PLEASE LOGIN TO KANNADANET.COM FOR REGULAR NEWS-UPDATES

 ೭-೬-೨೦೧೪ ರಂದು ನಗರಸಭೆಯಲ್ಲಿ ಪೌರಾಯುಕ್ತರು, ನಗರಸಭೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಬೀದಿವ್ಯಾಪಾರಿಗಳ ಸಮಿತಿಯನ್ನು ರಚಿಸಿ, ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರ ಈ ಸಮಿತಿಗೆ ಅನುಮೋದನೆ ನೀಡಿರುವುದು ಸ್ವಾಗತಾರ್ಹವೆಂದು ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಹೈದ್ರಾಬಾದ್ - ಕರ್ನಾಟಕ ಪ್ರಾಂತ ಕಾರ್ಯದರ್ಶಿ  ಸಂತೋಷ ವ್ಯಕ್ತಪಡಿಸಿದ್ದಾರೆ.
ಎರಡು ತಿಂಗಳಿನಿಂದ ಗಂಗಾವತಿ ನಗರದಲ್ಲಿ ಬೀದಿವ್ಯಾಪಾರಿಗಳು ಮಾಡುತ್ತಿರುವ ಚಳುವಳಿಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷತೆ ಶಾಮೀದ್‌ಮನಿಯಾರ್, ಪೌರಾಯುಕ್ತರು, ತಾಲೂಕ ವೈದ್ಯಾಧಿಕಾರಿಗಳು, ಕಾರ್ಯದರ್ಶಿಗಳು ನಗರ ಯೋಜನಾ ಪ್ರಾಧಿಕಾರ, ಪೊಲೀಸ್‌ಇನ್ಸ್‌ಪೆಕ್ಟರ್, ನಗರಠಾಣೆ ಇವರುಗಳು ಅನುಮೋದಿಸಿದ ಪ್ರಸ್ತಾವನೆಯನ್ನು ಸರಕಾರ ಅನುಮೋದನೆ ನೀಡಿ ಪ್ರಪ್ರಥಮವಾಗಿ ಹೈದ್ರಾಬಾದ್ ಕರ್ನಾಟಕದಲ್ಲಿ ಗಂಗಾವತಿ ನಗರಸಭೆಯಲ್ಲಿ ಬೀದಿವ್ಯಾಪಾರಿಗಳ ರಕ್ಷಣಾ ಕಾಯ್ದೆ ೨೦೧೪ ರ ಅಡಿಯಲ್ಲಿ ಬೀದಿವ್ಯಾಪಾರಿಗಳನ್ನು ಗುರುತಿಸಿ, ನೊಂದಾಯಿಸುವ ಕಾರ್ಯವನ್ನು ಪ್ರಾರಂಭ ಮಾಡಿರುವುದು, ಸಮಿತಿಯಲ್ಲಿ ೨೧ ಜನ ಸದಸ್ಯರಿದ್ದು ಇವರುಗಳ ಪೈಕಿ ಒಂಬತ್ತು ಜನ ಬೀದಿವ್ಯಾಪಾರಿಗಳನ್ನು ನೇಮಿಸಿಕೊಂಡಿರುವುದು ಸ್ವಾಗತಾರ್ಹವೆಂದಿದ್ದಾರೆ.
       ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದ ಬೀದಿವ್ಯಾಪಾರಿಗಳಿಗೆ ಮತ್ತು ನಮ್ಮ ಹೋರಾಟಗಳನ್ನು ಬೆಂಬಲಿಸಿ ಪ್ರಸಾರ ಮಾಡಿದ ದೃಶ್ಯಮಾಧ್ಯಮ, ಸುದ್ಧಿಗಳನ್ನು ಪ್ರಕಟಿಸಿದ ಪತ್ರಿಕಾ ಮಾಧ್ಯಮದ ವರದಿಗಾರರಿಗೆ ಭಾರದ್ವಾಜ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top