ಜಿಲ್ಲೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅನುಕೂಲವಾಗುವಂತೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಜಾರಿಗೊಳಿಸಿದ್ದಾರೆ.
ನಿಷೇಧಾಜ್ಞೆಯನ್ವಯ ಕೊಪ್ಪಳ ಜಿಲ್ಲೆಯಲ್ಲಿರುವ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆ.೨೯ ರಿಂದ ಸೆ.೧೩ ರವರೆಗೆ ಮಧ್ಯಪಾನ, ಮದ್ಯ ಮಾರಾಟ ನಿಷೇಧಿಸಲಾಗಿದೆ. ಆ.೩೧ ರಿಂದ ಸೆ.೦೧ ರವರೆಗೆ ಕೊಪ್ಪಳ ಗ್ರಾಮೀಣ, ಮುನಿರಾಬಾದ್, ಬೇವೂರು, ಗಂಗಾವತಿ ನಗರ, ಕಾರಟಗಿ ಮತ್ತು ಕುಷ್ಟಗಿ. ಸೆ.೦೨ ರಿಂದ ಸೆ.೦೩ ರವರೆಗೆ ಕೊಪ್ಪಳ ನಗರ, ಕೊಪ್ಪಳ ಗ್ರಾಮೀಣ, ಅಳವಂಡಿ, ಮುನಿರಾಬಾದ್, ಯಲಬುರ್ಗಾ, ಕುಕನೂರು, ಬೇವೂರು, ಗಂಗಾವತಿ ನಗರ, ಕಾರಟಗಿ ಮತ್ತು ಕುಷ್ಟಗಿ. ಸೆ.೦೪ ರಿಂದ ಸೆ.೦೫ ರವರೆಗೆ ಕೊಪ್ಪಳ ಗ್ರಾಮೀಣ, ಅಳವಂಡಿ, ಮುನಿರಾಬಾದ್, ಗಂಗಾವತಿ ನಗರ. ಸೆ. ೦೬ ರಿಂದ ೦೭ ರವರೆಗೆ ಅಳವಂಡಿ, ಮುನಿರಾಬಾದ್, ಗಂಗಾವತಿ ನಗರ. ಸೆ.೦೮ ರಿಂದ ಸೆ.೦೯ ರವರೆಗೆ ಕೊಪ್ಪಳ ಗ್ರಾಮೀಣ, ಮುನಿರಾಬಾದ್ ಹಾಗೂ ಗಂಗಾವತಿ ನಗರ. ಸೆ.೧೦ ರಿಂದ ಸೆ.೧೧ ರವರೆಗೆ ಹಾಗೂ ಸೆ.೧೨ ರಿಂದ ಸೆ.೧೩ ರವರೆಗೆ ಗಂಗಾವತಿ ನಗರದಲ್ಲಿ ನಿಗದಿತ ದಿನದಂದು ಬೆಳಿಗ್ಗೆ ೬ ಗಂಟೆಯಿಂದ ಮರು ದಿನದ ಬೆಳಿಗ್ಗೆ ೬ ಗಂಟೆಯವರೆಗೆ ಮದ್ಯಪಾನ, ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈ ಸಂಬಂಧ ಅಬಕಾರಿ ಉಪ ಆಯುಕ್ತರ ಮುಖಂಡತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು, ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.