ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರವು ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಫೆಡರೇಷನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಕಾಲೇಜು ಮೈದಾನದಲ್ಲಿ ನಡೆಯಬೇಕಾದ ಸ್ಥಳವನ್ನು ಬದಲಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಆ.೨೮ ರಂದು ಮಧ್ಯಾಹ್ನ ೩.೩೦ ಕ್ಕೆ ರಫ್ತು ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು, ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ವ್ಯವಹಾರಸ್ಥರು, ಕೃಷಿಕರು ಹಾಗೂ ತೋಟಗಾರಿಕೆ ಬೆಳೆಗಾರರು ಭಾಗವಹಿಸಿ ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ತರಬೇತಿಯ ಕಾಲಕ್ಕೆ ರಫ್ತು ವ್ಯವಹಾರ ಏಕೆ?, ಹೇಗೆ ? ಎಲ್ಲಿಗೆ? ಹಾಗೂ ನಮ್ಮ ಜಿಲ್ಲೆಯಿಂದ ಯಾವ ಯಾವ ಸಾಮಗ್ರಿಗಳನ್ನು ರಫ್ತು ಮಾಡಬಹುದು ಎಂಬ ಇತ್ಯಾದಿ ವಿವರಗಳಲ್ಲದೇ, ರಫ್ತು ನಿರ್ವಹಣೆಯಲ್ಲಿ ವಿವಿಧ ಹೆಜ್ಜೆಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರ ದೂರವಾಣಿ ಸಂಖ್ಯೆ: ೦೮೫೩೯-೨೩೧೧೧೦ ಅಥವಾ ವಿಟಿಪಿಸಿ, ಧಾರವಾಡ ಕಛೇರಿ ದೂ.೦೮೩೬-೨೨೨೨೬೦೦, ವಿಶ್ವನಾಥ ಸೂಸಿಮಠ ವಿಟಿಪಿಸಿ ಮೊ.೯೭೪೨೭೦೯೨೨೯ ಇವರನ್ನು ಸಂಪರ್ಕಿಸಬಹುದಾಗಿದೆ .
0 comments:
Post a Comment
Click to see the code!
To insert emoticon you must added at least one space before the code.