PLEASE LOGIN TO KANNADANET.COM FOR REGULAR NEWS-UPDATES

 ರಾಜ್ಯ ಸರ್ಕಾರ ಇತ್ತೀಚಿಗೆ ಪದವಿ ತರಗತಿಳಲಿ ೧೫ ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವಂತಹ ಕಾಲೇಜುಗಳನ್ನು ಮುಚ್ಚಿಸಲು ಹೊರಟಿದೆ..ಮೊದಮೊದಲು ರಾಜ್ಯ ಸರ್ಕಾರ ಹಳ್ಳಿಹಳ್ಳಿಯಲ್ಲಿ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡಲು ಹೊರಟಿದ್ದ  ಸರ್ಕಾರಕ್ಕೆ ಈಗ ಹಿನ್ನೆಡೆಯಾಗಿದೆಯಾ? ಇಂತಹ ಕ್ರಮ ಕೈಗೊಂಡದ್ದರಿಂದ  ಹಲವಾರು ಅತಿಥಿ ಉಪನ್ಯಾಸಕರ ಬದುಕು ಬೀದಿ ಪಾಲಾಗುವಂತಹ ಸ್ಥಿತಿ ಬಂದೊದಗಿದೆ. ಈಗಾಗಲೇ ಬೇರೆ ಬೇರೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕೆಲಸದಿಂದ ಬಿಡುಗಡೆಗೊಂಡಿದ್ದಾರೆ. ಇವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೂಡಲೇ ಸರ್ಕಾರ ಕ್ರಮಕೈಗೊಂಡು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಆಯಾ ಕಾಲೇಜುಗಳ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳ ಪ್ರವೇಶ ಆಯಾ ಕಾಲೇಜುಗಳಲ್ಲಿ ಕಡ್ಡಾಯವಾಗುವಂತೆ ನಿಯಮ ರಚಿಸಬೇಕು. ಹಾಗೂ ಸರ್ಕಾರ  ಸಿಇಟಿ ಮೂಲಕ ಭರ್ತಿ ಮಾಡುವ ಬದಲು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅನುಭವಿ  ಅತಿಥಿ ಉಪನ್ಯಾಸಕರನ್ನೇ ಭರ್ತಿ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಅರೆಕಾಲಿಕ /ಅತಿಥಿ ಉಪನ್ಯಾಸಕರ ಸಂಘ(ರಿ) ಸಂಘದ ಅಧ್ಯಕ್ಷರಾದ ವೀರಣ್ಣ ಸಜ್ಜನರ    ತಿಳಿಸಿದ್ದಾರೆ. 

Advertisement

0 comments:

Post a Comment

 
Top