PLEASE LOGIN TO KANNADANET.COM FOR REGULAR NEWS-UPDATES

ಯುವ ಸಮುದಾಯ ಅಭಿವೃದ್ದಿ ತರಬೇತಿ ಶಿಬಿರ 


    ಮಂಗಳೂರು :  ಅಪಘಾತಕ್ಕೆ ನಮ್ಮ ನಿರ್ಲಕ್ಷವೇ ಮೂಲ ಕಾರಣ ನಮ್ಮ ನಿರ್ಲಕ್ಷದಿಂದ ಹಲವಾರು ಅಪಘಾತಕ್ಕೆ ನಾವು ಅನುವು ಆಗುತ್ತೆವೆ. ವಿಪತ್ತು ಅಥವಾ ಅಪಘಾತ ಸಂಭವಿಸಿದಾಗ ಬೇರೆಯವರು ಬಂದು ಸರಿಪಡಿಸುತ್ತಾರೆ ಎಂದು ನಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತೇವೆ ಬೇರೆಯೊಬ್ಬರ ಮೇಲೆ ಗೂಬೆ ಕೂಡಿಸುವುದರ ಬದಲು ನಮ್ಮ ಮತ್ತು ಸಮಾಜದ ಯಾವುದೆ ಸಮಸ್ಯೆ ಬಗೆಹರಿಸಲು ನಾವು ಸ್ವಲ್ಪವಾದರು ಪ್ರಯತ್ನ ಪಡಬೇಕು. ಎಂದೊಗು ನಾವು ಬೇರೆಯವರ ಮೇಲೆ ಅವಲಂಬನೆ ಆಗಬಾರದು  ಮತ್ತು ಸುತ್ತಮುತ್ತ ಆಗುವ ವಿಪತ್ತನ್ನು ನಿರ್ವಹಿಸಲು ನಾವು ಸದಾ ಬದ್ದರಾಗಬೇಕು ಎಂದು ಜಿಲ್ಲಾ ಅಗ್ನಿ ಶಾಮಕದಳದ ಪ್ರಭಾರಿ ಜಿಲ್ಲಾಅಧಿಕಾರಿಯಾದ ಖಾಜಾಮೈನುದ್ದಿನ ತಿಳಿಸಿ ವಿಪತ್ತು ನಿರ್ವಹನೆಯ ಅನಕು ಪ್ರದರ್ಶನ ನಿಡಿದರು. 
     
     ಇವರು ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ, ವಂದೇಮಾತರಂ ಯುವ ಸಂಘ(ರಿ) ಕದ್ರಳ್ಳಿ ಹಾಗೂ ಸ್ಥಳೀಯ ಯುವ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಯುವ ಸಮುದಾಯ ಅಭಿವೃದ್ದಿ ತರಬೇತಿ ಶಿಬಿರದ ಎರಡನೇ ದಿನದ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ 

      ಅಧ್ಯಕ್ಷತೆಯನ್ನು ಎ. ಎಚ್ ಕುಮಾರ ವಹಿಸಿದ್ದರು, ಮುಖ್ಯಅಥಿತಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ವಾಯ್. ದೊಡ್ಡಮನಿ, ಶರಣಪ್ಪ ಉಮಚಗಿ, ಎನ್. ಜಿ ಗೌಡರ್, ಲಿಂಗರಾಜ ಅಬ್ಬಿಗೇರಿ, ಬಸವರಾಜ ಪಟ್ಟಣಶೆಟ್ಟಿ, ಅಂಬರೇಶ ಹಂಚಿನಮನಿ, ಶರಣಪ್ಪ ಮಳಿಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ರಾಕೇಶ್ ಕಾಂಬ್ಳೇಕರ್. ಸ್ವಾಗತವನ್ನು ನೆಹರು ಯುವ ಕೇಂದ್ರದ ಯುವ ಸಾಥಿಯಾದ ಪ್ರಿಯಾಂಕ ಯಲಬುರ್ಗಿಮಠ, ನಿರೂಪಣೆಯನ್ನು ಗವಿಸಿದ್ದಮ್ಮ ಹಿರೇಮಠ, ವಂದನಾರ್ಪಣೆ ಮಂಜುನಾಥ ಹಂಚಿನಮನಿ ಮಾಡಿದರು .
28 Nov 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top