PLEASE LOGIN TO KANNADANET.COM FOR REGULAR NEWS-UPDATES


ಎಂತಹ ಅದ್ಬುತವಿದು ಜೇಡ
ಹೊರಗೆ ಕಾಣುವ ಕಣ್ಣುಗಳಷ್ಟೇ ಅಲ್ಲ
ಇದ್ದರೂ ಮರೆಯಾದ ಎರಡು ಕಣ್ಣುಗಳು 
ಒಳಗಿವೆ ಬೆಳಕ ಹೀರಲು

ಎಲ್ಲ ಜೇಡಗಳು ವಿಷಕಾರಿಯಲ್ಲ
ಆದರೆ ಬಲೆ ನೇಯುತ್ತವೆ
ಜೊಲ್ಲು ಸುರಿಸಿ ಅಂದವಾಗಿಯೇ ನೇಯುತ್ತವೆ
ಅದ್ಬುತ ನೇಯ್ಗೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ
ಇದು ಇಲ್ಲದ ಜಾಗೆಯಿಲ್ಲ 
ಜೋಪಡಿ,ಮಹಲೂ ಒಂದೇ ಇದಕೆ

ಆಹಾ ಏನೇನಾಕಾರ ? ಎಷ್ಟು ಚಂದದ ನೇಯ್ಗೆ
ಮಂಜಿನ ಹನಿಗಳೊ ? ಮುತ್ತಿನ ಸಾಲುಗಳೊ?
ಆಧುನಿಕ ಯುಗಕ್ಕೆ ತಕ್ಕ ಹೊಸ ಮಾದರಿಗಳು
ಕ್ಷುಲ್ಲಕವೆಂದು ನಿರ್ಲಕ್ಷ ಮಾಡದಿರಿ
ಇದು ಪಾಚಿಗಟ್ಟಿ , ಗೋಡೆ, ಗೆದ್ದಲು ತಿಂದ ಜಾಗ
ಎಲ್ಲವನ್ನೂ  ಮರೆಮಾಡುತ್ತೆ
ಗತಕಾಲದ್ದೆಂದು ಎಸೆದದ್ದನ್ನು ಮುಚ್ಚಿ ಕಾಪಾಡುತ್ತೆ

ಯಾವಾಗಲಾದರೊಮ್ಮೆ ಇದನ್ನು ತೆಗೆಯಲು ಪ್ರಯತ್ನಿಸಲಾಗುತ್ತೆ
ಒಂದು ದಿನಸ್ವಚ್ಛವಾದರೆ ಮರುದಿನವೇ ಕಾಣಿಸುತ್ತೆ
ಕೈ ಸೋತು ಹೋಗುತ್ತವೆ 
ಮತ್ತೆ ಮುಂದೆ ನೋಡೋಣ,ಸ್ವಚ್ಛ ಮಾಡೋಣ
ಇರಲಿ ಬಿಡು ಅದರಿಂದೇನು ಕೇಡು ?
ಮರೆಮಾಡಿಲ್ಲವೇ ಅದು ನಮ್ಮ ಗೆದ್ದಲು ಹತ್ತಿದ ಗೋಡೆಯ
ಹಾಳುಮೂಳು ಕಸ ಕಡ್ಡಿಯ ?
ಅದರಿಂದ ಉಪಯೋಗವೂ ಇದೆ
ವಿಷಕೀಟಗಳು ಬರದಂತೆ ತಡೆಯುತ್ತೆ
ತನ್ನ ಬಲೆಯಲ್ಲಿ ತಾನೇ ಸತ್ತಂತೆ ನಟಿಸಿ 
ಬಲೆಯಲ್ಲಿ ಬಂದು ಸಿಕ್ಕಿಕೊಂಡಿದ್ದನ್ನು ತಿಂದು ಹಾಕುತ್ತೆ 

ಅದ್ಬುತವಿದು ಜೇಡ ಮತ್ತದರ ಬಲೆ
ಹುಟ್ಟಿ ಸಾಯುವವರು ನಾವು 
ಸಾವು ಎಲ್ಲಿದೆ ಈ ಜೇಡಕ್ಕೆ ? ಬಲೆಗೆ? 

Advertisement

0 comments:

Post a Comment

 
Top