ಕನ್ನಡ ಸಾಹಿತ್ಯ ಪರಷತ್ತಿನ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿರಂಚಿ ಕಲಾ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಈಶ್ವರ ಹತ್ತಿಯವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ ೩೧-೦೮-೨೦೧೪ ರಂದು ರವಿವಾರ ಬೆಳಿಗ್ಗೆ ೧೦:೩೦ ಕ್ಕೆ ಕೊಪ್ಪಳದ ಪ್ರವಾಸಿ ಮಂದಿರದ ಎದುರಿಗಿರುವ ಜ.ಚ.ನಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಾಡಿನ ಖ್ಯಾತ ಸಾಹಿತಿಗಳಾದ ಪ್ರೊ. ಜಿ. ಎಚ್. ಹನ್ನೆರಡುಮಠ ಅವರು ನೆರವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೀರಣ್ಣ ನಿಂಗೋಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಡಾ. ಶ್ರೀ.ಮ.ನಿ.ಪ್ರ. ಚನ್ನಮಲ್ಲ ಮಹಾಸ್ವಾಮಿಗಳು ’ಗುನ್ನಾಳೇಶನ ವಚನಗಳು’ ಕೃತಿಯನ್ನು ಬಿಡುಗಡೆಗೊಳಿಸುವರು. ಗದಗಿನ ಮಕ್ಕಳ ಸಾಹಿತಿಯಾದ ಡಾ. ರಾಜೇಂದ್ರ ಗಡಾದ ಅವರು ’ಅಳ್ಳೊಳ್ಳಿ ಬಂತು ಕಳ್ಳೊಳ್ಳಿ’ (ಶಿಶು ಗೀತೆಗಳು) ಕೃತಿಯನ್ನು ಬಿಡುಗಡೆಗೊಳಿಸುವರು. ಕೊಪ್ಪಳದ ಹಿರಿಯ ಸಾಹಿತಿಗಳಾದ ಎ.ಎಂ. ಮದರಿ ಅವರು ’ದೇವಿ ಹಾಗೂ ಇತರೆ ಕಥೆಗಳು’ (ಅನುವಾದಿತ) ಕೃತಿಯನ್ನು ಬಿಡುಗಡೆಗೊಳಿಸುವರು.
ಕುಷ್ಟಗಿಯ ನಿವೃತ್ತ ಕಾರ್ಯಪಾಲಕ ಇಂಜಿನೀಯರಾದ ಎಸ್.ಕೆ.ಪಾಟೀಲ, ವಿರಂಚಿ ಕಲಾ ಬಳಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಪಾಟೀಲ ಹಲಗೇರಿ ಅವರು ಉಪಸ್ಥಿತರಿರುವರೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ.
0 comments:
Post a Comment
Click to see the code!
To insert emoticon you must added at least one space before the code.