ಗಂಗಾವತಿ-30- ನಗರದ ಔಷಧೀಯ ಭವನದಲ್ಲಿ ಔಷಧಗಳು ಮತ್ತು ಕಾಂತಿವರ್ಧಕ ಕಾಯಿದೆ-೧೯೪೦ ಮತ್ತು ಔಷಧಗಳು ಮತ್ತು ಕಾಂತಿವರ್ಧಕಗಳ ನಿಯಮಾವಳಿ-೧೯೪೫ ಈ ನಿಯಮದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಯಿತು. ನ್ಯಾಯಾಲಯದ ಕಲಾಪಗಳಿಗೆ ಮತ್ತು ಔಷಧ ವ್ಯಾಪಾರಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಠಿಯಿಂದ ಕನ್ನಡದ ಜೊತೆಗೆ ಇಂಗ್ಲೀಷ ಭಾಷೆಯಲ್ಲಿ ಸಂಯುಕ್ತವಾಗಿ ಇದನ್ನು ಪ್ರಕಟಿಸಲಾಗಿದೆ. ಈ ಪುಸ್ತಕವನ್ನು ಗಂಗಾವತಿ ಕಲ್ಮಠದ ಶ್ರೀಗಳಾದ ಪ್ರ.ನಿ.ಸ್ವ. ಡಾ. ಕೊಟ್ಟೂರ ಸ್ವಾಮಿಗಳು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಉಪನ್ಯಾಸಕರುಗಳಾದ ಡಾ. ಜಾಜಿ ದೇವೆಂದ್ರಪ್ಪ, ಡಾ. ಶರಣಬಸಪ್ಪ ಕೋಲ್ಕಾರ, ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮತ್ತು ಶ್ರೀಮತಿ ಸಂಧ್ಯಾ ವಕೀಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತ ಮತ್ತು ಪ್ರಸ್ತಾವನೆಯನ್ನು ಅಶೋಕಸ್ವಾಮಿ ಹೇರೂರ ನೆರವೇರಿಸಿದರು. ನಾಗರಾಜಸ್ವಾಮಿ ನಿರೂಪಿಸಿದರು. ದೃಶ್ಯ ಮಾಧ್ಯಮದ ನಿರೂಪಕಿ ವೀಣಾ ಮುದಗಲ್ ಪ್ರಾರ್ಥಿಸಿದರು. ಶ್ರೀಮತಿ ಶೈಲಜಾ ಮುಂತಾದವರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ನಗರದ ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಶೋಕಸ್ವಾಮಿ ಹೇರೂರ ಅವರ ೫೦ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
Advertisement
Related Posts
ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಬಿಡುಗಡೆ
31 Mar 20160ಬಹು ನಿರೀಕ್ಷಿತ ಮೂರು ಬಿಟ್ಟವರು ಊರಿಗೆ ದೊಡ್ಡವರು ...Read more »
ಹುಸಿ ದೇಶಭಕ್ತರ ಹುನ್ನಾರ ವಿಫಲಗೊಳಿಸಬೇಕಿದೆ- ರಾಜಾಬಕ್ಷಿ
24 Mar 20160ಕೊಪ್ಪಳ : ದೇಶಭಕ್ತಿಯ ಹೆಸರಿನಲ್ಲಿ ಮ...Read more »
ಗಲ್ಲು ಶಿಕ್ಷೆಯ ಕುಣಿಕೆಯಿಂದ ಅಮಾಯಕನೋರ್ವ ಪಾರಾಗಿ ಬಂದ !!!
18 Mar 20160ಗಲ್ಲು ಶಿಕ್ಷೆಯ ಕುಣಿಕೆಯಿಂದ ಅಮಾಯಕನೋರ್ವ ಪಾರಾಗಿಬಂ...Read more »
ಸ್ವಾಮಿಜಿಗಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ -ಡಾ.ಕೆ.ಎ.ಅಶೋಕ ಪೈ Swamiji needs sex education
16 Mar 20160ಲೈಂಗಿಕ ಶಿಕ್ಷಣ ಕಡ್ಡಾಯ ಮಾಡಿದರೆ ಅತ್ಯಾಚಾರ ಅನಾಚಾರ...Read more »
ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಿ- ವಿನಯಕುಮಾರ್ ಸೊರಕೆ
15 Mar 20160ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಯಾವುದೇ ನಗರ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.