
ಇದರ ಅಧ್ಯಕ್ಷತೆಯನ್ನು ಶ್ರೀಮತಿ ವಸಂತ ಪ್ರೇಮ ಉಪನಿ
ರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕೊಪ್ಪಳ ಇವರು ವಹಿಸಿದರು.
ಉದ್ಘಾಟಕರಾಗಿ ಶ್ರೀಕಾಂತ ಡಿ. ಬಬಲಾದಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಈದಿನ ಅರ್ಥಪೂರ್ಣವಾಗಬೇಕಾದರೆ ಪ್ರತಿಯೊಬ್ಬರು ಮಾದಕ ವಸ್ತುಗಳಿಂದ ದೂರ ಇರಬೇಕು ಮತ್ತು ಭಗವಂತ ನಮ್ಮನ್ನು ಈ ಭೂಮಿಯ ಮೇಲೆ ಹುಟ್ಟಿಸಿದ್ದಾನೆ ಅಂದ ಬಳಿಕ ಮಾದಕ ವಸ್ತು ಮುಕ್ತ ಸಮಾಜವನ್ನಾಗಿ ಪರಿವರ್ತಿಸಬೇಕೇಂದು ಮತ್ತು ಚಟದ ದಾಸನಾಗಬಾರದು ಎಂದು ಹೇಳಿದರು.
ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಶ್ರಿಕಾಂತ ಬಾಸೂರ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾತನಾಡಿ ಮಾದಕ ದ್ರವ್ಯಕ್ಕೆ ಒಳಗಾದಂತಹ ವ್ಯಕ್ತಿಗಳನ್ನು ವ್ಯಸನ ಮುಕ್ತರನ್ನಾಗಿ ಮಾಡುವುದರಲ್ಲಿ ಸುರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಭಾಗ್ಯನಗರ ಇವರು ಜಿಲ್ಲೆಯಲ್ಲಿ ತನ್ನದೇ ಆದಂತಹ ಚಾಪವನ್ನು ಮೂಡಿಸಿ ಒಳ್ಳೆಯ ಕೇಂದ್ರವಾಗಿದೆ ಎಂದು ಹೇಳಿದರು.
ನಂತರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವ್ಹಿ. ಕಣವಿ ವಕೀಲರು ಮಾತನಾಡಿ ನಾವೆಲ್ಲರೂ ಒಂದಾಗಿ ರಾಜ್ಯ ಮತ್ತು ಈ ಜಿಲ್ಲೆಯನ್ನು ಮದ್ಯವ್ಯಸನ ಮುಕ್ತ ಮಾಡಿ ಎಂದು ಎಲ್ಲರಿಗೂ ಕಾನೂನಿನ ಸಲಹೆಯನ್ನು ನೀಡಿದರು.
ನಂತರ ರಾಜ್ಯ ವಕೀಲರ ಪರಿಷತ್‌ನ ಸದಸ್ಯರಾದ ಶ್ರೀಮತಿ ಸಂದ್ಯಾ ಬಿ. ಮಾದಿನೂರ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ನಾವೆಲ್ಲರೂ ಯಾವುದೇ ಪರಿಸ್ಥಿತಿ ಬಂದರು ನಾವುಗಳು ಮದ್ಯ ವ್ಯಸನ ಮಾಡಬಾರದು ಮತ್ತು ಮಾದಕ ದ್ರವ್ಯಗಳನ್ನು ಸೇವಿಸುವುದಿಲ್ಲ ಎಂದು ಪ್ರತಿಜ್ಞವಿಧಿ ಬೋಧಿಸಿದರು.
ಕೊನೆಯದಾಗಿ ಅಧ್ಯಕ್ಷತೆ ವಹಿಸಿಕೊಂಡಿದ್ದ ವಂಸತ ಪ್ರೇಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕೊಪ್ಪಳ ಜಿಲ್ಲಾ ಉಪನಿರ್ದೇಶಕರು ಮಾಡನಾಡಿ ಕೆಲವೊಂದು ಮಾದಕ ದ್ರವ್ಯ ಕಂಪನಿಗಳು ತಮ್ಮ ವ್ಯವಹಾರದ ಉದ್ದೇಶಕ್ಕಾಗಿ ಮತ್ತು ಲಾಭಕ್ಕಾಗಿ ಜನರು ಒಳಗಾಗುವಂತಹ ನಿಕೋಟಿನ್‌ಗಳನ್ನು ಅದರಲ್ಲಿ ಸೇರಿಸುತ್ತಿದ್ದು, ಇದು ದುಃಖದ ಸಂಗತಿ ಎಂದು ವಿಷಾಧಿಸಿ ಅಂತವುಗಳಿಗೆ ಯಾರು ಒಳಗಾಗಬಾರದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಚಾರ್ಯರಾದ ಎಸ್. ಎಲ್ ಮಾಲಿಪಾಟೀಲ್ ರವರು, ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ಪರೀಕ್ಷಿತ್‌ರಾಜ ಮತ್ತು ಪಾರ್ವತಿ ಪೂಜಾರ ಹಾಗೂ ಸರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದ ಸಿಬ್ಬಂದಿ ಕರಕಪ್ಪ ಮೇಟಿ, ಹಾಗೂ ಎಂ.ಎಸ್ ಡಬ್ಲ್ಯೂ ವಿದ್ಯಾರ್ಥಿಗಳಾದ ಮರ್ದಾನಅಲಿ, ರಫಿ, ಮುತ್ತಣ್ಣ, ರಮೇಶ, ವೆಂಕಟರಮಣ, ರಮೇಶ ಪೂಜಾರ ಉಪಸ್ಥಿತರಿದ್ದರು. ಮಲ್ಲನಗೌಡ ಪಾಟೀಲ್ ವಕೀಲರು ಕಾರ್ಯಕ್ರಮವನ್ನು ನಿರೂಪಿಸಿದರು. ಸುರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರವೀಣ ವ್ಹಿ. ಜಂಗಲ ಇವರು ಸ್ವಾಗತಿಸಿದರು, ಎಂ.ಎಸ್ ಡಬ್ಲ್ಯೂ ವಿದ್ಯಾರ್ಥಿಯಾದ ಮರ್ದಾನಅಲಿ ಮಿರ್ಜಾ ರವರು ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.