ಕೊಪ್ಪಳ -ನಗರದ ನಂದಿನಗರದಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪೌಢಶಾಲೆಯಲ್ಲಿ ದಿನಾಂಕ ೨೯-೦೬-೨೦೧೫ ರಂದು ಮನೋ ವಿಕಾಸದ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಬರಹಗಾರರಾದ ಯೋಗೇಶ್ವರ ಮಾಸ್ಟರ ಮೂಖ್ಯ ಅಥಿತಿಗಳಾಗಿ ಆಗಮಸಿ ಮಾತನಾಡಿ ಮಕ್ಕಳ ಮನೋವಿಕಾಸಕ್ಕೆ ಹೆಚ್ಚಿನ ಮಾನ್ಯತೆಯನ್ನು ಕೊಡಿ. ಸಮಾಜದಲ್ಲಿ ಯಾವುದೇ ವಿಷಯವನ್ನು ಸರಳಾಗಿ ಪ್ರಯೋಗಗಳ ಮೂಲಕ ಮಕ್ಕಳೋಂದಿಗೆ ಆತ್ಮೀಯವಾಗಿ ಮಾತುಕತೆಯನ್ನ ನಡೆಸುವುದರ ಮೂಲಕ ಅವರಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಹೆಚ್. ಅತ್ತನೂರ ವಹಿಸಿದ್ದರು. ಅತಿಥಿಗಳಾಗಿ ಯೋಗೇಶ್ವರ ಮಾಸ್ಟರ, ಮತ್ತು ಚಲನಚಿತ್ರ ನಟ ನಿರ್ದೇಶಕ ಬಸವರಾಜ ಕೊಪ್ಪಳ, ಜಯರಾಜ ಬೂಸನೂರಮಠ, ಆಗಮಿಸಿದ್ದರು. ಶಾಲೆಯ ಶಿಕ್ಷಕವೃಂದ ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.