PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಡಿ.30(ಕರ್ನಾಟಕವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನಗರಸಭೆಯ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ, ಅಂತಹ ಫ್ಲೆಕ್ಸ್‍ಗಳನ್ನು ತೆರವುಗೊಳಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
         ಸಾರ್ವಜನಿಕರು, ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಧಾರ್ಮಿಕ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಂಘಟಕರು, ಕಾರ್ಯಕರ್ತರು ಹಾಗೂ ಇನ್ನಿತರೇ ವ್ಯವಹಾರ ನಡೆಸುತ್ತಿರುವ ಉದ್ದಿಮೆ/ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಧಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಗಳ ಬಗ್ಗೆ ಸ್ವಾಗತ ಕೋರುವ ಬ್ಯಾನರ್ ಅಥವಾ ಪ್ಲೆಕ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆಯ ಪರವಾನಿಗೆ ಕಡ್ಡಾಯವಾಗಿದೆ.  ಕಳೆದ ಅ.01 ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿವಿಧ ಫ್ಲೆಕ್ಸ್/ಬ್ಯಾನರ್ ಅಳವಡಿಕೆಗೆ ದರ ನಿಗದಿಪಡಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಫ್ಲೆಕ್ಸ್ ಅಥವಾ ಬ್ಯಾನರ್ ಅಳವಡಿಸಬೇಕಾದಲ್ಲಿ ವಿವಿಧ ಷರತ್ತಿಗೊಳಪಟ್ಟು ನಗರಸಭೆಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆದು ಅಳವಡಿಸಿಕೊಳ್ಳಬಹುದು.  ಅಳವಡಿಸುವ ಬ್ಯಾನರ್/ಪ್ಲೆಕ್ಸ್ ಕೆಳಗಡೆ ರಶೀದಿ ಸಂಖ್ಯೆ, ಪರವಾನಿಗೆ ಪಡೆದ ಫ್ಲೆಕ್ಸ್‍ಗಳ ಸಂಖ್ಯೆ ಮತ್ತು ಮೊಬೈಲ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು, ಪರವಾನಿಗೆ ಪಡೆದ ದಿನಗಳಿಗೆ ಮಾತ್ರ ಬ್ಯಾನರ್/ಪ್ಲೆಕ್ಸ್‍ಗಳನ್ನು ಅಳವಡಿಸಬೇಕು, 2*3 ಅಡಿ ಅಳತೆಗೆ ಪ್ರತಿ ವಾರಕ್ಕೆ ರೂ.100/-, 5*6 ಅಡಿ ಅಳತೆಗೆ ಪ್ರತಿ ವಾರಕ್ಕೆ ರೂ.200/-, 8*10 ಅಡಿ ಅಳತೆಗೆ ಪ್ರತಿ ವಾರಕ್ಕೆ ರೂ.300/-, ಅದಕ್ಕಿಂತಲೂ ಮೇಲ್ಪಟ್ಟ ಅಳತೆಗೆ ಪ್ರತಿ ವಾರಕ್ಕೆ ರೂ.500 ಪಾವತಿಸಬೇಕು. ಪರವಾನಿಗೆ ಪಡೆಯದೇ ಅಳವಡಿಸಲಾದ ಬ್ಯಾನರ್/ಪ್ಲೆಕ್ಸ್‍ಗಳನ್ನು ನಗರಸಭೆಯಿಂದ ತೆರವುಗೊಳಿಸಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು  ತಿಳಿಸಿದ್ದಾರೆ.

30 Dec 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top