PLEASE LOGIN TO KANNADANET.COM FOR REGULAR NEWS-UPDATES

ಜೆಸ್ಕಾಂ ಗಮನಕ್ಕೆ ರೈತರ ಮನವಿ  

ಗವಿಸಿದ್ದೇಶ್ವರ ಗಂಜಿನಲ್ಲಿ ಅಂಗಡಿ ಕಟ್ಟಡಗಳ ಮೇಲೆ ಕೈಗೆ ಎಟುಕುವ ಎತ್ತರದಲ್ಲಿ ಹಾಯ್ದುಹೋಗಿರುವ ಜೆಸ್ಕಾಂ ಹೆಚ್.ಟಿ.ಲೈನ್ ಪ್ರಾಣಾಪಾಯ ಮಾಡಲು ಕಾಯುತ್ತಿದೆ! ಎಚ್ಚರ!!
ಕೊಪ್ಪಳ : ಗವಿಸಿದ್ದೇಶ್ವರ ಗಂಜಿನ ಪ್ರಾಂಗಣದಲ್ಲಿ ಕೃಷಿ ಉತ್ಪನ್ನಗಳ ವ್ಯವಹಾರ ಜರಗುತ್ತಿದ್ದು. ಇಲ್ಲಿಗೆ ನಿತ್ಯ ರೈತ ಬಾಂಧವರು ಬರುತ್ತಾರೆ ಮತ್ತು ವಾಹನಗಳ ಸಾಗಾಣಿಕೆಯು ನಿರಂತರವಾಗಿರುತ್ತದೆ. ನಂದಿನಗರದದಿಂದ ಗವಿಮಠದ ಬಯಲುಜಾಗೆಯಲ್ಲಿ ಹಾಯ್ದುಹೋಗುವ ಹೈಟೆನ್‌ಷನ್ ಲೈನ್ ಮಾರುಕಟ್ಟೆ ಪ್ರಾಂಗಣದಲ್ಲಿಯ ಅಂಗಡಿಗಳಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನು ಇರುತ್ತದೆ. ರೈತ ಬಾಂಧವರು ಬಂದು ಹೋಗುತ್ತಿರುತ್ತಾರೆ. ಈ ಎಲ್ಲಾ ಕಾರಣಗಳೀಮದಾಗಿ ವ್ಯಾಪಾರಿ ಸ್ಥಳದಲ್ಲಿ ಹಾಯ್ದುಹೋಗುವ ಹೈಟೆನ್‌ಷನ್ ಲೈನ್ ಸಂಭವನೀಯ ಅಪಘಾತ ವಲಯವನ್ನು ಉಂಟುಮಾಡಬಹುದೆಂದು ರೈತ ಬಾಂಧವರು, ವರ್ತಕರು ಆತಂಕವ್ಯಕ್ತಪಡಿಸುತ್ತಿದ್ದಾರೆ.
     ಕಾರಣ ಹೈಟೆನ್‌ಷನ್ ಲೈನನ್ನು ತೀವ್ರ ಸ್ಥಾಳಾಂತರಿಸುವ ಅವಶ್ಯಕತೆ ಇರುವುದು ಜೆಸ್ಕಾಂ ಗಮನಿಸಬೇಕಿದೆ. 

Advertisement

0 comments:

Post a Comment

 
Top