ಕೊಪ್ಪಳ-30- ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಗ್ರಂಥಾಲಯದ ಸಹಾಯಕರಾಗಿ ೩೮ ವರ್ಷಗಳ ಸುಧೀರ್ಘ ಸೇವೆಸಲ್ಲಿಸುತ್ತಿದ್ದ ಗವಿಯಪ್ಪ ಕೊಪ್ಪಳ ಇವರು ಸೇವೆಯಿಂದ ನಿವೃತ್ತಿಗೊಂಡರು. ಇದರ ಅಂಗವಾಗಿ ಮಹಾವಿದ್ಯಾಲಯದ ವತಿಯಿಂದ ಸಭಾಭವನದಲ್ಲಿ ಬೀಳ್ಕೊಡಿಗೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆಡಳಿತಾಧಿಕಾರಿ ಡಾ.ಮರೇಗೌಡ, ಉಪನ್ಯಾಸಕರಾದ ಡಾ.ದಯಾನಂದಸಾಳಂಕಿ, ಶರಣಬಸಪ್ಪ ಬಿಳಿಯಲಿ, ಎಂ.ಎಸ್ ಬಾಚಲಾಪುರ, ಎಸ್.ಬಿ ಹಿರೇಮಠ, ಸಿ.ವಿ ಕಲ್ಮಠ, ಡಾ.ಪ್ರಕಾಶಬಳ್ಳಾರಿ,ಶಶಿಧರಕೊತಬಾಳ, ನೀತೂಸಿಂಗ್ ನಿವೃತ್ತಿಯಾದ ಗವಿಯಪ್ಪ ಕೊಪ್ಪಳ ಅವರ ಸೇವಾಕೈಂಕರ್ಯ ಕುರಿತು ಮಾತನಾಡಿದರು. ಸನ್ಮಾನ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಗವಿಯಪ್ಪ ಕೊಪ್ಪಳ ಮಾತನಾಡಿ ವಿದ್ಯಾರ್ಥಿಗಳು ಬಯಸಿದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಹುಡುಕಿ ಕೊಡುವದೇ ನನ್ನ ಕಾಯಕವಾಗಿತ್ತು. ಕಾಯಕದಲ್ಲಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಪರಿಶ್ರಮ ರೂಢಿಸಿಕೊಂಡಿದ್ದರಿಂದಲೇ ನಾನು ನನ್ನ ಸೇವೆಯನ್ನು ಪರಿಪೂರ್ಣಗೊಳಿಸಿಕೊಳ್ಳಲು ಸಹಾಯವಾಯಿತು. ಈ ಅವಧಿಯಲ್ಲಿ ನನ್ನೊಂದಿಗೆ ಸಹಕರಿಸಿದ ಎಲ್ಲ ಸಿಬ್ಭಂಧಿಗಳಿಗೆ ನಾನು ಚಿರರುಣಿ ಎಂದರು. ಪ್ರಾಚಾರ್ಯ ಮನೋಹರದಾದ್ಮಿ ಮಾತನಾಡಿ ಸರಕಾರಿ ನಿಯಮಾನುಸಾರ ಸೇವೆಯಿಂದ ಬಿಡುಗಡೆಗೊಂಡ ಗವಿಸಿದ್ದಪ್ಪ ಕೊಪ್ಪಳ ಇವರು ಗ್ರಂಥಾಲಯದಲ್ಲಿ ಬಿಡುವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದರು.ಗ್ರಂಥಾಲಯಕ್ಕೆ ಬರುವವರನ್ನು ಸದಾ ನಗುಮುಖದಿಂದಲೇ ಸ್ವಾಗತಿಸುತ್ತಾ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಆಧ್ಯಯನಕ್ಕೆ ಬೇಕಾಗುವ ಪುಸ್ತಕಗಳನ್ನು ಬಹುಬೇಗನೆ ಒದಗಿಸುತ್ತಿದ್ದರು. ಸದಾ ಹಸನ್ಮುಖಿಗಳಾಗಿ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಪಕರ ಪ್ರೀತಿಗೆ ಪಾತ್ರರಾಗಿದ್ದರೆಂದು ಮಾತನಾಡಿದರು. ಡಾ.ಬಸವರಾಜ ಪೂಜಾರ ನಿರೂಪಿಸಿದರು.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.