PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಡಿ. ೨೯ ಮಹಿಳೆಯರು ತಮ್ಮ ಬಡತನವನ್ನು ಹೋಗಲಾಡಿಸಲು ಸಂಜೀವಿನಿ ಯೋಜನೆಯ  ಗ್ರಾಮ ಪಂಚಾಯತಿ ಒಕ್ಕೂಟದ ವತಿಯಿಂದ ಸಮುದಾಯ ಬಂಡವಾಳ ನಿಧಿ ಸೌಲಭ್ಯ ಪಡೆದು ನಿರ್ಧಿಷ್ಠ  ಆರ್ಥಿಕ ಚಟುವಟಿಕೆಯಲ್ಲಿ ತೊಡಗುವ ಮೂಲಕ ಸ್ವಾವಲಂಬಿಗಳಾಗಿ  ಅಭಿವೃದ್ದಿಯಾಗಬೇಕೆಂದು ಗ್ರಾ.ಪಂ ಅಧ್ಯಕ್ಷ ರಮೇಶ ಯಲ್ಲಪ್ಪ ಕರಡಿ ತಿಳಿಸಿದರು.  
ತಾಲೂಕಿನ ಅಳವಂಡಿ ಗ್ರಾಮ ಪಂಚಾಯತಿಯ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ತಾ.ಪಂ ಕೊಪ್ಪಳ, ಗ್ರಾ.ಪಂ ಅಳವಂಡಿ  ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಜೀವಿನಿ ವಾರ್ಡ ಒಕ್ಕೂಟದ ಸ್ವ ಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ ಬಳಕೆ ಹಾಗೂ ಎಮ್.ಐ.ಪಿ ಸಿದ್ದಪಡಿಸುವಿಕೆಯ  ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಹಿಳೆಯರು ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ನಿರ್ಧಿಷ್ಠ ಗುರಿಹೊಂದಿ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.    
ತಾಲೂಕ ವಲಯ ಮೆಲ್ವಿಚಾರಕರು ಪ್ರಸನ್ನಕುಮಾರವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿ ಸಂಜೀವಿನಿ ಯೋಜನೆಯೂ ಸ್ವ ಸಹಾಯ ಸಂಘಗಳ ಶ್ರೋಯೊಭಿವೃದ್ದಿಗಾಗಿ ಸುತ್ತುನಿಧಿ, ಬಡ್ಡಿ ಸಹಾಯ ಧನ ನೀಡುವುದರ ಜೋತೆಗೆ ಗ್ರಾಮೀಣ ಮಟ್ಟದಲ್ಲಿ ವಾರ್ಡ ಒಕ್ಕೂಟಗಳನ್ನು ರಚಿಸಿ ಆ ಮೂಲಕ ಗ್ರಾಮ ಪಂಚಾಯತಿ ಒಕ್ಕೂಟದಿಂದ ಸ್ವ ಸಹಾಯ  ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ ಸೌಲಭ್ಯವನ್ನು  ಪಡೆದು ಜೀವನೊಪಾಯ ಕೃಷಿ ಕೃಷಿಯೇತರ ಆರ್ಥಿಕ ಚಟುವಟಿಕೆಯನ್ನು ಕೈಗೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಗಳಾಗಿ ಬದಕಲು ಇಂದಿನ ಎಮ್.ಐ.ಪಿ ತರಬೇತಿಯ ಉಪಯೋಗವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಧು ತಿಳಿಸಿದರು. 
ಈ ಸಂದರ್ಭದಲ್ಲಿ ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಹೆಚ್.ಡಿ ನಟರಾಜರವರು ವಾರ್ಡ ಒಕ್ಕೂಟದ ಸ್ವ ಸಹಾಯ ಸಂಘಗಳಿಗೆ ಎಮ್.ಐ.ಪಿ ಅಗತ್ಯತೆ ಹಾಗೂ ಎಮ್.ಐ.ಪಿ ಸಿದ್ದಪಡೆಸುವಿಕೆಯ ಕುರಿತು  ಗುಂಪು ಚಟುವಟಿಕೆಗಳ ಮೂಲಕ ಅಭ್ಯಾಸ ನಡೆಸಿ ತರಬೇತಿ ನೀಡಿದರು.   
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ನಿಂಗನಗೌಡ, ಎಸ್.ಬಿ.ಹೆಚ್ ಮ್ಯಾನೇಜರ್ ಮುಳಗುಂದ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸುನಂದಾ, ವಲಯ ಮೇಲ್ವಿಚಾರಕಾರಾದ ನಾಗೇಂದ್ರ ಧರಿ, ಕೆ.ಎಮ್.ಎಫ್ ನ ಸಂಘದ ಕಾರ್ಯದರ್ಶಿ ಪ್ರತಿಭಾ.ಪಿ.ಕಲ್ಲಗುಡಿ, ಗ್ರಾ.ಪಂ ಸದಸ್ಯರಾದ ಗೌರಮ್ಮ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ ಬಣ್ಣದ ಹಾಜರಿದ್ದರು.  

29 Dec 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top