೫ನೇ ವಾರ್ಡ್ ಮಹಿಳಾ ಶೌಚಾಲಯವನ್ನು ಅತಿಕ್ರಮಿಸಿ, ಪಟ್ಟಭದ್ರ ಹಿತಾಸಕ್ತಿಗಳು ಶೆಡ್‌ಗಳನ್ನು ನಿರ್ಮಿಸಿ ಆಕ್ರಮಿಸಿಕೊಳ್ಳುತ್ತಿರುವ ವಿರುದ್ಧ ೨,೩,೪ ಮತ್ತು ೫ನೇ ವಾರ್ಡ್‌ನ ಸುಮಾರು ೫೦೦ ಕ್ಕಿಂತ ಹೆಚ್ಚು ಮಹಿಳೆಯರು ದಿನಾಂಕ ೨೬-೧೨-೨೦೧೪ ಶುಕ್ರವಾರ ರಂದು ನಗರಸಭೆ ಕಾರ್ಯಾಲಯವನ್ನು ಮುತ್ತಿಗೆ ಹಾಕಿರುತ್ತಾರೆ. ನಗರಸಬೇ ಅಧ್ಯಕ್ಷ ಶಾಮೀದ್ ಮನಿಯಾರ್ ಧರಣಿ ನಿರತರಿಗೆ ಸೋಮವಾರದ ಒಳಗಾಗಿ ಅನಧಿಕೃತ ಶೆಡ್‌ಗಳನ್ನು ತೆರುವುಗೊಳಿಸುತ್ತೇನೆಂದು ಆಶ್ವಾಸನೆ ನೀಡಿ ಧರಣಿ ನಿರತರನ್ನು ಧರಣಿ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಇಂದಿನವರೆಗೂ ಯಾವುದೇ ಶೆಡ್‌ಗಳನ್ನು ತೆರುವುಗೊಳಿಸದೇ ಇನ್ನು ಎರಡು ಹೊಸ ಶೆಡ್‌ಗಳನ್ನು ಶೌಚಾಲಯವನ್ನು ಕೆಡವಿ ನಿರ್ಮಿಸಿದ್ದು, ನಗರಸಭೆಯ ಶೌಚಾಲಯ ರಾಜಕೀಯವಾಗಿದೆ ಎಂದು ಪ್ರಗತಿಪರ ಮಹಿಳಾ ಸಂಘದ ಜಿಲ್ಲಾ ಸಂಚಾಲಕಿ ಶಾಂತಕುಮಾರಿ ಖೇದ ವ್ಯಕ್ತಪಡಿಸಿದ್ದಾರೆ.
ನಗರದ ೨,೩,೪ ಮತ್ತು ೫ನೇ ವಾರ್ಡ್‌ನ ಸುಮಾರು ೨೦೦೦ ಕ್ಕಿಂತ ಹೆಚ್ಚು ಮಹಿಳೆಯರಿಗೆ ಉಪಯೋಗದಲ್ಲಿರುವ ಶೌಚಾಲಯವನ್ನು ನಗರದ ಭೂಗಳ್ಳರು ಆಕ್ರಮಿಸಿ ಮಹಿಳೆಯರಿಗೆ ಶೌಚಬಾಧೆ ತೀರಿಸಿಕೊಳ್ಳಲು ಆಗದಿರುವಂತಹ ಕಷ್ಟವನ್ನು ಕೊಟ್ಟಿದ್ದಾರೆ. ಇದು ಮಾನವಹಕ್ಕುಗಳ ಮತ್ತು ಮಹಿಳಾ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಶಾಮೀದ್‌ಮನಿಯಾರನವರು ಮಹಿಳೆಯರ ರಕ್ಷಣೆಗೆ ನಿಂತ ಸಂಘಟನೆಯ ಮುಖಂಡರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿಕೆ ನೀಡಿದ್ದಾರೆ. ಮಹಿಳೆಯರಿಗೆ ಮೂಲಭೂತ ಸೌಕರ್ಯ ಕಿತ್ತುಕೊಂಡಿರುವ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅವರೇ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ದಿನಾಂಕ ೦೧-೦೧-೨೦೧೫ ರಂದು ಹೊಸವರ್ಷದಂದು ಮಹಿಳೆಯರ ರಕ್ಷಣೆಗಾಗಿ ನಗರಸಭೆ ಮುಂದೆ ಸಾವಿರಾರು ಮಹಿಳೆಯರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು.ಗಂಗಾವತಿ ನಗರದಲ್ಲಿರುವ ೩೧ ವಾರ್ಡ್‌ಗಳಲ್ಲಿ ಮಹಿಳಾ ಶೌಚಾಲಯಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿ ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನು ಮುಂದಿಟ್ಟುಕೊಂಡು ಎಲ್ಲಾ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಫೆಬ್ರವರಿ ತಿಂಗಳಲ್ಲಿ ಗಂಗಾವತಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಪ್ರಗತಿಪರ ಮಹಿಳಾ ಸಂಘದ ಸಂಚಾಲಕಿ ಶಾಂತಕುಮಾರಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.