PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ ೨೭. ರಾಮಾಯಣದ ಚರಿತ್ರೆಯನ್ನು ಬರೆದ ಮಹರ್ಷಿ ವಾಲ್ಮೀಕಿಯು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಇಡೀ ವಿಶ್ವಕ್ಕೆ ಹೆಸರುವಾಸಿಯಾದವರು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ ಹೇಳಿದರು. ಅವರು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಆದಿಕವಿ ಮಹರ್ಷಿಯವರ ಜಯಂತಿ ಆಚರಣೆ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಭಾವಾ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ವಾಲ್ಮೀಕಿಯು ಒಬ್ಬ ಶ್ರೇಷ್ಠ ಚಿಂತಕರಾಗಿದ್ದರು. ಬಡವರ ಶೋಷಿತರ, ನೊಂದವರ ಚಿಂತಕರಾಗಿದ್ದರು. ಕೆಳವ
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕರಿಬಸಪ್ಪ ಪಲ್ಲೇದ, ರಾಮರೆಡ್ಡೆಪ್ಪ ರಡ್ಡೇರ, ವೀರಯ್ಯ ಒಂಟಿಗೋಡಿಮಠ, ಗೋಪಾಲರಾವ್ ಗುಡಿ, ತಾಹೇರಾಬೇಗಂ, ಶೈಲಜಾ ಹೆಚ್. ಶೋಭಾ ಗಡಾದ, ಶಾರದಮ್ಮ ತಳಬಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರ್ಗದವರನ್ನು ಮೇಲ್ವರ್ಗಕ್ಕೆ ತರಲು ಬಹಳಷ್ಟು ಶ್ರಮಿಸಿದರು. ಇವರು ಬರೆದ ರಾಮಾಯಣದ ಗ್ರಂಥವು ದೇಶಕ್ಕೆ ಒಂದೇ ಕೃತಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಇಡೀ ವಿಶ್ವಕ್ಕೆ ಹೆಸರುವಾಸಿಯಾದರು. ಸಾವಿರಾರು ವರ್ಷಗಳ ಹಿಂದೆ ಜನಿಸಿದ ವಾಲ್ಮೀಕಿ ಮಹರ್ಷಿಯು ಜಗತ್ತಿನ ಆದಿಕವಿ. ಅದಕ್ಕಾಗಿಯೇ ವಾಲ್ಮೀಕಿಯನ್ನು ಆದಿಕವಿ ಎಂದು ಬಣ್ಣಿಸಲಾಗುತ್ತದೆ. ಭಾರತದಂತಹ ಪವಿತ್ರ ದೇಶದ ಘನತೆಯನ್ನು ರಾಮಾಯಣದಂತಹ ಮಹಾಕಾವ್ಯ ಬರೆದು ಹೆಚ್ಚಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ. ಈ ಪುಣ್ಯಪುರುಷನ ಜಯಂತಿಯನ್ನು ಆಚರಿಸುವ ಮೂಲಕ ನಮ್ಮನ್ನು ನಾವು ಪರಿಶುದ್ದಗೊಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ರಾಮಾಯಣ ಓದಿಸುವ ಮೂಲಕ ಅವರಲ್ಲಿ ತ್ಯಾಗ, ಪ್ರೀತಿ, ವಿಶ್ವಾಸ, ಸ್ನೇಹ, ನಿಷ್ಠೆಗಳ ಭಾವನೆಗಳನ್ನು ಬೆಳಸಬೇಕಾಗಿದೆ ಎಂದರು.
27 Oct 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top