ಹೊಸಪೇಟೆಯಲ್ಲಿ ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಿರ್ಲೋಸ್ಕರ್ ಮಹಿಳಾ ಕ್ಲಬ್ ಹಾಗೂ ತಾಯಮ್ಮ ಶಕ್ತಿಸಂಘ ಸಂಯುಕ್ತವಾಗಿ ವಿವಿಧ ಮಹಿಳಾ ಸಂಘಟನೆಗಳೊಂದಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಹೊಸಪೇಟೆ:ವಿಶ್ವ ಪ್ರವಾಸಿ ತಾಣ ಹಂಪಿ ಇರುವುದರಿಂದ ಹೊಸಪೇಟೆ ನಗರ ಸೇರಿದಂತೆ ಹಂಪಿ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಎಲ್ಲರೂ ಪಣ ತೊಡಬೇಕೆಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಹೇಳಿದರು.
ನಗರದಲ್ಲಿ ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಿರ್ಲೋಸ್ಕರ್ ಮಹಿಳಾ ಕ್ಲಬ್ ಹಾಗೂ ತಾಯಮ್ಮ ಶಕ್ತಿಸಂಘ ಸಂಯುಕ್ತವಾಗಿ ವಿವಿಧ ಮಹಿಳಾ ಸಂಘಟನೆಗಳೊಂದಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಗದದ ಬಳಕೆಯ ಬಗ್ಗೆ ಎಲ್ಲರೂ ಅರಿವು ಮೂಡಿಸಿಕೊಳ್ಳಬೇಕೆಂದರು. ಕಿರ್ಲೋಸ್ಕರ್ ಮಹಿಳಾ ಕ್ಲಬ್ ಅಧ್ಯಕ್ಷೆ ಕಮಲಾ ಗುಮಾಸ್ತೆ ಮಾತನಾಡಿ, ಪ್ಲಾಸ್ಟಿಕ್ ಹಾನಿಕರಕವಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಬದಲು ಕಾಗದಗಳನ್ನು ಬಳಸಬೇಕು. ಈ ಮೊದಲು ಕಾಗದ ಬಳುಸುತ್ತಿದ್ದೇವೆ. ಅದನ್ನೇ ಮುಂದುವರೆಸಬೇಕೆಂದರು. ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಜಾಥವನ್ನು ಉದ್ಘಾಟಿಸಿ, ನಗರಸಭೆಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಜಾರಿಗೆ ತರಲಾಗುವುದು ಎಂದರು. ಜಾಥವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ಲಾಸ್ಟಿಕ್ ಬಳಕೆಯ ಹಾನಿಕಾರಕದ ಬಗ್ಗೆ ಜಾಗೃತಿ ಮೂಡಿಸಿತು. ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಜಾಥಾ ತೆರಳಿ ಅಲ್ಲಿಯ ಜನರಿಗೆ ಕಾಗದದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿತು. ಕರಪತ್ರ ವಿತರಿಸಿತು. ನಗರಸಭೆ ಕಾರ್ಯಾಲಯದಿಂದ ಹೊರ ಜಾಥಾವು ನಗರದಲ್ಲಿ ಸಂಚರಿಸಿತು.
0 comments:
Post a Comment
Click to see the code!
To insert emoticon you must added at least one space before the code.