ಕೊಪ್ಪಳ ಮಾ. ೨೮ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರಿಂದ ಕೊಪ್ಪಳ ತಾಲ್ಲೂಕಿನ ಹಿರೇ ಸಿಂಧೋಗಿ ಗ್ರಾಮದಲ್ಲಿ ಬಯೋ ಕಾಂಪೋಸ್ಟಿಂಗ್‌ನ (ಜೈವಿಕ ಮಿಶ್ರಗೊಬ್ಬರ) ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಗುಜರಾತ್-ಎಕೋ ಸಂಸ್ಥೆಯ ಬಯೋಕಾಂಪೋಸ್ಟರ್ನ್ನು ಬಳಸಿ ಬಸವರಾಜ ಹೂಗಾರ ರವರ ಕೊಟ್ಟಿಗೆ ಗುಂಡಿಯಲ್ಲಿ ಮಿಶ್ರಣದ ಬಳಕೆಯನ್ನು ರೈತರಿಗೆ ಪ್ರಯೋಗಾತ್ಮಕವಾಗಿ ತೋರಿಸಲಾಯಿತು.
ಹಿರೇಸಿಂಧೋಗಿ ಗ್ರಾಮದ ರೈತರಿಗೆ ಜೈವಿಕ ಗೊಬ್ಬರದ ಮಹತ್ವ ಮತ್ತು ಕೊಟ್ಟಿಗೆ ಗೊಬ್ಬರದ ಶುಚಿತ್ವ, ಸ್ವಚ್ಛತೆ ಬಗ್ಗೆ ಮಾಹಿತಿ ನೀಡಲಾಯಿತು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಸ್ತರಣಾ ಮುಂದಾಳುಗಳಾದ ಡಾ. ವಿ.ಆರ್.ಜೋಶಿ ಮತ್ತು ವಿಜ್ಞಾನಿಗಳಾದ ಡಾ. ಎಂ.ಬಿ. ಪಾಟೀಲ, ಡಾ. ಯೂಸುಫ್‌ಅಲಿ ನಿಂಬರಗಿ, ರೋಹಿತ್ ಕೆ.ಎ, ಡಾ. ಶೇಷಗಿರಿ, ನಾಗರತ್ನ, ಸಹಾಯಕ ಕೃಷಿ ನಿರ್ದೇಶಕರು. ವೆಂಕಟರಮಣ ಹೆಗಡೆ, ಶ್ರಮಜೀವಿ ಅಗ್ರಿ ಫಿಲ್ಮ್, ಬೆಂಗಳೂರು ಹಾಗೂ ರೈತರಾದ ಬಸವರಾಜ ಹೂಗಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಸವರಾಜ ಹೂಗಾರರು ತಮ್ಮ ಅನುಭವಗಳೊಂದಿಗೆ ಗ್ರಾಮದ ರೈತರಿಗೆ ಬಯೋ ಕಾಂಪೋಸ್ಟಿನ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು ಹಾಗೂ ಸಹಕರಿಸಿದಂತಹ ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿಗಳಿಗೆ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.