

ಇದೇ ವೇದಿಕೆಯಲ್ಲಿ ’ಗುನ್ನಾಳೇಶನ ವಚನಗಳು’ ಕೃತಿ ಕುರಿತು ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಡಾ. ಶ್ರೀ ಚೆನ್ನಮಲ್ಲ ಸ್ವಾಮಿಗಳು, ’ಅಳ್ಳೊಳ್ಳಿ ಬಂತು ಕಳ್ಳೊಳ್ಳಿ’ ಶಿಶುಗೀತೆಗಳ ಕುರಿತು ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಹಾಗೂ ಬಂಗಾಳಿ ಮೂಲದ ’ದೇವಿ ಹಾಗೂ ಇತರೆ ಕಥೆಗಳು’ ಅನುವಾದಿತ ಕಥಾ ಸಂಕಲನ ಕುರಿತಾಗಿ ಸಾಹಿತಿಗಳಾದ ಎ.ಎಂ. ಮದರಿ ಮಾತನಾಡಿದರು., ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ವೀರಣ್ಣ ನಿಂಗೋಜಿ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಸ್.ಕೆ. ಪಾಟೀಲ, ಕವಯತ್ರಿ ವಿಮಲಾ ಇನಾಂದಾರ, ಕವಿ ಈಶ್ವರ ಹತ್ತಿ ಉಪಸ್ಥಿತರಿದ್ದರು. ಪ್ರಾರ್ಥನೆ ಮತ್ತು ನಾಡಗೀತೆ ಅನಸೂಯಾ ಜಾಗಿರದಾರ ಸಂಗಡಿಗರು, ಸ್ವಾಗತ ಮತ್ತು ಪ್ರಸ್ತಾವಿಕ ಶಿ.ಕಾ.ಬಡಿಗೇರ, ಅತಿಥಿ ಪರಿಚಯ ಅಲ್ಲಮಪ್ರಭು ಬೆಟ್ಟದೂರು, ನಿರೂಪಣೆ ವಿಜಯಲಕ್ಮಿ ಕೊಟಗಿ, ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು..
0 comments:
Post a Comment
Click to see the code!
To insert emoticon you must added at least one space before the code.