PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೧೩: ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ನಾಳೆ ದಿ.೧೪ ಸೋಮವಾರದಂದು ಶ್ರೀ ಬಸವೇಶ್ವರ ಮತ್ತು ರಾಮಲಿಂಗೇಶ್ವರ ಭಜನಾ ಮಹಾಮಂಗಲ ಹಾಗೂ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಜರುಗಲಿವೆ ಎಂದು ಗ್ರಾಮದ ಸದ್ಭಕ್ತ ಮಂಡಳಿ ಗುರುಹಿರಿಯರು ಹಾಗೂ ಯುವಕ ಸಹೋದರರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಅಂದು ಬೆಳಿಗ್ಗೆ ೮ ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಡೊಳ್ಳು, ಬಾಜಾ ಭಜಂತ್ರಿ, ಸಕಲ ಮಂಗಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಬಸವೇಶ್ವರ ಭಾವಚಿತ್ರ ಹಾಗೂ ಮೂರ್ತಿ ಮೆರವಣಿಗೆ ನಡೆಸಲಾಗುವುದು. ಅಭಿಜಿನ್ ಲಗ್ನದ ಶುಭ ಮುಹೂರ್ತ ೧೧ರಿಂದ ೧೨-೩೦ ಸಮಯದೊಳಗೆ ಹರಗುರುಚರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಜರುಗಲಿದೆ.  ಮುಂಡರಗಿ ಸಂಸ್ಥಾನಮಠದ ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಬೆದವಟ್ಟಿ ಹಿರೇಮಠದ ಷಟಸ್ಥಲ ಬ್ರಹ್ಮ ಶಿವಸಂಗಮೇಶ್ವರ ಶಿವಾಚಾರ್ಯರು, ನಗರಗಡ್ಡಿಮಠದ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಹಾಲ್ವರ್ತಿ ಕಾಗಿನೆಲೆ ಶಾಖಾಮಠದ ಬಸವರಾಜೇಂದ್ರ ಸ್ವಾಮಿಗಳು, ಸುಳೇಕಲ್ ರಾಜರಾಜೇಶ್ವರ ಬ್ರಹನ್ಮಠದ ಭುವನೇಶ್ವರ ತಾತನವರು, ಟನಕನಕಲ್ ವೀರೇಶ್ವರಮಠದ ಕಾಲಜ್ಞಾನಿ ಬ್ರಹ್ಮಸದ್ಗುರು ತಳ್ಳಿಹಾಳ ಶರಣಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಣ್ಣ ಕೋಟ್ರಪ್ಪ ಕೋರಗಲ್ ವಹಿಸಲಿದ್ದು ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸುವರು, ಸಂಸದ ಸಂಗಣ್ಣ ಕರಡಿ ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಕೊಪ್ಪಳ ಎಪಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಟಿ., ಮಾಜಿ ಎಂ.ಎಲ್.ಸಿ. ಕರಿಯಣ್ಣ ಸಂಗಟಿ, ಜಿ.ಪಂ.ಸದಸ್ಯ ಟಿ. ಜನಾರ್ಧನ ಹುಲಿಗಿ, ತಾ.ಪಂ. ಸದಸ್ಯೆ ಸುಶೀಲಮ್ಮ ವಿ. ಬಳ್ಳಾರಿ, ಗ್ರಾ.ಪಂ. ಅಧ್ಯಕ್ಷ ಆರ್.ಡಿ. ಮುಲ್ಲಾ. ಇನ್ನಿತರ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಗಳಿಂದ ಎಡೆನುಡಿಯ ರೂಪದಲ್ಲಿ ಹಿತವಚನ ಮಹಾಮಂಗಲ, ಮಹಾಶಿವಗಣಾರಾಧನೆ ಹಾಗೂ ಅನ್ನಸಂತರ್ಪಣೆ ಮಹಾಪ್ರಸಾದ ಜರುಗಲಿದ್ದು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರ ಮತ್ತು ರಾಮಲಿಂಗೇಶ್ವರ ಕೃಪೆಗೆ ಪಾತ್ರರಾಗುವಂತೆ ಗ್ರಾಮದ ಸದ್ಭಕ್ತ ಮಂಡಳಿ ಕೋರಿದೆ.

Advertisement

0 comments:

Post a Comment

 
Top