PLEASE LOGIN TO KANNADANET.COM FOR REGULAR NEWS-UPDATES

  ಇತರೆ ವೃತ್ತಿಗಳಿಗಿಂತ ಶಿಕ್ಷಕರ ವೃತ್ತಿ ಸಮಾಜದಲ್ಲಿ ಅತ್ಯಂತ ಪವಿತ್ರವಾದದ್ದು ಅದನ್ನು ನಾವು ಅರಿತು ಕಾರ್ಯನಿರ್ವ
ಹಿಸಬೇಕಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಹೇಳಿದರು.
ಅವರು ಶುಕ್ರವಾರ ಶಾಲೆಯ ವರ್ಗಾವಣೆಗೊಂಡ ಶಿಕ್ಷಕಿಯರ ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲಿಯೂ ತಮ್ಮದೇ ಪ್ರತಿಭೆ ಇರುತ್ತದೆ ಅದನ್ನು ಹೊರ ತರುವುದೇ ಶಿಕ್ಷಕನ ಮುಖ್ಯ ಉದ್ದೇಶ. ಅಲ್ಲದೇ ಆ ಪ್ರತಿಭೆಯನ್ನು ಮುಖ್ಯವಾಹಿನಿ ಪ್ರಸ್ತುತಪಡಿಸಬೇಕು ಅಂದಾಗ ಶಿಕ್ಷಕರ ಬದುಕು ಸಾರ್ಥಕತೆಗೆ ನಾಂದಿಯಾಗಲಿದೆ ಎಂದರು. 
ಶಾಲೆಯ ವರ್ಗಾವಣೆಗೊಂಡ ಶಿಕ್ಷಕಿಯರಾದ ಮಂಜುಳಾ ಹಿರೇಮಠ ಹಾಗೂ ಸಾವಿತ್ರಿ ನಾಯಿನೇಗಲಿ ಅವರಿಗೆ ಸನ್ಮಾನಿಸಿ ಗೌರವಿಸಿ ಬಿಳ್ಕೊಡಲಾಯಿತು. ಅಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ವ್ಯವಸ್ಥಾಪಕರಾದ ಡಿ.ಎಂ.ದೊಡ್ಡಮನಿಯವರು ಇದೇ ದಿ.೩೦ ರಂದು ನಿವೃತ್ತಿ ಹೊಂದಲಿದ್ದು ಅವರಿಗೂ ಸನ್ಮಾನಿಸಿಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಸೇರಿದಂತೆ ಸನ್ಮಾನಿತರು ತಮ್ಮ ಅನಿಸಿಕೆ ನುಡಿಗಳನ್ನಾಡಿದರು. ಶಿಕ್ಷಕರಾದ ವೀರಪ್ಪ ಚೋಳಿನ ಸ್ವಾಗತಿಸಿ, ಮಲ್ಲಪ್ಪ ಅಂಗಡಿ ನಿರೂಪಿಸಿದರೆ ಕೊನೆಯಲ್ಲಿ ಬಸವರಾಜ ಹೊಸಮನಿ ವಂದಿಸಿದರು. 
20 Jun 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top