ಕೊಪ್ಪಳ,
ನ.೦೫ (ಕ ವಾ) ರಾಜ್ಯ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರ ಹಜರತ್
ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನ.೧೦ ರಂದು ರಾಜ್ಯಾದ್ಯಂತ
ಆಚರಿಸಲು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸಾರ್ವಜನಿಕರು ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ, ಅವರ ಜೀವನ ಚರಿತ್ರೆ, ತ್ಯಾಗ, ಬಲಿದಾನ ಮನೋಭಾವ ಹಾಗೂ ಅವರ ಸೌಹಾರ್ದತೆಯ ಬಗ್ಗೆ ತಿಳಿದುಕೊಂಡು ಜಯಂತ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಷಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕನಕಗಿರಿ ಪಟ್ಟಣ ಪಂಚಾಯಿತಿ ವಾರ್ಡುಗಳ ವ್ಯಾಪ್ತಿ ನಿಗದಿ ಆಕ್ಷೇಪಣೆಗಳಿಗೆ ಆಹ್ವಾನ.
ಕೊಪ್ಪಳ, ನ. ೦೫ (ಕ ವಾ) ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿ ಪಟ್ಟಣ ಪಂಚಾಯಿತಿಯ ಎಲ್ಲಾ ೧೭ ವಾರ್ಡುಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ವಿಂಗಡಣೆಯನ್ನು ಅಂತಿಮಗೊಳಿಸಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಕನಕಗಿರಿ ಪಟ್ಟಣ ಪಂಚಾಯಿತಿಯನ್ನು ೨೦೧೧ ರ ಜನಗಣತಿ ಆಧಾರದ ಮೇರೆಗೆ ಕ್ಷೇತ್ರ ವಿಂಗಡಣೆ ಮಾಡಲಾಗಿದ್ದು, ವಿಂಗಡಣೆ ಮಾಡಲಾಗಿರುವ ವಿವರ ಈ ಕೆಳಗಿನಂತಿದೆ.
ವಾರ್ಡ್ ನಂ.೦೧ ರಲ್ಲಿ ಸೂಪರ್ ಲಾಡ್ಜ್, ಕೆ.ಇ.ಬಿ, ಪಶು ಆಸ್ಪತ್ರೆ, ಬಡಿಗೇರ ಓಣಿ, ಹರಿಜನ ಕೇರಿ ಹಾಗೂ ಕೆಲವು ಮುಸ್ಲಿಂ ಮನೆಗಳು, ವಾರ್ಡ್ ನಂ.೦೨ ರಲ್ಲಿ ನಾಯಕರ ಓಣಿ, ಗೌಡ್ರ ಓಣಿ, ವಾರ್ಡ್ ನಂ.೦೩ ರಲ್ಲಿ ಗಂಗಾ ಕ್ಯಾಂಪ್, ಇಂದಿರಾ ನಗರ (ಅರ್ಧ) ಪೊಲೀಸ್ ಕ್ವಾಟ್ರಸ್, ಎ.ಪಿ.ಎಮ್.ಸಿ ಮುಂದಿನ ಮನೆಗಳು, ತೆಗ್ಗಿಹಾಳ ಇವರ ಮನೆಗಳು, ಕೊಂಡಪೇಟೆ (ಸಂಜೀವಿನಿ ನಗರ), ವಾರ್ಡ್ ನಂ.೦೪ ರಲ್ಲಿ ಇಂದಿರಾ ನಗರ, ನಂದಿ ಟಾಕೀಸ್, ಶಿವಾಜಿ ನಗರ, ವಾರ್ಡ್ ನಂ.೦೫ ರಲ್ಲಿ ವಾಲ್ಮೀಕಿ ನಗರ, ಪೊಲೀಸ್ ಸ್ಟೇಷನ್, ಸುವರ್ಣಗಿರಿ ನಗರ, ತಂಗಡಗಿ ನಗರ, ಮಹಿಬೂಬ ನಗರ, ವಾರ್ಡ್ ನಂ.೦೬ ರಲ್ಲಿ ಗುಡಿ ಹಿಂದ್ಲರ ಓಣಿ, ಮುಲ್ಲಾರ ಓಣಿ, ಗೌಳಿ ಓಣಿ, ವಾರ್ಡ್ ನಂ.೦೭ ರಲ್ಲಿ ಭಾಗವಾನ ಓಣಿ, ಹತ್ತೇತ ಓಣಿ, ಗೋರಾಳ ಕೇರಿ, ವಾರ್ಡ್ ನಂ.೦೮ ರಲ್ಲಿ ಚೆಕ್ ಪೋಸ್ಟ್ ಏರಿಯಾ, ಚಲುವಾದಿ ಓಣಿ, ವಾರ್ಡ್ ನಂ.೦೯ ರಲ್ಲಿ ಸುಳೇಕಲ್ ಓಣಿ, ಪಿಂಜಾರ ಓಣಿ, ದ್ಯಾಮವ್ವನಗುಡಿ ಏರಿಯಾ, ವಾರ್ಡ್ ನಂ.೧೦ ರಲ್ಲಿ ಕಮ್ಮಾರ ಓಣಿ, ಎಲಿಗಾರ ಓಣಿ, ಸಜ್ಜನ ಓಣಿ, ಭಾವಿಕಟ್ಟಿ ಓಣಿ ಪ್ರದೇಶಗಳನ್ನು ಸೇರಿಸಲಾಗಿದೆ.
ವಾರ್ಡ್ ನಂ.೧೧ ರಲ್ಲಿ ಶಾರದರ ಓಣಿ, ಕೊಡ್ಲೇರ ಓಣಿ, ರಡ್ಡೇರ ಓಣಿ, ವಾರ್ಡ್ ನಂ.೧೨ ರಲ್ಲಿ ತೆಗ್ಗಿನಮನಿ ಓಣಿ, ಕೋರೇರ ಓಣಿ, ಜೂಲಕೇರಿ ಓಣಿ, ಮಡಿವಾಳರ ಓಣಿ, ಭೋವಿ ಓಣಿ, ಆರೇರ ಓಣಿ, ಮೋಚಿ ಓಣಿ, ವಾರ್ಡ್ ನಂ.೧೩ ರಲ್ಲಿ ಚಿತ್ರಗಾರ ಓಣಿ, ಬ್ರಾಹ್ಮಣರ ಓಣಿ, ತಾಷಾಬಡಿ ಓಣಿ, ಬಳಿಗಾರ ಓಣಿ, ಪಲ್ಲೇದರ ಓಣಿ, ಹಳೇ ಪೋಸ್ಟ್ ಏರಿಯಾ, ಎದುರು ಹನುಮಪ್ಪ ದೇವಸ್ಥಾನದ ಏರಿಯಾ, ವಾರ್ಡ್ ನಂ.೧೪ ರಲ್ಲಿ ಗಂಗಾಮಾತಾ ಓಣಿ, ಬುಕಟಿಗಾರ ಓಣಿ, ಭಜಂತ್ರಿ ಓಣಿ, ನೇಕಾರ ಓಣಿ, ವಾರ್ಡ್ ನಂ.೧೫ ರಲ್ಲಿ ಮೋಚಿ ಓಣಿ, ದಾಸರ ಓಣಿ, ಗೊಲ್ಲರ ಓಣಿ, ಚೌಡ್ಕೇರ ಓಣಿ, ವಾರ್ಡ್ ನಂ.೧೬ ರಲ್ಲಿ ಮಲ್ಲಯ್ಯ ತಾತಾ ಕಾಲೋನಿ, ಸಂತ್ರಾಸ ಓಣಿ, ವಾರ್ಡ್ ನಂ.೧೭ ರಲ್ಲಿ ಸ್ವಾಮೇರ ಗದ್ದಿ, ಗೊಲ್ಲಗೇರಪ್ಪ ಕಾಲೋನಿ ಪ್ರದೇಶಗಳನ್ನು ಸೇರಿಸಿ, ಈ ರೀತಿಯಾಗಿ ಕ್ಷೇತ್ರ ವಿಂಗಡಗಣೆ ಮಾಡಲಾಗಿದೆ.
ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ, ಸಹಾಯಕ ಆಯುಕ್ತರ ಕಚೇರಿ, ಕೊಪ್ಪಳ, ತಹಸಿಲ್ದಾರರ ಕಚೇರಿ, ಗಂಗಾವತಿ ಹಾಗೂ ಪಟ್ಟಣ ಪಂಚಾಯಿತಿ ಕನಕಗಿರಿ ಕಾರ್ಯಾಲಯದ ನೋಟಿಸ್ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ವಾರ್ಡುಗಳ ವಿಂಗಡಣೆ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರಲ್ಲಿ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆ, ಸೂಚನೆಗಳು ಇದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ರೂಪದಲ್ಲಿ ತಮ್ಮ ಪೂರ್ಣ ವಿಳಾಸದೊಂದಿಗೆ ಕೊಪ್ಪಳ ಉಪವಿಭಾಗಾಧಿಕಾರಿಗಳ ಕಛೇರಿಗೆ ನವೆಂಬರ್.೧೮ ರೊಳಗಾಗಿ ಸಲ್ಲಿಸಬಹುದಾಗಿದೆ. ನಂತರ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್‌ಸಾಹೇಬ್ ಶಿರಹಟ್ಟಿ ಅವರು ತಿಳಿಸಿದ್ದಾರೆ.

0 comments:
Post a Comment