ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಮೇ. ೨೨ ಶುಕ್ರವಾರದಂದು ಜಿಲ್ಲೆಯಲ್ಲಿ ಒಟ್ಟು ೨೯೦೧ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕೊಪ್ಪಳ ತಾಲೂಕಿನಲ್ಲಿ ೯೦೯ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ ೮೨೧ ನಾಮಪತ್ರಗಳು. ಕುಷ್ಟಗಿ ತಾಲೂಕಿನಲ್ಲಿ ೬೦೧ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೫೭೦ ಜನ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-೪೬೬, ಪ.ಪಂಗಡ-೨೩೨, ಹಿಂದುಳಿದ ಅ ವರ್ಗ-೩೭೩, ಹಿಂದುಳಿದ ಬ ವರ್ಗ-೧೧೧ ಹಾಗೂ ಸಾಮಾನ್ಯ ವರ್ಗದ-೧೬೩೪ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಈವರೆಗೆ ಒಟ್ಟು ೧೦೫೪೦ ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ಉಮೇದುವಾರಿಕೆ ಹಿಂಪಡೆಯಲು ಮೇ. ೨೫ ಕೊನೆಯ ದಿನಾಂಕವಾಗಿರುತ್ತದೆ.
0 comments:
Post a Comment
Click to see the code!
To insert emoticon you must added at least one space before the code.