PLEASE LOGIN TO KANNADANET.COM FOR REGULAR NEWS-UPDATES

ಭಾರತದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಪ್ರತಿ ವರ್ಷವೂ ಕುಸಿಯುತ್ತಾ ಬರುತ್ತಿದೆ. ಸ್ವಾತಂತ್ರ್ಯ ದೊರಕಿ 68 ವರ್ಷ ಗತಿಸಿದರೂ ಉನ್ನತ ಶಿಕ್ಷಣ ಗಗನ ಕುಸುನವಾಗಿಯೇ ಉಳಿದಿದೆ. 17 ರಿಂದ 25 ವರ್ಷ ವಯೋಮಾನದವರಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ 11% ರಷ್ಟು ದಾಟಿಯೇ ಇಲ್ಲ. ಉನ್ನತ ಶಿಕ್ಷಣದ ಆಳವಾದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇದರ ನಡುವೆಯೇ ಭಾರತ ಸರಕಾರ ಉನ್ನತ ಶಿಕ್ಷಣವನ್ನು wto ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವುದು ಆತಂಕವನ್ನು ಸೃಷ್ಟಿಸಿದೆ.

2005 ರಲ್ಲಿ ಭಾರತ ಸರಕಾರ ನಮ್ಮ ಉನ್ನತ ಶಿಕ್ಷಣವನ್ನು ಜಾಗತಿಕ ಮಾರುಕಟ್ಟೆಗೆ ಅವಕಾಶ ನೀಡಲು ಒಪ್ಪಿಗೆಯನ್ನು ಸೂಚಿಸಿತ್ತು. ಆ ಒಪ್ಪಿಗೆಯನ್ನು ಒಪ್ಪಂದವಾಗಿಸಲು ಈಗ WTO ಗೆ ಸಹಿ ಹಾಕಲು ಕೇಂದ್ರ ಸರಕಾರ ಮುಂದಾಗಿದೆ. WTO ವ್ಯಾಪ್ತಿಗೆ ಭಾರತ ಸೇರಿದಂತೆ 161 ರಾಷ್ಟ್ರಗಳಿವೆ. 2015 ರ ಡಿಸೆಂಬರ್ 15 ರಿಂದ 18 ರವರೆಗೆ ನೈರೋಭಿಯಲ್ಲಿ ನಡೆಯಲಿರುವ WTO ನ 10 ನೇ ‘ಸಚಿವ ಸಭೆ’ಯಲ್ಲಿ ಮಾರುಕಟ್ಟೆಗೆ ಅನುಕೂಲವಾಗುವ ರೀತಿಯಲ್ಲಿ ಉನ್ನತ ಶಿಕ್ಷಣ ಮಾರಾಟ ಮಾಡುವ ಒಪ್ಪಂದಕ್ಕೆ ಭಾರತ ದೇಶ ಸಹಿ ಹಾಕಲಿದೆ. ಉನ್ನತ ಶಿಕ್ಷಣದ ಜೊತೆಯಲ್ಲಿಯೇ ದೇಶದ ಸಂಪತ್ತಾದ ವಿದ್ಯತ್, ನೀರು, ಸಾರಿಗೆ, ಭೂಮಿಯನ್ನು ಎಂ.ಎನ್.ಸಿ ಕಂಪನಿಗಳಿಗೆ ಮಾರಾಟ ಮಾಡಲು ಒಪ್ಪಿಗೆಯನ್ನು ಸೂಚಿಸಲಿದ್ದು ದೇಶವನ್ನು ಗಂಡಾಂತರಕ್ಕೆ ತಳ್ಳುವ ಕೆಲಸ ಆರಂಭವಾಗಲಿದೆ. ಈಗಾಗಲೇ WTO ನ ಶರತ್ತುಗಳಿಗೆ ಒಳಪಟ್ಟಿದ್ದ ಅಮೇರಿಕಾ, ಬ್ರಿಟನ್, ನಾರ್ವೆ ಮುಂತಾದ ದೇಶಗಳು wto ನಿಂದ ಹೊರಬರುತ್ತಿವೆ. WTOನ ಪರಿಣಾಮವಾಗಿ ಶಿಕ್ಷಣ ಮಾರಾಟದ ಸರಕಾಗಿ ದೇಶದ ಪ್ರತಿಭೆಗಳು ಪಲಾಯನವಾಗುತ್ತಿವೆ. ದೇಶೀಯ ಶಿಕ್ಷಣ ಪದ್ದತಿ ಅನಾರೋಗ್ಯಕ್ಕೆ ತುತ್ತಾಗಿದೆ ಎಂಬ ಕಾರಣಗಳಿಂದ ಹೊರ ಬರುತ್ತಿವೆ. ಭಾರತಕ್ಕೆ ಈ ದೇಶಗಳು ಅಪಾಯದಲ್ಲಿ ಸಿಲುಕಿ ಬದಲಾವಣೆ ಬಯಸುತ್ತಿರುವುದು ಕಾಣುತ್ತಿಲ್ಲವೆನಿಸುತ್ತದೆ.
WTO ಅಪಾಯಗಳು : ಡಬ್ಲ್ಯೂ.ಟಿ.ಓ ಪ್ರೇರಿತ ಉನ್ನತ ಶಿಕ್ಷಣ, ನವ ಹೊಸಾಹುತೀಕರಣದ ಪ್ರಯತ್ನಗಳ ನೇರ ಪರಿಣಾಮವಾಗಿ ಸಾಮ್ರಾಜ್ಯ ಶಾಹಿ ಶಕ್ತಿಗಳು ದೇಶದ ವಿದ್ಯಾಭ್ಯಾಸದ ಪದ್ದತಿಯನ್ನು ನಿರ್ಣಾಮಗೊಳಿಸಿ ಪಾಶ್ಚಿಮಾತ್ಯ ಶ್ರೀಮಂತ ರಾಷ್ಟ್ರಗಳ ಪ್ರಭಾವದಿಂದಾಗಿ, ಬಂಡವಾಳಶಾಹಿ ತಾತ್ವಿಕ ದರ್ಶನ ಮತ್ತು ಮೌಲ್ಯ ಪದ್ದತಿಗಳನ್ನು ಏಕರೂಪವಾಗಿ ಎಲ್ಲಡೆ ಹರಡಲೂ ಹಾಕಿ ಕೊಂಡಿರುವ ಕಾರ್ಯಯೋಜನೆಯಾಗಿದೆ. ಈ ಶಿಕ್ಷಣ ಪದ್ದತಿಯಲ್ಲಿ ವಿದ್ಯೆಯು ಸಾಮಾಜಿಕ ಸಂಪತ್ತಾಗಿ ಉಳಿಯುವುದಿಲ್ಲ. ಭಾಷೆ, ಕಲಿಕೆ, ಕೌಶಲ್ಯ, ಜ್ಷಾನ, ಪರಿಣತಿ, ಸಂಶೋಧನಾ ಸಾಮಾರ್ಥ್ಯ ಸಂಶೋಧನಾ ವಿಷಯಗಳು ಹೀಗೆ ಎಲ್ಲವನ್ನು ನಿಯಂತ್ರಿಸುವ ಬಲಿಷ್ಟ ಸಂಸ್ಥೆಯಾಗುತ್ತದೆ.  ಸಬಲರು ಮತ್ತು ದುರ್ಬಲರ ನಡುವೆ ನಡೆಯುವ ಕೊಡು- ಕೊಳ್ಳುವಿಕೆ ಒಪ್ಪಂದ ಸಬಲರಿಗೆ ಲಾಭವಾಗಿ, ದುರ್ಬಲರಿಗೆ ಆಘಾತವಾಗಿ ಕಂಡ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಕೊನೆಗೆ ಶಿಕ್ಷಣ ವಹಿವಾಟಾಗಿ ಜ್ಞಾನೋಧ್ಯಮವಾಗಿ ಬೆಳೆಯುತ್ತದೆ.  ಶಿಕ್ಷಕರು ಜ್ಞಾನ ಕಾರ್ಮಿಕರಾಗಿ ಬದಲಾಗುತ್ತಾರೆ. ವಿದ್ಯಾರ್ಥಿಗಳು ಗಿರಾಕಿಗಳಾಗಿ ಮಾರುಕಟ್ಟೆಯಲ್ಲಿ ಬಿಕರಿಗೊಳ್ಳಬೇಕಾದ ಸರಕುಗಳಾಗುತ್ತವೆ.
ಡಬ್ಲ್ಯೂ.ಟಿ.ಓ ಪ್ರೇರಿತ ಉನ್ನತ ಶಿಕ್ಷಣ ಪದ್ದತಿಯು ಸರಕಾರದ ನಿಯಂತ್ರಣ ತಪ್ಪಿ , ಜಾಗತಿಕ ವ್ಯಾಪಾರೀಗಳ ಕೈಗೆ ಸಿಲುಕುತ್ತದೆ. ದೇಶಿಯ ನೆಲದಲ್ಲಿ ಕಾರ್ಯ ನಿರ್ವಹಿಸುವ ವಿದೇಶಿ ಸಂಸ್ಥೆಗಳಿಗೆ ದೇಶೀಯ ಸಂಸ್ಥೆಗಳಿಗೆ ನೀಡುವ ಮಾನ್ಯತೆಯನ್ನು ಕೊಡಬೇಕು ಎಂಬುದು ಡಬ್ಲ್ಯೂ.ಟಿ.ಓ ನ ಶರತ್ತುಗಳಲ್ಲಿ ಒಂದಾಗಿದೆ. ಒಟ್ಟನಲ್ಲಿ ದೇಶೀಯ ಶಿಕ್ಷಣ ಪದ್ದತಿಗೆ ತಿಲಾಂಜಲಿ ಹಾಡಿ, ಪ್ರತಿಭೆಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಕೇಂದ್ರ ಸರಕಾರದ ಕ್ರಮ ದೇಶ ವಿರೋಧಿಯಾಗಿದೆ.
ಮೋಧಿ ಪ್ರಧಾನಿಯೋ ? ವ್ಯಾಪಾರಿಯೋ ? : ನಮ್ಮ ದೇಶದ ಪ್ರಧಾನಿ ವ್ಯಾಪಾರೀಯೋ ಅಥವಾ ಪ್ರಧಾನಿಯೋ ಎಂಬ ಗೊಂದಲ ದೇಶದ ಜನರಲ್ಲಿ ಶುರುವಾಗಿದೆ. ದೇಶವನ್ನು, ದೇಶದ ಜನರನ್ನು, ದೇಶದ ಶಿಕ್ಷಣವನ್ನು ಕಾಪಾಡಬೇಕಿದ್ದ ಪ್ರಧಾನ ಮಂತ್ರಿ, ವಿದೇಶಗಳನ್ನೆಲ್ಲಾ ಸುತ್ತಿ ಅಲ್ಲಿಯ ಶ್ರೀಮಂತರನ್ನು ಭಾರತದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವಂತೆ ಕೇಳುತ್ತಿದ್ದಾರೆ. ಗುಲಾಮಗಿರಿ ವಿರುದ್ಧ ಹೋರಾಟ ನಡೆಸಿ ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ್ಯ ಕೊಡಿಸಿದ ಹುತಾತ್ಮರ ಭೂಮಿಗೆ ಮತ್ತೆ ವಿದೇಶಿಗರನ್ನು ವ್ಯಾಪಾರಕ್ಕೆಂದು ಕರೆ ತಂದು ನಮ್ಮನ್ನೆಲ್ಲಾ ಗುಲಾಮಗಿರಿಗೆ ತಳ್ಳುವ ದಿನಗಳನ್ನು ನೀಡುತ್ತಿದ್ದಾರೆ. ಮೋಧಿಯ ಈ ನಡೆಯನ್ನು ವ್ಯಾಪಕವಾಗಿ ವಿರೋಧಿಸಬೇಕಿದೆ.
ಚಳುವಳಿಯೇ ದಾರಿ : ಸೇಲ್ಸ್ ಮ್ಯಾನ್ ಮೋಧಿಯ ಕೇಂದ್ರ ಸರಕಾರದ ಕ್ರಮವನ್ನು ತಡೆಯಬೇಕಾದರೆ ಚಳುವಳಿಯೇ ಅದಕ್ಕಿರುವ ದಾರಿಯಾಗಿದೆ. ಈ ಹಿಂದೆ ಗ್ಯಾಟ್ಸ್ ಒಪ್ಪಂದ ವಿರೋಧಿಸಿ ನಡೆದ ಹೋರಾಟ ಹಾಗೂ ಭಾರತ ಬಿಟ್ಟು ತೊಲಗಿ ರೀತಿಯ ಚಳುವಳಿ ಹೆಸರಲ್ಲಿ ಡಬ್ಲ್ಯೂ.ಟಿ.ಓ ಭಾರತ ಬಿಟ್ಟು ತೊಲಗು ಎಂಬ ಹೋರಾಟಕ್ಕೆ ಕರೆ ನೀಡಬೇಕಿದೆ. ಈಗಾಗಲೇ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಚಳುವಳಿಯನ್ನು ಆರಂಭಿಸಿದೆ. ಈ ಹೋರಾಟವನ್ನು ಬಲಗೊಳಿಸಲು ಹಾಗೂ ವಿದ್ಯಾರ್ಥಿ-ಪೋಷಕರನ್ನು , ಉಪನ್ಯಾಸಕರನ್ನು ಜಾಗೃತಿಗೊಳಿಸುವುದಕ್ಕಾಗಿ ವಿಚಾರ ಸಂಕಿರಣ, ಸಂವಾಧ, ತಾಲ್ಲೂಕ ಮತ್ತು ಜಿಲ್ಲಾ ಹಂತದ ಹೋರಾಟಗಳನ್ನು ರೂಪಿಸಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು, ಉಪನ್ಯಾಸಕರು, ಯುವಕರು ಈ ಹೋರಾಟವನ್ನು ಬೆಂಬಲಿಸಿ ದೇಶದ ಶಿಕ್ಷಣವನ್ನು ಉಳಿಸಿಕೊಳ್ಳು ಪ್ರಭಲ ಹೋರಾಟ ನಡೆಸಬೇಕಿದೆ.

ಗುರುರಾಜ್ ದೇಸಾಯಿ

Advertisement

0 comments:

Post a Comment

 
Top