ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ರಸ್ತಾ ಸುರಕ್ಷತೆ ಕಾಯ್ದೆ ಕಾರ್ಮಿಕ ಹಾಗೂ ಸಣ್ಣ ಮಾಲೀಕರ ವಿರುದ್ಧವಾಗಿದೆ. ಈ ಮಸೂದೆಯನ್ನು ವಿರೋಧಿಸಿ ರಾಷ್ಟ್ರದಲ್ಲಿ ೫೮ ಸಂಚಾರಿ ನಿಗಮಗಳು ಹಮ್ಮಿಕೊಂಡ ಬಂದ್ ಸಂದರ್ಭದಲ್ಲಿ ಗಂಗಾವತಿ ಘಟಕದ ಕಾರ್ಮಿಕರು ಶ್ರಮಪಟ್ಟು ಒಂದು ಬಸ್‌ಗಳು ರಸ್ತೆಗಿಳಿಯದಂತೆ ಚಳುವಳಿಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಎಐಸಿಸಿಟಿಯು ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ ತಿಳಿಸಿದ್ದಾರೆ.
ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ಸೋನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಬಿ.ದಂಡೂರ್ ಮತ್ತು ಗೌರವಾಧ್ಯಕ್ಷರಾದ ಭಾರಧ್ವಾಜ್ ನೇತೃತ್ವದಲ್ಲಿ ಗಂಗಾವತಿ ಘಟಕದ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಹನುಮಂತಪ್ಪ ಅಂಬಿಗೇರ, ಪ್ರಧಾನ ಕಾರ್ಯದರ್ಶಿ ಮಾರುತಿ ಹಮಣಿ ಮತ್ತು ವಾದಿರಾಜ್ ನಾಡಿಗೇರ್, ಬೇಲೂರಪ್ಪ, ಭೀಮಪ್ಪ, ಎಂ.ಡಿ.ರಫೀಕ್, ಹುಸೇನ್‌ಸಾಬ್, ಹನುಮಂತ, ಚಂದ್ರಶೇಖರಗೌಡ, ಪ್ರಕಾಶ, ಬಾಲಚಂದ್ರಪ್ಪ, ದೇವೇಂದ್ರಪ್ಪ ಮುಂತಾದವರ ನೇತೃತ್ವದಲ್ಲಿ ಘಟಕದ ಎಲ್ಲಾ ಕಾರ್ಮಿಕರು ಬಂದ್‌ನ್ನು ಬೆಂಬಲಿಸಿದ್ದಕ್ಕಾಗಿ ಅವರುಗಳನ್ನು ಎಐಸಿಸಿಟಿಯು ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.