PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೧೯ (ಕ ವಾ) ಕೃಷಿಯಲ್ಲಿ ರೈತರು ಅನವಶ್ಯಕ ವೆಚ್ಚವನ್ನು ನಿಯಂತ್ರಿಸಿದಲ್ಲಿ, ಕೃಷಿ ಲಾಭದಾಯಕವಾಗಲು ಸಹಕಾರಿಯಾಗಲಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ. ಎ. ರಾಮದಾಸ್ ಅವರು ಅಭಿಪ್ರಾಯಪಟ್ಟರು.
     ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಸಿರಗುಪ್ಪ, ಕೃಷಿ ಇಲಾಖೆ ಹಾಗೂ ಹೈದರಾಬಾದ ಇವರ ಆಶ್ರಯದಲ್ಲಿ ಜಿಲ್ಲೆಯ ಕೃಷಿ ಅಧಿಕಾರಿಗಳಿಗೆ ಮೆಕ್ಕೆಜೋಳ ಪೋಷಕಾಂಶ ನಿರ್ವಹಣೆಯ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
       ಕೃಷಿಯಲ್ಲಿ ಅನವಶ್ಯಕ ವೆಚ್ಚ ನಿಯಂತ್ರಿಸಿದರೆ ಕೃಷಿ ಲಾಭದಾಯಕವಾಗಲಿದೆ.  ದುಬಾರಿಯಾದಂತಹ ರಸಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರ ಜೊತೆಗೆ, ಇದರಲ್ಲಿ ರೋಗ ಮತ್ತು ಕೀಟಬಾಧೆ ಹೆಚ್ಚಾಗಿ ಕಾಡಲಿದೆ.  ಸಾವಯವ ಕೃಷಿ ಪದ್ಧತಿ ಕೃಷಿಯನ್ನು ಲಾಭದಾಯಕವಾಗಿಸಲು ಸಹಕಾರಿಯಾಗಲಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅಭಿಪ್ರಾಯಪಟ್ಟರು.
      ಅಂತರ ರಾಷ್ಟ್ರೀಯ ಸಸ್ಯ ಪೋಷಕಾಂಶಗಳ ಸಂಸ್ಥೆ ನಿರ್ದೇಶಕ ಡಾ. ಟಿ. ಸತ್ಯನಾರಾ
     ವಿಸ್ತರಣಾ ಮುಂದಾಳು, ಡಾ. ಎಮ್. ಬಿ. ಪಾಟೀಲ ರವರು ಅಧ್ಯಕ್ಷತೆ ವಹಿಸಿ ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕಜೋಳವು ಮುಖ್ಯ ಬೆಳೆಯಾಗಿದ್ದು, ಅದಕ್ಕೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ತಿಳಿಸಿದರು.  ಡಾ. ಬಸವಣ್ಣೆಪ್ಪ, ಆವರಣ ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಸಿರಗುಪ್ಪ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಎಸ್.ಎನ್.ಭಟ್ಟ ರವರು ಜಿಲ್ಲೆಯ ಮಣ್ಣಿನ ಪೋಷಕಾಂಶಗಳ ಕೊರತೆ ಹಾಗೂ ನಿರ್ವಹಣೆ ಬಗ್ಗೆ ತಿಳಿಸಿದರು.  ಡಾ. ಸಿ.ಎಮ್. ಕಾಲಿಬಾವಿ, ವಿಸ್ತರಣಾ ಮುಂದಾಳು, ಕೃವಿಶಿಕೇಂದ್ರ, ಹಡಗಲಿ, ಡಾ. ಅಶೋಕ ಕುಮಾರ್ ಗಡ್ಡಿ, ಮಣ್ಣು ಮತ್ತು ನೀರು ವಿಜ್ಞಾನಿಗಳು, ಕೃಸಂಕೇ, ಸಿರಗುಪ್ಪ, ಡಾ. ರೂಪಶ್ರೀ, ವಿಷಯ ತಜ್ಞರು, ಕೃವಿಕೇ, ಗಂಗಾವತಿ ರವರು ಉಪಸ್ಥಿತರಿದ್ದರು,   ಕವಿತಾ ಉಳ್ಳಿಕಾಶಿ   ವಂದಿಸಿದರು, ಯುಸೂಫಅಲಿ ನಿಂಬರಗಿ ರವರು ಕಾರ್ಯಕ್ರಮ ನಿರೂಪಿಸಿದರು.
ಯಣ ರವರು ಮಾತನಾಡಿ ರೈತರಿಗೆ ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸುವುದು ಮತ್ತು ಅದನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಬೆಳೆಗಳಿಗೆ ಸೂಕ್ತ ಪೋಷಕಾಂಶಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೆರವಾಗುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು. 

Advertisement

0 comments:

Post a Comment

 
Top