PLEASE LOGIN TO KANNADANET.COM FOR REGULAR NEWS-UPDATES

 ಭಾರತದಲ್ಲಿ ಜನಸಂಖ್ಯೆ ಅಧಿಕವಾಗುತ್ತಾ ಸಾಗುತ್ತಿದಂತೆ ಅನೇಕ ತೊಂದರೆಗಳು ಸಮಾಜ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತದಲ್ಲಿ ಮಕ್ಕಳ ಮರಣ ಸಂಖ್ಯೆ ದಿನೇದಿನೇ ಏರುತ್ತಿರುವುದು ಶೋಚನೀಯ ಸಂಗತಿ. 
ವಿಶ್ವದಲ್ಲೇ ಅತ್ಯಂತ ಹೆಚ್ಚು ಮಕ್ಕಳು (ಸು.೪೦ ಕೋಟಿ) ಭಾರತದಲ್ಲಿದ್ದಾರೆ. ಆದರೆ ಇವರ ಪೈಕಿ ೫೦% ಮಕ್ಕಳು ಅಪೌಶ್ಠಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಸುಮಾರು ೫೦% ಮಕ್ಕಳು ಶಾಲೆಯ ಕಡೆ ಮುಖ ಮಾಡುತ್ತಿಲ್ಲ. ಇದು ವಿಶ್ವದಲ್ಲೇ ಅತ್ಯಂತ ಯುವ ಜನಸಂಖ್ಯೆಯೊಂದಿರುವ ಭಾರತದ ಸ್ಥಿತಿ.
ವಿಶ್ವಾದ್ಯಂತ ಮಕ್ಕಳ ಮರಣಕ್ಕೆ ಕಾರಣಗಳಲ್ಲಿ ಮುಖ್ಯವಾದವು ವಾಂತಿಭೇದಿ. ೧/ ಭಾಗ ಭಾರತದಲ್ಲಿ ಇದರಿಂದ ಸಾಯುತ್ತಾರೆ. ಇದಕ್ಕೆ ಕಾರಣ ರೋಟವೈರಸ್. ಉತ್ತಮ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ವರ್ಷ ಭಾರತದಲ್ಲಿ ಸು.೫೦,೦೦೦ಕ್ಕಿಂತಲೂ ಅಧಿಕ ಮಕ್ಕಳು ಈ ಹೆಮ್ಮಾರಿ ವೈಸರ್‌ಗೆ ಅಸುನೀಗುತ್ತಿದ್ದಾರೆ.
ದೇಶದಲ್ಲಿ ಸಾಯುವ ೫ ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ ೨೦೧೨ರಲ್ಲಿ ೧೦೦ಕ್ಕೆ ೫೬, ೧೯೯೦ರಲ್ಲಿ ೨೮.೫ ಲಕ್ಷ ಮಕ್ಕಳು (೨೧%).

ಭಾರತ ಸರ್ಕಾರವು ಇದನ್ನು ತಡೆಯುವ ಸಲುವಾಗಿ ರಾಶ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್ (ಎನ್‌ಆರ್‌ಹೆಚ್‌ಎಂ) ಮುಂತಾದ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸಿ ಶಿಶು ಮತ್ತು ಹೆರಿಗೆ ಸಾವುಗಳನ್ನು ಕಡಿಮೆ ಮಾಡಿದೆ. ಆದರೆ ಇದು ನಿಗದಿತ ಗುರಿಗಿಂತ ಬಳಹ ಕಡಿಮೆ ಸಾಧಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಇನ್ನು ಹೊಸ ಹೊಸ ಆರೋಗ್ಯ ಸುಧಾರಣಾ ಕಾರ್ಯಕ್ರಮಗಳನ್ನು ಅನುಸರಿಸುವ ಮೂಲಕ ಮಕ್ಕಳ ಮರಣ ಪ್ರಮಾಣವನ್ನು ಕಡಿತಗೊಳಿಸುವ ಮೂಲಕ ಪರೋಕ್ಷವಾಗಿ ಜನನ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ. 


 ಕೆ.ಟಿ.ಆರ್.
ಬೆಂಗಳೂರು
೭೮೯೯೩೨೪೫೩೩

28 Aug 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top