ್ಯಾಡ್‌ಮಿಂಟನ್ ಸ್ಪರ್ಧೆಗಳು ಕೂಡ ಜರುಗಲಿವೆ.

26 Nov 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top