PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೦೫ (ಕ ವಾ) ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿ ೬೩ ರ ಇಕ್ಕೆಲಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಜೊತೆಗೆ ರಸ್ತೆ ಒತ್ತುವರಿಯನ್ನು ತ್ವರಿತವಾಗಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ನಗರದಲ್ಲಿ ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಕ್ರೀಡಾಂಗಣದವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಸ್ವಚ್ಛತೆಯ ಕುರಿತು ಬೆಳ್ಳಂಬೆಳಿಗ್ಗೆ ಜಿಲ್ಲಾಧಿಕಾರಿಗಳು ನಗರ ಸಂಚಾರ ಕೈಗೊಂಡರು.
     ಜಿಲ್ಲಾಧಿಕಾರಿಗಳ ಕಚೇರಿ ಬಳಿಯಿಂದಲೇ ಹೆದ್ದಾರಿ ಕಾಮಗಾರಿ ವೀಕ್ಷಣೆ ಪ್ರಾರಂಭಿಸಿದ ಜಿಲ್ಲಾಧಿಕಾರಿಗಳು, ಹೆದ್ದಾರಿಯ ಪಕ್ಕದಲ್ಲಿ ಯುಜಿಡಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಎತ್ತರದ ಮಟ್ಟದಲ್ಲಿ ನಿರ್ಮಿಸಿರುವ ಛೇಂಬರ್‌ಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ,  ಕೂಡಲೆ ಇದನ್ನು ಸರಿಪಡಿಸಿ, ರಸ್ತೆಗೆ ಸಮಾಂತರವಾಗಿ ಛೇಂಬರ್ ನಿರ್ಮಾಣವಾಗಬೇಕು.  ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಲಾಗಿರುವ ಚರಂಡಿಗಳೂ ಸಹ ರಸ್ತೆಗಿಂತ ಎತ್ತರ ಮಟ್ಟದಲ್ಲಿದ್ದು, ಮಳೆಯ ನೀರು ಸಮರ್ಪಕವಾಗಿ ಹರಿಯಲು ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು.  ಚರಂಡಿಗಳ ಮೇಲ್ಭಾಗದಲ್ಲಿ ಬಹಳಷ್ಟು ಕಡೆ ಸ್ಲ್ಯಾಬ್ ಗಳಿಂದ ಮುಚ್ಚದೆ ಹಾಗೆಯೇ ತೆರೆದುಕೊಂಡಿವೆ.  ಇವುಗಳನ್ನು ಸಮರ್ಪಕವಾಗಿ ಮುಚ್ಚಲು ಪ್ರಾಣಹಾನಿ ಆಗುವವರೆಗೂ ಕಾಯಬೇಕೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ಹದಿನೈದು ದಿನಗಳ ಒಳಗಾಗಿ ನಗರದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿನ ಚರಂಡಿಗಳಿಗೆ ಸಂಪೂರ್ಣವಾಗಿ ಸ್ಲ್ಯಾಬ್‌ಗಳನ್ನು ಸಮರ್ಪಕವಾಗಿ ಹಾಕಿ ಮುಚ್ಚಬೇಕು ಎಂದು ನಿರ್ಮಿತಿ ಕೇಂದ್ರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಸ್ತೆಗೆ ಹಾಕಿದರೆ ದಂಡ : ನಗರದ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಹಲವಾರು ನೂತನ ಕಟ್ಟಡಗಳ ನಿರ್ಮಾಣ ಕಾರ್ಯ ಜರುಗಿದ್ದು, ಕಟ್ಟಡಗಳ ನಿರ್ಮಾಣಕ್ಕಾಗಿ ಮರಳು, ಇಟ್ಟಂಗಿ, ಕಲ್ಲು ಮಣ್ಣು ಇತ್ಯಾದಿ ಸಾಮಗ್ರಿಗಳನ್ನು ರಸ್ತೆಯ ಮೇಲೆ ಹಾಕುತ್ತಿದ್ದು, ಇದರಿಂದಾಗಿ ರಸ್ತೆಯ ಮೇಲೆ ಮರಳು ಮಿಶ್ರಿತ ಮಣ್ಣು ಹರಿದು ಬರುತ್ತಿದೆ.  ಇದರಿಂದಾಗಿ ಧೂಳು ಮುಕ್ತಿ ಸಾಧ್ಯವಾಗುತ್ತಿಲ್ಲ.  ನಗರಸಭೆ ಅಧಿಕಾರಿಗಳು ಇದಕ್ಕೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ರಸ್ತೆಯ ಮೇಲಿರುವ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕೂಡಲೆ ತೆರವುಗೊಳಿಸಿ, ಅಂತಹ ಕಟ್ಟಡಗಳ ಮಾಲೀಕರಿಗೆ ಸಾಮಗ್ರಿಯ ವೆಚ್ಚ, ತೆರವುಗೊಳಿಸುವ ಕೂಲಿ ವೆಚ್ಚ ಹಾಗೂ ದಂಡವನ್ನು ವಿಧಿಸುವಂತೆ ಸ್ಥಳದಲ್ಲಿಯೇ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಅವರಿಗೆ ಸೂಚನೆ ನೀಡಿದರು. 
ಬಸ್‌ನಿಲ್ದಾಣ ಸ್ವಚ್ಛವಾಗಿಡಿ : ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿನ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಅನೈರ್ಮಲ್ಯ ಪರಿಸರ ಕಂಡು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಬಸ್ ನಿಲ್ದಾಣದ ಮುಂಭಾಗದಲ್ಲಿ ನಗರಸಾರಿಗೆ ಬಸ್ ಸಂಚರಿಸುವ ಮಾರ್ಗ ಕಚ್ಚಾ ರಸ್ತೆಯಾಗಿದ್ದು, ಕೂಡಲೆ ಅದನ್ನು ಸಿಸಿ ರಸ್ತೆಯನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಕಾಲುವೆ ಹೂಳು ತೆಗೆಸಲು ಸೂಚನೆ : ಕೊಪ್ಪಳ ನಗರದ ಟಾಂಗಾಕೂಟ ಸ
     ಜಿಲ್ಲಾಧಿಕಾರಿಗಳು ಕೈಗೊಂಡ ನಗರ ಸಂಚಾರ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್. ಪೂಬಾಲನ್, ಯುಜಿಡಿ ಕಾಮಗಾರಿ, ನಿರ್ಮಿತಿ ಕೇಂದ್ರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ರ್ಕಲ್ ಬಳಿಯಿಂದ ನಗರ ಪೊಲೀಸ್ ಠಾಣೆ ಹಾಗೂ ಬಸ್ ನಿಲ್ದಾಣ ಬಳಿಯ ವರೆಗಿನ ರಾಜ ಕಾಲುವೆಯಲ್ಲಿ ಬಹಳಷ್ಟು ಹೂಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದೆ.  ಅಲ್ಲದೆ ಅಲ್ಲಲ್ಲಿ ರಾಜಕಾಲುವೆ ಒತ್ತುವರಿಯಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ.  ರಾಜಕಾಲುವೆ ಒತ್ತುವರಿಯಾಗಿರುವ ಪ್ರದೇಶಗಳನ್ನು ಗುರುತಿಸಿ, ಅದನ್ನು ಕೂಡಲೆ ತೆರವುಗೊಳಿಸಬೇಕು.  ಅಲ್ಲದೆ ಹೂಳು ತೆಗೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

0 comments:

Post a Comment

 
Top