PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-29- ವಿಜ್ಜಾನ ವಿಭಾಗದ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ 'ವಿಜ್ಞಾನ ಹಬ್ಬ' ಕಾರ್ಯಕ್ರಮವು ಸೋಮವಾರದಂದು ಯಶಸ್ವಿಯಾಗಿ ಮೂಡಿಬಂದಿತು. ಈ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಎಸ್.ದಾದ್ಮಿ ಹಾಗೂ ಹಿರಿಯ ಪ್ರಾಧ್ಯಾಪಕರಾದ ಶ್ರೀ ರಾಘವೇಂದ್ರ, ಶ್ರೀ ಜಿ.ಎನ್.ಪಾಟೀಲ ಮತ್ತು ಶ್ರೀ ಚೆನ್ನಬಸಪ್ಪ ದೇವರಗುಡಿ ಹಾಗೂ ಇನ್ನಿತರ ಉಪನ್ಯಾಸಕರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ವಿಷಯ ಭೋಧನಾ ವಿಭಾಗದಲ್ಲಿ ವಿದ್ಯಾಲಯದ ಅಂತಿಮ ವರ್ಷದ (ಬಿ.ಎಸ್ಸಿ ೫ನೇ ಸೆಮ್) ವಿದ್ಯಾರ್ಥಿಯಾ“4th Dimensional Splace” e  ವಿಷಯದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದರು. ಭೌತಶಾಸ್ತ್ರಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡಿದ ಸರ್.ಐಸಾಕ್ ನ್ಯೂಟನ್ ಜೀವನ ಕುರಿತು ನಾಟಕವನ್ನು ಮನೋಹರ್ ಹಾಗೂ ಸಂಗಡಿಗರಿಂದ ವಿನೂತನವಾಗಿ ಮೂಡಿ ಬಂದಿತು. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ರಸಪ್ರಶ್ನೆ, ಆಷುಭಾಷಣ, ಚರ್ಚಾಸ್ಪರ್ಧೆಗಳನ್ನು ನಡೆಸಲಾಯಿತು. ಪ್ರಯೋಗಾತ್ಮಕವಾದ ವಿಜ್ಞಾನ ಮಾದರಿಗಳ ಪ್ರದರ್ಶನವೂ ಕಲಾತ್ಮಕವಾಗಿ ಮೂಡಿ ಬಂದಿತು. ಈ ಎಲ್ಲಾ ಕಾರ್ಯಕ್ರಮಗಳು ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರಿಂದ ಪ್ರೋತ್ಸಾಹಿಸಲ್ಪಟ್ಟು & ಅವರ ಮೆಚ್ಚುಗೆಗೆ ಪಾತ್ರವಾದವು. ಈ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    ಕಾರ್ಯಕ್ರಮವು ಗೀತಾ .ಹೆಚ್ ಪೂಜಾರ ಇವರಿಂದ ನಿರೂಪಿಸಲ್ಪಟ್ಟಿತು. ಪ್ರಾರ್ಥನೆಯನ್ನು ಸ್ಪಂದನಾ ಕುಲಕರ್ಣಿಯಿಂದ, ಸ್ವಾಗತ ಭಾಷಣ ಪುಸ್ಪಾ.ಕೆ ನಾಯಕ್ ಇವರಿಂದ ನಡೆಸಲ್ಪಟ್ಟಿತು ಮತ್ತು ಅತಿಥಿಗಳಿಗೆ ವಂದನಾರ್ಪಣೆಯನ್ನು ರಾಹುಲ್ ಎಸ್.ದೊಡ್ಡಮನಿ ಇವರಿಂದ ಅರ್ಪಿಸಲ್ಪಟ್ಟಿತು.

ದ ಹನುಮೇಶ ಕರಡಿಗುಡ್ಡ ಇವರು
29 Sep 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top