ಕೊಪ್ಪಳ
ನ. ೦೪ (ಕ ವಾ)ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮ ಪಿ.ಯು.ಸಿ. ಮಧ್ಯವಾರ್ಷಿಕ
ಪರೀಕ್ಷೆಯ ಕೆಲ ವಿಷಯಗಳ ಪರೀಕ್ಷಾ ದಿನಾಂಕಗಳನ್ನು ಪರಿಷ್ಕರಿಸಲಾಗಿದ್ದು, ನ. ೦೬ ರಂದು
ನಡೆಸಬೇಕಿದ್ದ ಅರ್ಥಶಾಸ್ತ್ರ/ರಸಾಯನಶಾಸ್ತ್ರ ಪರೀಕ್ಷೆಯನ್ನು ನ. ೧೭ ರಂದು ಹಾಗೂ ನ. ೧೧
ರಂದ ನಡೆಸಬೇಕಿದ್ದ ಭೂಗೋಳಶಾಸ್ತ್ರ/ಶಿಕ್ಷಣ/ವ್ಯ.ಅಧ್ಯಯನ ಪರೀಕ್ಷೆಯನ್ನು ನ. ೧೮ ರಂದು
ನಡೆಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಪ.ಪೂ. ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ
ಎ.ಜಿ. ಶರಣಪ್ಪ ಅವರು ತಿಳಿಸಿದ್ದಾರೆ.
ಇದೇ ನ. ೦೬ ರಂದು ಘೋಷಿತ ಕೊಪ್ಪಳ ಬಂದ್, ಹಾಗೂ ನ. ೧೧ ರಂದು ದೀಪಾವಳಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ, ಈಗಾಗಲೆ ಜಿಲ್ಲೆಯಲ್ಲಿ ನ. ೧೧ ರಿಂದ ಪ್ರಾರಂಭವಾಗಿರುವ ಪ್ರಥಮ ಪಿಯುಸಿ ತರಗತಿಗಳ ಮಧ್ಯವಾರ್ಷಿಕ ಪರೀಕ್ಷೆಯ ಕೆಲ ವಿಷಯಗಳ ಪರೀಕ್ಷಾ ದಿನಾಂಕಗಳನ್ನು ಪರಿಷ್ಕರಿಸಿ ಮುಂದೂಡಲಾಗಿದೆ. ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಗಮನಿಸಿ, ಪರಿಷ್ಕೃತ ದಿನಾಂಕಗಳಂತೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಜಿಲ್ಲಾ ಪ.ಪೂ. ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಎ.ಜಿ. ಶರಣಪ್ಪ ಅವರು ತಿಳಿಸಿದ್ದಾರೆ.

0 comments:
Post a Comment