ಕೊಪ್ಪಳ,ಆ,೦೫ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕೊಪ್ಪಳದ ಮಿಲ್ಲತ್ ಪಬ್ಲಿಕ್ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಪೂರ್ವ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ದಿ.೦೬ರ ಗುರುವಾರ ಬೆಳಿಗ್ಗೆ ೮.೩೦ಕ್ಕೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದ್ದು ಇದರ ಪೂರ್ವಭಾವಿಯಾಗಿ ಮೈದಾನದಲ್ಲಿ ಕ್ರೀಡೆಗೆ ವ್ಯವಸ್ಥೆ ಸಿದ್ಧತಾಕಾರ್ಯ ಬುಧುವಾರದಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಆರ್‌ಪಿ ಶ್ರೀಮತಿ ಪೂರ್ಣಿಮಾ ರವರ ನೇತೃತ್ವದಲ್ಲಿ ಸಿದ್ಧತಾಕಾರ್ಯ ಪೂರ್ಣಗೊಂಡಿದೆ.
ಈ ಕ್ರೀಡಾಂಗಣ ಮೈದಾನದಲ್ಲಿ ದಿ.೬ರ ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಒಂದುದಿನದ ಮಟ್ಟಿಗೆ ಕೊಪ್ಪಳ ಪೂರ್ವ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಜರುಗಲಿದ್ದು ಇದರ ವ್ಯಾಪ್ತಿಯಲ್ಲಿ ಬರುವ ೨೪ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕ್ರೀಡಾ ಪ್ರದರ್ಶನವನ್ನು ಮಾಡಲಿದ್ದಾರೆ.
ಕ್ರೀಡಾಕೂಟದ ಉದ್ಘಾಟನೆಯನ್ನು ಶಾಸಕ ಕೆ,ರಾಘವೇಂದ್ರ ಹಿಟ್ನಾಳ ನೆರವೇರಿಸಲಿದ್ದು ನಗರಸಭೆ ಅ ಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ಇಲ್ಲಿನ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ರವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಎಂ.ಡಿ.ಆಸೀಫ್ ಕರ್ಕಿಹಳ್ಳಿ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್, ನಗರಸಭೆಯ ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಸದಸ್ಯ ಅಮ್ಜದ್ ಪಟೇಲ್, ಅಂಜುಮನ್ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕೊಪ್ಪಳ ಪೂರ್ವ ಕ್ಲಸ್ಟರ್ ಮಟ್ಟದ ಸಿಆರ್‌ಪಿ, ಬಿಆರ್‌ಪಿಗಳು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಇತರ ಪದಾಧಿಕಾರಿಗಳು ಅಲ್ಲದೆ ಮಿಲ್ಲತ್ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಳ್ಳುವರು.
ದಿ.೬ರರ ಕ್ರೀಡಾಕೂಟಕ್ಕೆ ಬುಧುವಾರ ಜರುಗಿದ ಕ್ರೀಡಾಂಗಣ ಸ್ವಚ್ಛತಾ ಮತ್ತು ಸಿದ್ಧತಾ ಕಾರ್ಯದಲ್ಲಿ ಸಿಆರ್‌ಪಿ ಶ್ರೀಮತಿ ಪೂರ್ಣಿಮಾ ನೇತೃತ್ವದಲ್ಲಿ ಮಿಲ್ಲತ್ ಸಂಸ್ಥೆಯ ಅಧ್ಯಕ್ಷ ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಸಂಸ್ಥೆಯ ಸದಸ್ಯ ಎಂ.ಸಾದಿಕ್ ಅಲಿ, ಮುಖ್ಯೋಪಾದ್ಯಾಯ ಖಾಜಾ ಮೈನುದ್ದೀನ್ ಸೇರಿದಂತೆ ಕೊಪ್ಪಳ ಶಾಲೆಯ ಧೈಹಿಕ ಶಿಕ್ಷಕರಾದ ವಿರೂಪಾಕ್ಷಪ್ಪ ಬಾಗೋಡಿ, ಸಿ.ಪಿ.ಎಸ್. ಸರ್ದಾರ್‌ಗಲ್ಲಿ ಶಾಲೆಯ ಬಸವರಾಜ್, ಕೊಟಗಾರಗೇರಿ ಉರ್ದುಶಾಲೆಯ ಶರಣಬಸವ, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ಡಿ.ಎಚ್.ಕುರಿ, ಕುವೆಂಪು ಶಾಲೆಯ ಮಂಜುನಾಥ ಕಂಬಳಿ, ನ್ಯೂ ಆಕ್ಸಫರ್ಡ ಶಾಲೆಯ ಕೃಷ್ಣಮೂರ್ತಿ ಒಂಟೆತ್ತಿನವರ, ಮಹಾಂತಯ್ಯನಮಠ ಶಾಲೆಯ ಬಸವರಾಜ್, ಎಸ್‌ಎಫ್‌ಎಸ್ ಶಾಲೆಯ ಜಿ.ಕೆ.ಈರಣ್ಣ, ಎನ್‌ಕೆಪಿಎಂ ಶಾಲೆಯ ಬಸವರಾಜ್ ಬಂಗಾರಿ, ಕೊಟಗಾರಗೇರಾ ಶಾಲೆಯ ಶ್ರೀಮತಿ ಪರ್ವೀನ್ ಬೇಗಂ, ಶ್ರೀಗವಿಸಿದ್ದೇಶ್ವರ ಸಂಯುಕ್ತ ಪ್ರೌಡ ಶಾಲೆ ಎಂ.ಡಿ.ದೇವರಮನಿ, ಕೊಪ್ಪಳ ಸಿಪಿಎಸ್ ಶಾಲೆಯ ಗುರುರಾಜ್ ಕಟ್ಟಿ ಸೇರಿದಂತೆ ಅನೇಕ ದೈಹಿಕ ಶಿಕ್ಷಕರು ಸಿದ್ಧತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

0 comments:
Post a Comment