ಮಕ್ಕಳಲ್ಲಿ ಕಥೆ ಹೇಳುವ, ಕೇಳುವ ಹಾಗೂ ಬರೆಯುವ ಅಭಿರುಚಿ ಬೆಳೆಸುವ ’ಕಥಾ ಸಮಯ’ (ಕಥಾ ರಸಗ್ರಹಣ ಶಿಬಿರ) ವನ್ನು ನಗರದ ದಂಡು ಪ್ರದೇಶದಲ್ಲಿರುವ ಸರಕಾರಿ ಬಾಲಮಂದಿರದಲ್ಲಿ ಸೆ. ೨೮ ರಂದು ಭಾನುವಾರ ಹಾಗೂ ಅ. ೫ ರಂದು ಆಯೋಜಿಸಲಾಗಿದೆ.
ಬೆಂಗಳೂರಿನ ಸಿದ್ಧಿ ಫೌಂಡೇಷನ್, ತುಂಗ ಭದ್ರಾ ಡ್ಯಾಂನ ಕನ್ನಡ ಕಲಾ ಸಂಘ ಹಾಗೂ ನಗರದ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ನಡೆಯಲಿರುವ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ಸೆ. ೨೮ ರಂದು ಭಾನುವಾರ ಬೆ. ೧೦-೩೦ ಗಂಟೆಗೆ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಮಂದಿರದ ಅಧೀಕ್ಷಕ ಹೇಮರೆಡ್ಡಿ ಅವರು ವಹಿಸುವರು.
ಶಿಬಿರದಲ್ಲಿ ಸಿದ್ಧಿ ಫೌಂಡೇಷನ್‌ನ ಕರಣಂ ಮೇಘಶ್ಯಾಮ್, ಶ್ರೀಮತಿ ಪದ್ಮಾ ಮೇಘ ಶ್ಯಾಮ್, ಅನಿಲ್ ಸಂಡೂರು, ಕನ್ನಡ ಕಲಾ ಸಂಘದ ಆರ್. ಬದರಿನಾರಾಯಣ, ಟಿ ಜಿ ಸದಾನಂದ, ಬದರೀಶ್ ಮತ್ತಿತರರು ಪಾಲ್ಗೊಂಡು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಕಥೆ ಹೇಳಿ, ಕೇಳಿ, ಬರೆಯಿಸಿ, ಮತ್ತಿತರ ಆಟ ಪಾಠಗಳ ಮೂಲಕ ಹೊರತರಲು ಶ್ರಮಿಸುವರು ಎಂದು ಸಂಸ್ಕೃತಿ ಪ್ರಕಾಶನದ ಸಿ ಮಂಜುನಾಥ್ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.