PLEASE LOGIN TO KANNADANET.COM FOR REGULAR NEWS-UPDATES

 ಸಂಘಟನೆಯಿಂದ ಸೌಲಭ್ಯ ಪಡೆಯಲು ಸಾಧ್ಯ ಎಂದು ರಾಜ್ಯ ಸರ್ಕಾರಿ ಎಸ್.ಸಿ/ಎಸ್.ಟಿ.ಪ್ರಾಥಮಿಕ,ಮಾದ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷರಾದ ವಿ.ಟಿ.ವೆಂಕಟೇಶಯ್ಯಾ ಹೇಳಿದರು.
  ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಸ್.ಸಿ/ಎಸ್.ಟಿ.ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ,ಯಾವುದೇ ಒಂದು ಸೌಲಭ್ಯವನ್ನು ಪಡೆಯಬೇಕಾದರೆ ಸಂಘಟನೆಯ ಅವಶ್ಯವಿದೆ.ಸಂಘಟನೆಯಿಂದ ಮಾತ್ರ ಸೌಲಭ್ಯ ಪಡೆಯಲು ಸಾಧ್ಯವಿದೆ.ಯಾವುದೆ ಒಂದು ಕಾರ್ಯವಾಗಬೇಕಾದರೆ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ ಅದೇ ಕಾರ್ಯವು ಸಂಘಟನೆಯಿಂದ ಸಾಧ್ಯವಾಗುತ್ತದೆ.ಎಸ್.ಸಿ/ಎಸ್.ಟಿ.ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳನ್ನು ರಾಷ್ಟ್ರೀಯ ಹಬ್ಬ,ಸಭೆ ಹಾಗೂ ಸಮಾರಂಭಗಳಿಗೆ ಆಹ್ವಾನಿಸುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿರುವುದು ಸಂತಸದ ಸಂಗತಿಯಾಗಿದೆ.ಅದರಂತೆ ಸಂಬಂಧ ಪಟ್ಟ ಅಧಿಕಾರಿಗಳು ಆದೇಶವನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕು ಜೊತೆಗೆ ಇಂದು ರಾಜ್ಯದ ದಿನಕ್ಕೆ ಒಂದರಂತೆ ಸಂಘಟನೆಗಳು ಹುಟ್ಟಿಕೊಳುತ್ತಿವೆ.ಆದರೆ ಸಂಘ-ಸಂಘಟನೆಗಳನ್ನು ಹುಟ್ಟು ಹಾಕುವುದು ಮುಖ್ಯವಲ್ಲ.ಅದನ್ನು ಸರಿಯಾದ ರೀತಿಯಲ್ಲಿ ಬೆಳಸಿಕೊಂಡು ಹೊಗುವುದು ಸಂಘದ ಪದಾಧಿಕಾರಿಗಳು ಹಾಗೂ ಸಂಘದ ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿದೆ ಅಂದಾಗ ಮಾತ್ರ ಸಂಘವು ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.
   ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಜಿಲ್ಲಾಧ್ಯಕ್ಷರಾದ ಭರಮಪ್ಪ ಕಟ್ಟಮನಿ ಮಾತನಾಡುತ್ತ, ಒಂದು ಸಂಘಟನೆಯಲ್ಲಿರುವ ಪದಾಧಿಕಾರಿಗಳು ಸಂಘದ ಗುರಿ-ಉದ್ದೇಶಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡಿರಬೇಕು.ಸಂಘದ ಅಭಿವೃದ್ದಿಗಾಗಿ ಶ್ರಮಿಸಲು ಪ್ರತಿಯೊಬ್ಬ ಸದಸ್ಯರು ಕೈ ಜೊಡಿಸಬೇಕು ಅಲ್ಲದೆ ಸಂಘಟನೆಯಲ್ಲಿ ತೊಡಗಿಕೊಂಡಾಗ ಅನೇಕ ರೀತಿಯಿಂದ ಸಮಸ್ಯೆಗಳು ಎದುರಾಗುತ್ತವೆ.ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕೂಡಾ ಕಂಡುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
 ಸಭೆಯಲ್ಲಿ ಕೋಲಾರ ಜಿಲ್ಲಾಧ್ಯಕ್ಷರಾದ.ರವಿ.ಎ.ಎಂ,ಬಳ್ಳಾರಿ ಜಿಲ್ಲಾಧ್ಯಕ್ಷರಾದ ರೆಡ್ಡಿ ನಾಯಕ,ಧಾರವಾಡ ಜಿಲ್ಲಾಧ್ಯಕ್ಷರಾದ ಎಸ್.ಡಿ.ಬೆಟ್ಟಣನವರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಜಿಜೇರಿ,ಯಲಬುರ್ಗಾ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮಣ್ಣ ತಳವಾರ,ಪ್ರೌಢ ಶಾಲಾ ಶಿಕ್ಷಕರಾದ ರಾಮಣ್ಣ ಛಲವಾದಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು  ಶಿಕ್ಷಕರಾದ ಹುಲುಗಪ್ಪ ಭಜಂತ್ರಿ ನಿರೂಪಿಸಿದರು.ಪ್ರಾರ್ಥನೆಯನ್ನು ಶಿಕ್ಷಕರಾದ ಯಮನೂರಪ್ಪ ಭಜಂತ್ರಿ ನೇರವೇರಿಸಿದರು.ಕೊಪ್ಪಳ ತಾಲೂಕ ಅಧ್ಯಕ್ಷರಾದ ಹನುಮಂತಪ್ಪ ಕೊಡ್ಲಿ ಸ್ವಾಗತಿಸಿ,ಎಲ್ಲರಿಗೂ ವಂದಿಸಿದರು.

Advertisement

0 comments:

Post a Comment

 
Top