PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- 29 - ಶರಣಪ್ಪ ಮಲ್ಲಪ್ಪ ಡಂಬಳ ವಯಸ್ಸು ೨೭ ಸಾ ಘಟ್ಟರಡ್ಡಿಹಾಳ ತಾ| ಕೊಪ್ಪಳ. ಬೆಳಗಿನ ಜಾವ ತಮ್ಮ ಹೊಲದಲ್ಲಿ ನೆಣು ಹಾಕಿಕೊಂಡು ಆತ್ಮಹತ್ಯಗೆ ಶರಣಾಗಿದ್ದಾನೆ. ನೆಣು ಹಾಕಿಕೊಂಡ ರೈತ ಶರಣಪ್ಪ ನವರ ತಂದೆ ಹೆಸರಿನಲ್ಲಿ  ಎಸ್ ಬಿ ಎಚ್ ಬ್ಯಾಂಕಿನಲ್ಲಿ ೮೦೦೦೦ ಸಾಲ ಖಾಸಗಿ ಸಾಲ ಮಾಡಿ ೩೦೦೦೦೦ ಲಕ್ಷದಲ್ಲಿ ಟ್ರಾಕ್ಟರ ಖರಿದಿಸಿದ್ದರು ಇತರ ಸಣ್ಣ ಪುಟ್ಟ ಸಾಲಗಳಿಂದ ಹಾಗೂ ಭಿಕರ ಬರಗಾಲಕ್ಕೆ ತತ್ತರಿಸಿ ಮನನೊಂದು ರೈತ ಶರಣಪ್ಪ ಡಂಬಳ ವಯಸ್ಸು ೨೭ ಇವರು ನೆಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತರ ಆತ್ಮಹತ್ಯಗಳು ಸರಣಿಯಾಗಿ ನಡೆಯುತ್ತಿದ್ದು ಜಿಲ್ಲಾ ಆಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯಸರ್ಕಾರ ಇತ್ತ ಶಿಘ್ರವಾಗಿ ಸ್ಪಂದಿಸಿ ರೈತರ ಸಾಲ ಮನ್ನಾ ಮಾಡಿ ರೈತರ ಆತ್ಮಹತ್ಯ ಪ್ರಕರಣಗಳನ್ನು ತಡೆಯಲು ಮುಂದಾಗಬೇಕು ರೈತರ ಕಷ್ಟ ನಷಗಳಿಗೆ ಕೂಡಲೇ ಸ್ಪಂದಿಸಿ ರೈತರಲ್ಲಿ ಆತ್ಮ ಸ್ಥೈರ್ಯ ತುಂಬುವಲ್ಲಿ ಅಧಿಕಾರಿಗಳು ಜನಪ್ರತಿನಿದಿಗಳು ಕಾರ್ಯೋನ್ಮುಕರಾಗಬೇಕೆಂದು ರೈತ ಮುಖಂಡ ಹಾಗೂ ಪಿ.ಎಲ್.ಡಿ.ಬಿ ಮಾಜಿ ಅಧ್ಯಕ್ಷ ಶಿವಸಂಗಮೇಶ ಡಂಬಳ ಸರ್ಕಾರವನ್ನು ಆಗ್ರಹಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೆಳಬೇಕೆಂದು ತಿಳಿಸಿದ್ದಾರೆ.
29 Aug 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top