ಹಿಂದಿ ಮತ್ತು ಇನ್ನಿತರ ಭಾಷೆಗಳಲ್ಲಿ ಭಾನುವಾರ ಪ್ರಸಾರವಾಗುತ್ತಿರುವ ಸಮಾಜ ಮುಖಿಯಾದ ಸಾಮಾಜಿಕ ಸಮಸ್ಯೆಗಳನ್ನು ಜನರ ಎದುರಿಗೆ ತರುವ ವಿಶೇಷವಾದ ಕಾರ್ಯಕ್ರಮ ಸತ್ಯಮೇವ ಜಯತೇ.
ಸತ್ಯಮೇವ ಜಯತೇ ಕಾರ್ಯಕ್ರಮವು ಹಿಂದಿ, ತಮಿಳು, ಹಿಂದಿ, ತೆಲುಗು, ಆಂಗ್ಲ ಮತ್ತು ಇನ್ನಿತರೆ ಸ್ಥಳೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ ಕನ್ನಡದಲ್ಲಿ ಮಾತ್ರ ಏಕೆ ಪ್ರಸಾರವಾಗುತ್ತಿಲ್ಲ? ಕನ್ನಡದಲ್ಲಿ ಪ್ರಸಾರವಾದರೆ ನಾವು(ಜನರು) ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಬಹುದು ಅಲ್ಲವೆ ಎನ್ನುವುದು ಬುದ್ಧಿಜೀವಿಗಳ ಅಭಿಮತ.
ನಾವು ಡಬ್ಬಿಂಗೆ ವಿರೋಧಿಗಳಾಗಿರುವುದರಿಂದ ಅಂಥದೇ ಒಂದು ಕಾರ್ಯಕ್ರಮವನ್ನು ಕನ್ನಡದಲ್ಲಿ ಏಕೆ ನಿರ್ಮಿಸಬಾರದು? ನಿಟ್ಟಿನಲ್ಲಿ ಏಕೆ ಯತ್ತಿಸಬಾರದು? ’ಕೌನ್ ಬನೇಗಾ ಕರೋಡ್ ಪತಿ’ ನಮ್ಮಲ್ಲಿ ’ಕೋಟ್ಯಾಧಿಪತಿ’ ಮತ್ತು ’ಬಿಗ್‌ಬಾಸ್’ ಗಳಂತಹ ಕಾರ್ಯಕ್ರಮಗಳು ಮರುಸೃಷ್ಟಿ ಆಗಲಿಲ್ಲವೇ ಇದೇ ಅಲ್ಲದೆ ತಮಿಳು, ತೆಲುಗು, ಹಿಂದಿಯ ಅನೇಕ ಧಾರವಾಹಿಗಳು, ಕಾರ್ಯಕ್ರಮಗಳನ್ನು ಕನ್ನಡದಲ್ಲಿ ತಯಾರಿಸಿ ಪ್ರಚಾರಮಾಡುತ್ತಿರುವಂತೆ ಇದನ್ನು ಏಕೆ ನಾವೇ ತಯಾರಿಸಿ ಪ್ರಸಾರ ಮಾಡಬಾರದು. ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಕನ್ನಡದಲ್ಲಿ ಪ್ರಸಾರಮಾಡಿ ಜನರ ಅನೇಕ ಬಗೆಯ ಸಮಸ್ಯೆಗಳನ್ನು ಮಾಧ್ಯಮ ಎದುರಿಗೆ ತಂದು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗಿದೆ.
- ಕೆ.ಟಿ.ಆರ್.
ಬೆಂಗಳೂರು
೭೮೯೯೩೨೪೫೩೩
0 comments:
Post a Comment
Click to see the code!
To insert emoticon you must added at least one space before the code.