PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜೂ.೩೦ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಗಣಕೀಕೃತ ಕೌನ್ಸಲಿಂಗ್‌ನ ವೇಳಾಪಟ್ಟಿ ಪ್ರಕಟಗೊಂಡಿದೆ.ಪ್ರಾಥಮಿಕ ಶಾಲಾ ಶಿಕ್ಷಕರು ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರು ಜುಲೈ.೦೨ ರಿಂದ ಜು.೧೧ ರವರೆಗೆ ಅರ್ಜಿ ಸಲಿಸಬಹುದಾಗಿದ್ದು, ಜು.೧೩ ರೊಳಗಾಗಿ ಸ್ವೀಕೃತಿ ಪಡೆಯಬೇಕು. ಆನ್‌ಲೈನ್ ಅರ್ಜಿಗಳು  ಮತ್ತು ಮಾಹಿತಿ ಧೃಢೀಕರಣ ಮತ್ತು ಅನುಮೋದನೆ ಕಾರ್ಯ ಜು.೦೨ ರಿಂದ ಜು.೧೫ ರವರೆಗೆ ನಡೆಯಲಿದೆ. ಜು.೧೭ ರಂದು ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗುವುದು. ಜು.೨೦ ರಂದು ಕೋರಿಕೆ ವರ್ಗಾವಣೆ (ಘಟಕದ ಹೊರಗೆ, ಒಳಗೆ) ತಾತ್ಕಾಲಿಕ ಪ್ರಕಟಣೆ ಬಿಡುಗಡೆ. ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಜು.೨೩ ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಜು.೧೭ ರಿಂದ ಜು.೨೨ ರವರೆಗೆ ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. ಆಗಸ್ಟ್ ೦೫ ರಂದು ಪರಸ್ಪರ ವರ್ಗಾವಣೆ ಅಂತಿಮ ಪಟ್ಟಿ ಹಾಗೂ ಖಾಲಿ ಹುದ್ದೆಗಳನ್ನು ಪ್ರಕಟಿಲಾಗುವುದು. ಆ.೦೭ ರಂದು ಪರಸ್ಪರ ವರ್ಗಾವಣೆ ಘಟಕದ ಒಳಗೆ ಕೌನ್ಸೆಲಿಂಗ್ ವರ್ಗಾವಣೆ, ಆ.೧೨ ರಂದು ಪರಸ್ಪರ ವರ್ಗಾವಣೆ ಘಟಕದ ಹೊರಗೆ ಕೌನ್ಸೆಲಿಂಗ್ ವರ್ಗಾವಣೆ ನಡೆಯಲಿದೆ. ಆ.೧೭ ರಂದು ಕೋರಿಕೆ ವರ್ಗಾವಣೆಯ ಘಟಕದ ಒಳಗೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಆ.೧೯ ರಿಂದ ಆ.೨೨ ರವರೆಗೆ ಘಟಕದ ಒಳಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ. ಆ.೨೬ ರಂದು ಕೋರಿಕೆ ವರ್ಗಾವಣೆಯ ಘಟಕದ ಹೊರಗೆ ಅಂತಿಮ ಪಟ್ಟಿ  ಪ್ರಕಟಗೊಳ್ಳಲಿದ್ದು, ಆ.೨೮ ರಿಂದ ಸೆ.೧೫ ರವರೆಗೆ  ಘಟಕದ ಹೊರಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರು : ವರ್ಗಾವಣೆ ಬಯಸುವ ಪ್ರೌಢ ಶಾಲಾ ಶಿಕ್ಷಕರು ಜುಲೈ.೦೨ ರಿಂದ ಜು.೧೧ ರವರೆಗೆ ಅರ್ಜಿ ಸಲಿಸಬಹುದಾಗಿದ್ದು, ಜು.೧೩ ರೊಳಗಾಗಿ ಸ್ವೀಕೃತಿ ಪಡೆಯಬೇಕು. ಆನ್‌ಲೈನ್ ಅರ್ಜಿಗಳು  ಮತ್ತು ಮಾಹಿತಿ ಧೃಢೀಕರಣ ಮತ್ತು ಅನುಮೋದನೆ ಕಾರ್ಯ ಜು.೦೨ ರಿಂದ ಜು.೧೫ ರವರೆಗೆ ನಡೆಯಲಿದೆ. ಜು.೧೭ ರಂದು ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗುವುದು. ಜು.೨೦ ರಂದು ಕೋರಿಕೆ ವರ್ಗಾವಣೆ (ಘಟಕದ ಹೊರಗೆ, ಒಳಗೆ) ತಾತ್ಕಾಲಿಕ ಪ್ರಕಟಣೆ ಬಿಡುಗಡೆ. ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಜು.೨೩ ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಜು.೧೭ ರಿಂದ ಜು.೨೨ ರವರೆಗೆ ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. ಆಗಸ್ಟ್ ೦೫ ರಂದು ಪರಸ್ಪರ ವರ್ಗಾವಣೆ ಅಂತಿಮ ಪಟ್ಟಿ ಹಾಗೂ ಖಾಲಿ ಹುದ್ದೆಗಳನ್ನು ಪ್ರಕಟಿಲಾಗುವುದು. ಆ.೧೦ ರಂದು ಪರಸ್ಪರ ವರ್ಗಾವಣೆ ಘಟಕದ ಒಳಗೆ ಕೌನ್ಸೆಲಿಂಗ್ ವರ್ಗಾವಣೆ, ಆ.೧೪ ರಂದು ಪರಸ್ಪರ ವರ್ಗಾವಣೆ ಘಟಕದ ಹೊರಗೆ ಕೌನ್ಸೆಲಿಂಗ್ ವರ್ಗಾವಣೆ ನಡೆಯಲಿದೆ. ಆ.೧೭ ರಂದು ಕೋರಿಕೆ ವರ್ಗಾವಣೆಯ ಘಟಕದ ಒಳಗೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಆ.೨೩ ರಿಂದ ಆ.೨೫ ರವರೆಗೆ ಘಟಕದ ಒಳಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ. ಆ.೨೬ ರಂದು ಕೋರಿಕೆ ವರ್ಗಾವಣೆಯ ಘಟಕದ ಹೊರಗೆ ಅಂತಿಮ ಪಟ್ಟಿ  ಪ್ರಕಟಗೊಳ್ಳಲಿದ್ದು, ಸೆ.೦೭ ರಿಂದ ಸೆ.೧೫ ರವರೆಗೆ ಘಟಕದ ಹೊರಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರ್ಗಿಯ ಅಪರ ಆಯುಕ್ತ ರಾಧಾಕೃಷ್ಣರಾವ್ ಮದನಕರ್  ತಿಳಿಸಿದ್ದಾರೆ.

Advertisement

0 comments:

Post a Comment

 
Top