PLEASE LOGIN TO KANNADANET.COM FOR REGULAR NEWS-UPDATES


 ೨೬  ರಂದು ಕೊಪ್ಪಳದ ದೇವರಾಜ ಅರಸ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಹಾಗೂ ಅನುಷ್ಠಾನ ಸಂಸ್ಥೆಯಾದ ಶ್ರೀಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಸಂಯೋಜಕತ್ವದಲ್ಲಿ. ಪ್ಯಾಶನ್ ಶೋ ಕಾರ್ಯಕ್ರಮ ಮಾಡುವ ಹಾಗೂ ಸ್ಥಳಿಯ ಆಟೋಟಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಈ ಕಾರ್ಯಕ್ರಮ ಮಾಡುವ ಹಾಗೂ ಸ್ಥಳಿಯ ಆಟೋಟಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಚಿತ್ರಕಲೆ ಸ್ಪರ್ದೆ/ ಬಣ್ಣ ಹಾಕುವ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಫರ್ದಾ ವಿಜೇತರಿಗೆ ಬಹುಮಾನ ವಿತರಿಸುವ ಈ ಕಾರ್ಯಕ್ರಮಕ್ಕೆ ಉದ್ಗಾಟಕರಾಗಿ  ಶರಣಪ್ಪ ಚಂದನಕಟ್ಟಿ ನಗರಸಭೆ ಸದಸ್ಯರು ಆಗಮಿಸಿದ್ದರು ಮಖ್ಯ ಅತಿಥಿಗಳಾಗಿ ವಾರ್ಡಿನ ಮುಖಂಡರಾದ ಶ್ರೀ ಗವಿಸಿದ್ದಪ್ಪ ನರಸಾಪುರ, ಹುಸೇನ್ ಪೀರಾ ಚಿಕನ್ ಆಗಮಿಸಿದ್ದರು ಹಾಗೂ ಅತಿಥಿಗಳಾಗಿ ವೀರಕನ್ನಡಿಗ ಸಂಘಟನೆಯ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಾದ   ಶಿವಾನಂದ ಹೊದ್ಲೂರು ಆಗಮಿಸಿದ್ದರು.
   ಶ್ರೀಮತಿ ಗಂಗಮ್ಮ ಕಜ್ಜಿ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರಾದ ಲಕ್ಷ್ಮಣ ಪಲ್ಲೆದ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಹಾಗೂ ಪವಿತ್ರ ಪ್ರ್ರಾಥನೆ ಗೀತೆ ಹಾಡಿದರು. ನಂತರ ಪುಷ್ಟವನ್ನು ನೀಡುವ ಮೂಲಕ ಗಣ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ಉದ್ಘಾಟನೆಯ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಯೋಜಕರಾದ ಶ್ರೀ ವಜೀರ್ ಸಾಬ್ ತಳಕಲ್ ಯೋಜನೆಯ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಕುರಿತು ಮಾತನಾಡಿದರು. ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಭೋದನಾ ತರಗತಿಗಳನ್ನು ಪ್ರಾರಂಭಿಸಲಾಗಿದೆ ಹಾಗೂ ಶಾಲಾ ಮಕ್ಕಳಿಗಾಗಿ ಸ್ಥಳಿಯ ಆಟಗಳು, ಚಿತ್ರಕಲೆ, ಬಣ್ಣ ಹಾಕುವ, ಆಲಂಕಾರಿಕ ಉಡುಗೆ ಸ್ಫರ್ದೆ ಏರ್ಪಡಿಸಿ ಬಹುಮಾನ ವಿತರಿಸಲಾಗುವದು. ಹಾಗೂ ಈ ಪ್ರದೇಶದ ಯುವ ನಿರುದ್ಯೋಗಿಗಳಿಗೆ ಟೆಲರಿಂಗ್, ಕಂಪ್ಯೂಟರ್, ಹಾಗೂ ಡ್ರೃವಿಂಗ್ ತರಬೇತಿ ಕಲ್ಪಿಸಲಾಗಿದೆ. 
  ವೀರಕನ್ನಡಿಗ ಸಂಘಟನೆಯ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಾದ   ಶಿವಾನಂದ ಹೊದ್ಲೂರು ಅವರು ಮತನಾಡಿ ಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ, ನಾಗರಿಕರಲ್ಲಿ ಜಾಗ್ರತಿ ಉಂಟುಮಾಡುವ ಕಾರ್ಯಕ್ರಮಗಳನ್ನು ಹಾಕಿಕೊಳಬೇಕು ಹಾಗೂ ಸ್ಥಳಿಯ ಸಮಸ್ಯಗಳನ್ನು ಪರಿಹರಿಸಲು ನಗರಸಭೆ ಸದಸ್ಯರು ಶ್ರಮಿಸಬೇಕು. ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವ್ಯಾಕರಣದ ಬಗ್ಗೆ ಆಸಕ್ತಿ ಬರುವಂತೆ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕೆಂದರು.
ಸಹ ಶಿಕ್ಷಕರಾದ ಲಕ್ಷ್ಮಣ ಪಲ್ಲೆದ ರವರು ಮಾತನಾಡಿ ಬೇರೆ ಶಾಲೆಯ ಮಕ್ಕಳಂತೆ ಕೊಳಗೇರಿಯ ಮಕ್ಕಳಲ್ಲಿ ಜಾಣ್ಮೆ, ಪ್ರತಿಭೆ ತೊರಿಸಲು ಇಂತಹ ಕಾರ್ಯಕ್ರಮಗಳೆ ವೇದಿಕೆ ಎಂದು ಹೆಳಿದರು. ಕೊನೆಯಲ್ಲಿ ಸಂಸ್ಥೆಯ ಸಂಯೋಜಕರಾದ ಮೆಹರಾಜ ಮನಿಯಾರ ವಂಧಿಸಿದರು ಕಾರ್ಯಕ್ರಮದ ನಿರುಪಣೆಯನ್ನು ಯೋಜನೆಯ ತರಬೇತಿ ಸಂಯೋಜಕರಾದ ಅಬ್ದುಲ್ ವಹಾಬ್ ಮಾಡಿದರು. ಸಿಬ್ಬಂದಿಗಳಾದ ಗೀತಾ ಪೂಜಾರ, ಮಾಲನಭಿ, ದೇವಪ್ಪ ಹಾಜರಿದರು.

-: ಸ್ಥಳೀಯ ಆಟಗಳಲ್ಲಿ ಬಹುಮಾನ ವಿಜೇತರು :-
ಕರ್ಚಿಪ್ ಆಟದಲ್ಲಿ: ಜಾಪರ್ ಸಾಧಿಕ ತಂಡ ಪ್ರಥಮ ಬಹುಮಾನ, ದ್ವಿತೀಯ ಗೌಸಿಯಾ ಬೇಗಂ ತಂಡ
ಕೆರೆ ದಡ ಆಟದಲ್ಲಿ ಪ್ರಥಮ:- ವಿಜಯಲಕ್ಷ್ಮೀ, ದ್ವಿತೀಯ ಶಕುಂತಲ, ತೃತೀಯ ಪವಿತ್ರ
ಕಪ್ಪೆ ಆಟದಲ್ಲಿ ಪ್ರಥಮ:- ಜಾಪರ್ ಸಾಧಿಕ, ದ್ವಿತೀಯ ಪರಮೇಶ, ತೃತೀಯ ಬಾಬಾಖಲಂದರ್
ರೈಲ್ವೆ ಬೋಗಿ ಆಟದಲ್ಲಿ:- ಪರಮೇಶ ತಂಡ ಪ್ರಥಮ, ಮರ್ಧಾನಲಿ ತಂಡ ದ್ವತೀಯ
ಚಿತ್ರ ಕಲೆ ಸ್ಪರ್ದೆಯಲ್ಲಿ :- ಪ್ರಥಮ ವಿಜಯಲಕ್ಷ್ಮೀ, ದ್ವಿತೀಯ ಪವಿತ್ರ, ತೃತೀಯ ರೊಹಿತ್ ಸಿಂಗ್.
ಪ್ಯಾಶನ್ ಶೋ :- ಪ್ರಥಮ ನೇತ್ರಾವತಿ ದ್ವಿತೀಯ ಭೂಮೀಕಾ, ತೃತೀಯ ಶಾಖಿರಾ ಹಾಗೂ ರುಬಿಯಾ.

27 Jul 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top