PLEASE LOGIN TO KANNADANET.COM FOR REGULAR NEWS-UPDATES

ಕುಷ್ಟಗಿ : ೨೭. ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾಜಿ ಸಚಿವರು ಇವರ ಷಷ್ಠಿಪೂರ್ತಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯು ಇಂದು ಬೆ.೧೧.೩೦ ಕ್ಕೆ ಮಾಜಿ ಸಚಿವರ ಮನೆಯಲ್ಲಿ ಜರುಗಿತು. ಪ್ರಾರಂಭದಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ನಾಡಿನ ಸಮರ್ಥ ಜನನಾಯಕರಲ್ಲಿ ಒಬ್ಬರಾದ ಬಯ್ಯಾಪೂರರು ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಾಧನೆಗೈದು ೬೦ ವಸಂತಗಳನ್ನು ಪೂರೈಸಿದ ನಿಮಿತ್ಯ ಇದೇ ದಿನಾಂಕ : ೧೬.೧೨.೨೦೧೪ ರಂದು ಕುಷ್ಟಗಿ ನಗರದಲ್ಲಿ ಷಷ್ಠಿಪೂರ್ತಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದ್ದು, ಈ ಸಭೆಯಲ್ಲಿ ಚರ್ಚಿಸಿ ಕಾರ್ಯಕ್ರಮದ ರೂಪಿಸಿ ಯಶಸ್ವಿಗೊಳಿಸಲು ಕೋರಿದರು.
        
      ಸಭೆಯಲ್ಲಿ ಮುಖಂಡರುಗಳಾದ ದೇವೆಂದ್ರಪ್ಪ ಬಳೂಟಗಿ, ಸೋಮನಗೌಡ ಪಾಟೀಲ, ತಾಜುದ್ದೀನ ದಳಪತಿ, ಪಕೀರಪ್ಪ ಚಳಗೇರಿ ವಕೀಲರು, ಜಯತೀರ್ಥ ದೇಸಾಯಿ, ಶ್ರೀಮತಿ ಮಾಲತಿ ನಾಯಕ, ಲಚ್ಚಪ್ಪ ಲಾಳಿ, ಪಿ.ಎ.ಕಾಳಗಿ, ಪ್ರಕಾಶ ರಾಠೋಡ, ಸಂಗಯ್ಯ ವಸ್ತ್ರದ, ಚಂದ್ರಶೇಖರ ಹಿರೇಮನಿ ಇವರುಗಳು ಕಾರ್ಯಕ್ರಮದ ಕುರಿತಂತೆ ತಮ್ಮ ಮೌಲಿಕವಾದ ಅಭಿಪ್ರಾಯಗಳನ್ನು ತಿಳಿಸಿದರು.  

        ಸ್ವಾಗತ ಸಮಿತಿ ಅಧ್ಯಕ್ಷರಾದ ಎಲ್.ಜಿ.ಕುಂಟನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಲ್ಲಪ್ಪ ಕುರ್ನಾಳ, ಪರಸನಗೌಡ ದಮ್ಮೂರ, ದೊಡ್ಡಯ್ಯ ಗದ್ದಡಕಿ, ಡಾ.ಬಿ.ಎಂ.ಗೌಡರ, ಹನುಮಂತಪ್ಪ ರಾಠೋಡ, ಶಂಕ್ರಪ್ಪ ಗುಜ್ಜಲ, ಮಹಾಂತೇಶ ಅಗಿಸಿಮುಂದಿನ ಮುಂತಾದವರು ಉಪಸ್ಥತರಿದ್ದರು.    ಕಾರ್ಯಕ್ರಮ ನಿರೂಪಿಸಿದ ಕೇದಾರನಾಥ ತುರುಕಾಣಿ ಕೊನೆಯಲ್ಲಿ ವಂದಿಸಿದರು. 

28 Sep 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top