PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜೂ. ೨೯- ಹೊಸ ಮಾರ್ಗ ಸ್ಥಷ್ಠಿಸಿ ಬಸ್‌ಗಳನ್ನು ಸಂಚರಿಸುವಂತೆ ಒತ್ತಾಯಿಸಿ ಭಾರತ್ ಕಮ್ಯೂನಿಸ್ಟ್ ಪಕ್ಷ ಮತ್ತು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಎಸ್. ಹಾವೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಮನವಿಯಲ್ಲಿ ಜಿಲ್ಲೆಯ ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕುಕನೂರು, ಗೊರ್ಲೆಕೊಪ್ಪ, ಮಂಡಲಗೇರಿ, ಇಟಗಿ, ಮನ್ನಾಪುರ, ನಿಂಗಾಪುರ, ತಳಬಾಳ ಮೂಲಕ ತಳಕಲ್‌ಗೆ ಹೊಸದಾಗಿ ಸೇತುವೆಗಳು, ಡಾಂಬರಿಕರಣ ರಸ್ತೆಗಳು ನಿರ್ಮಾಣಗೊಂಡು ಬಸ್‌ಗಳು ಸಂಚರಿಸಲು ಯೋಗ್ಯವಾಗಿವೆ. ಕೊಪ್ಪಳದಿಂದ ತಳಕಲ್, ತಳಬಾಳ, ನಿಂಗಾಪುರ, ಮನ್ನಾಪುರ, ಇಟಗಿ, ಮಂಡಲಗೇರಿ ಗೊರ್ಲೆಕೊಪ್ಪ, ಕುಕನೂರು ಮಾರ್ಗ ಹಾಗೂ  ಕೊಪ್ಪಳದಿಂದ ತಳಕಲ್, ತಳಬಾಳ, ನಿಂಗಾಪುರ, ಮನ್ನಾಪುರ, ಮಾಳೆಕೊಪ್ಪ, ಸೋಂಪುರ, ಸಿದ್ನೆಕೊಪ್ಪ, ಬಿನ್ನಾಳ, ತೊಂಡೆಹಾಳ, ಬಂಡಿಹಾಳ, ನರೇಗಲ್‌ವರೆಗೆ ಹೊಸ ಮಾರ್ಗ ಸೃಷ್ಟಿಸಿ ಈ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಲು ಕ್ರಮ ಕೈಗೊಂಡರೆ ಯಲಬುರ್ಗಾ ತಾಲೂಕಿನ ಹಳ್ಳಿಗಳ ಜನರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ವ್ಯಾಪಾರಿಗಳಿಗೆ ಹಾಗೂ ರೋಗಿಗಳಿಗೆ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಬಂದು ಹೋಗಲು ಅನುಕೂಲವಾಗುತ್ತದೆ.
ತಾವು ಆದಷ್ಟು ತೀವ್ರದಲ್ಲಿ ನಮ್ಮ ಗ್ರಾಮೀಣ ಭಾಗದ ಜನರಿಗೆ ಅನುಕೂಲಕರವಾದ ರೀತಿಯಲ್ಲಿ ಬಸ್‌ಗಳನ್ನು ಸಂಚರಿಸುವಂತೆ ಕ್ರಮಕೈಗೊಳ್ಳಲು ವಿನಂತಿಸಿಕೊಳ್ಳುತ್ತೇವೆ.ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಎಸ್. ಹಾವೇರಿ ಮನವಿ  ಸ್ವಿಕರಿಸಿ ಮಾತನಾಡಿ, ಈ ಮಾರ್ಗ ಹೊಸದಾಗಿ ಸಮೀಕ್ಷೆ ನಡೆಸಿ ಬಸ್‌ಗಳ ಸಂಚಾರಕ್ಕೆ ಶೀಘ್ರದಲ್ಲಿ ಕ್ರಮಕೈಗೊಳ್ಳುತ್ತೇನೆ. ಸೊಂಪೂರ, ಸಿದ್ನೇಕೊಪ್ಪ ನಡುವೆ ಹೊಸದಾಗಿ ನಿರ್ಮಾಣಗೊಂಡ ಸೇತುವೆ ಭಾರವಾದ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಸೇತುವೆ ನಿರ್ಮಿಸಿದ ಇಲಾಖೆ ಪತ್ರ ನೀಡಿದರೆ ಆ ಮಾರ್ಗಕ್ಕೂ ಬಸ್‌ಗಳು ಸಂಚರಿಸಿಲು ಕ್ರಮಕೈಗೊಳ್ಳಲಾಗುವುದು. ಈ ಮಾರ್ಗದಲ್ಲಿ ಸಾರಿಗೆ ಸಂಸ್ಥೆಗೆ ಆದಾಯವು ಬರುವ ನಿರೀಕ್ಷೆ ಇದೆ ಎಂದು ಹೇಳಿದರು.   
ಮನವಿ ಸಲ್ಲಿಸಿದ ನಿಯೋಗದಲ್ಲಿ   ಭಾರತ್ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ಸದಸ್ಯ ಡಾ.ಕೆ.ಎಸ್. ಜನಾರ್ಧನ್, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್., ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರವೇಶ ಚಿಕೇನಕೊಪ್ಪ, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಎಂ.ಡಿ. ಗೌಸ್ ನೀಲಿ, ಯಲಬುರ್ಗಾ ತಾಲೂಕ ಸಂಚಾಲಕ ಮಾರುತಿ ಹೆಚ್. ತಳವಾರ, ಮುಖಂಡರಾದ ಮುತ್ತು ವೈ. ನಿಟ್ಟಾಲಿ, ಹನುಮಂತ ಜಿ. ಕೊಡ್ಲಿ, ಭೀಮಪ್ಪ ಎಸ್. ಆಲೂರ, ಕೆಎಸ್‌ಆರ್‌ಟಿಸಿ ಸ್ಪಾಫ್ ಆಂಡ್ ವರ್ಕರ್‍ಸ್ ಯೂನಿಯನ್ ಮುಖಂಡ ಮರಿಯಪ್ಪ, ಮಖಬೂಲ ರಾಯಚೂರ, ಶಿವಪ್ಪ ಹಡಪದ ಮತ್ತಿತರರು ಭಾಗವಹಿಸಿದ್ದರು.
29 Jun 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top