PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೦೬ (ಕ ವಾ)
     ಸಣ್ಣ ನೀರಾವರಿ ಗಣತಿ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ರಾಜ್ಯದಲ್ಲಿ ಎಲ್ಲ ವಿಧದ ಸಣ್ಣ ನೀರಾವರಿ ಯೋಜನೆಗಳ ಸಮಗ್ರ ಮಾಹಿತಿ ಕಲೆಹಾಕುವ ಗುರಿಯೊಂದಿಗೆ ಸಣ್ಣ ನೀರಾವರಿ ಗಣತಿ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.   ರಾಜ್ಯದಲ್ಲಿ ಈ ಹಿಂದೆ ೧೯೮೬-೮೭ ರಲ್ಲಿ ಮೊದಲ ಗಣತಿ, ೧೯೯೩-೯೪ ರಲ್ಲಿ ಎರಡನೆ, ೨೦೦೦-೦೧ ರಲ್ಲಿ ಮೂರನೆ, ೨೦೦೬-೦೭ ರಲ್ಲಿ ನಾಲ್ಕನೆ ಸಣ್ಣ ನೀರಾವರಿ ಗಣತಿ ಕಾರ್ಯ ನಡೆದಿದ್ದು, ಇದೀಗ ಐದನೆ ಗಣತಿ ಕಾರ್ಯ ನಡೆಸಲಾಗುತ್ತಿದೆ.  ಸಣ್ಣ ನೀರಾವರಿ ಯೋಜನೆಗಳ ಗಣತಿಯಡಿ ಅಂತರ್ಜಲ ಯೋಜನೆಗಳು ಅಂದರೆ ಅಗೆದ ಬಾವಿಗಳು, ಆಳವಲ್ಲದ ಕೊಳವೆ ಬಾವಿಗಳು, ಮದ್ಯಮ ಆಳದ ಕೊಳವೆ ಬಾವಿ, ಆಳದ ಕೊಳವೆ ಬಾವಿಗಳ ಗಣತಿ ಕಾರ್ಯ ಕೈಗೊಳ್ಳಲಾಗುವುದು.  ಅದೇ ರೀತಿ ಮೇಲ್ಮೈಜಲ ಯೋಜನೆಗಳು ಅಂದರೆ ಮೇಲ್ಮೈ ಜಲ ಹರಿಯುವ ನೀರಾವರಿ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳ ಮೂಲಕ ೨ ಸಾವಿರ ಹೆ. ವರೆಗೆ ವಯಕ್ತಿಕ ಅಚ್ಚುಕಟ್ಟುಳ್ಳ ಯೋಜನೆಗಳ ಸಮಗ್ರ ಗಣತಿ ಕಾರ್ಯ ನಡೆಸಲಾಗುವುದು.  ಯೋಜನೆಗಳನುಸಾರ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಕಾಲಗಳಲ್ಲಿ ನೀರಾವರಿಯಾಗುವ ಕ್ಷೇತ್ರದ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹಿಸಲಾಗುವುದು.  ಈ ಮಾಹಿತಿಯು ಪಂಚವಾರ್ಷಿಕ ಯೋಜನೆ ರೂಪಿಸುವಲ್ಲಿ, ಅಂತರ್ಜಲದ ಪ್ರಮಾಣ ಅಂದಾಜಿಸಲು ಅಲ್ಲದೆ ವಿವಿಧ ಆಯಾಮಗಳಲ್ಲಿ ಉಪಯೋಗಿಸಲು ಸಹಕಾರಿಯಾಗಲಿದೆ.  ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇಲಾಖೆ, ಕಂದಾಯ, ಪಂಚಾಯತಿ ರಾಜ್ ಇಂಜಿನಿಯರಿಂಗ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ ಜಿ.ಎಲ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಣ್ಣ ನೀರಾವರಿ ಗಣತಿ ಕಾರ್ಯದ ಬಗ್ಗೆ ವಿವರಣೆ ನೀಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಭೀಮಶಾ ಸಿಂಗೆ ಅವರು, ಗ್ರಾಮ ಲೆಕ್ಕಾಧಿಕಾರಿಗಳನ್ನು ಗಣತಿದಾರರನ್ನಾಗಿ ನೇಮಿಸಲಾಗಿದ್ದು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಸಹಾಯಕ ಸಾಂಖ್ಯಿಕ ಅಧಿಕಾರಿ, ಉಪತಹಸಿಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಸಾಂಖ್ಯಿಕ ನಿರೀಕ್ಷಕರನ್ನು ಗಣತಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.  ಗಣತಿ ಸಿಬ್ಬಂದಿಗಳಿಗೆ ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,  ಕೊಪ್ಪಳ- ಅ. ೦೭ ರಂದು, ಗಂಗಾವತಿ- ಅ. ೦೮, ಕುಷ್ಟಗಿ- ಅ. ೧೩ ಹಾಗೂ ಯಲಬುರ್ಗಾ ದಲ್ಲಿ ಅ. ೧೪ ರಂದು ಆಯಾ ತಹಸಿಲ್ದಾರರ ಕಚೇರಿ ಸಭಾಂಗಣದಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದರು.
     ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಜಿ. ಪ್ರೇಮಾನಂದ್, ಪಂಚಾಯತಿ ರಾಜ್ ಇಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಅಭಿಯಂತರ ಮನೋಹರ ವಡ್ಡರ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಸೋಮಶೇಖರ್ ಸೇರಿದಂತೆ ಆಯಾ ತಾಲೂಕು ತಹಸಿಲ್ದಾರರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಐದನೆ ಸಣ್ಣ ನೀರಾವರಿ ಗಣತಿ ಕಾರ್ಯವನ್ನು ಸಮರ್ಪಕವಾಗಿ ನಡೆಸಿ, ಯಶಸ್ವಿಗೊಳಿಸುವಂತೆ ಪ್ರಭಾರಿ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ ಜಿ.ಎಲ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

0 comments:

Post a Comment

 
Top