PLEASE LOGIN TO KANNADANET.COM FOR REGULAR NEWS-UPDATES

ಬನ್ನಿ ಬಾಲಕಾರ್ಮಿಕತೆಯನ್ನು ಅಳಿಸೋಣ. ಬಾಲ್ಯವನ್ನು ಉಳಿಸೋಣ
ಇತರೆಲ್ಲಾ ಮಕ್ಕಳಂತೆ ಬೆನ್ನಿಗೆ ಚೀಲ ಹಾಕಿಕೊಂಡು ಶಾಲೆಗೆ ಓಡುವ, ಮನೆಗೆ ಬಂದು ತಾಯಿಯೊಂದಿಗೆ ಟೀಚರ್ ಹೇಳಿದ ಕತೆಯೋ, ಪಾಠವೋ, ಇನ್ನೇನನ್ನೋ ಹೇಳಿ ಖುಷಿಪಡಬೇಕಾದ ಮನೆಯ ಬಾಲಕನೊಬ್ಬ ಇನ್ನಾರದೋ ಮನೆಯಲ್ಲಿ ದುಡಿಯುತ್ತಾ ಇದ್ದರೆ, ಹೋಟೇಲಲ್ಲೋ, ಗ್ಯಾರೇಜಲ್ಲೋ ಕೆಲಸಕ್ಕಿದ್ದರೆ ಏನನಿಸಬಹುದು? ಖಂಡಿತ ಇದನ್ನು ಯಾರೂ ಇಷ್ಟಪಡುವುದಿಲ್ಲ.  
ಆದ್ದರಿಂದಲೇ ಬಾಲ ಕಾರ್ಮಿಕತೆಯ ವಿರುದ್ದ ಸಾಮಾಜಿಕ ಜಾಗೃತಿಯೊಂದು ಬಲವಾಗಿ ಹುಟ್ಟಿಕೊಳ್ಳಲೇಬೇಕು. ಪೆನ್ನು ಹಿಡಿಯಬೇಕಾದ ಕೈ ಗ್ಲಾಸನ್ನೋ, ಸ್ಪಾನರನ್ನೋ, ಬಟ್ಟೆಗಳನ್ನೋ ಹಿಡಯುವಂತಾಗಬಾರದು ನಮ್ಮಂತೆ ಆ ಮಕ್ಕಳಿಗೂ ಕಲಿಯಬೇಕೆಂಬ ಆಸೆ ಖಂಡಿತಾ ಇದೆ ಶಾಲೆಗೆ ಹೋಗುವ ಮಕ್ಕಳನ್ನು ಕಂಡು ಗ್ಲಾಸು ತೊಳೆಯುತ್ತಲೇ ಮಕ್ಕಳೂ ಕನಸು ಕಾಣುತ್ತವೆ. ಬಟ್ಟೆ ಒಗೆಯುತ್ತಲೇ ಅ ಆ ಇ ಈ ತಪ್ಪು ತಪ್ಪಾಗಿ ಉಚ್ಚರಿಸುತ್ತದೆ ಸ್ಪಾನರು ಮೀಟುತ್ತಲೇ ಅಕ್ಷರಗಳನ್ನು ಮೀಟಲು ಪ್ರಯತ್ನಿಸುತ್ತವೆ. ಆದರೆ ಹೊಟ್ಟೆಯ ಹಸಿವು, ಮನೆಯವರ ಅಸಹಾಯಕತೆ ಈ ಮಕ್ಕಳನ್ನು ಬಲವಂತದ ದುಡಿತಕ್ಕೆ ದೂಡಿಬಿಟ್ಟಿದೆ. ಅವರನ್ನು ಆದರಿಂದ ಪಾರುಗೊಳಿಸುವುದು ಅವರಿಗೆ ಅಕ್ಷರದ ಹುಚ್ಚು ಹಿಡಿಸುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ.   
ಹೆಚ್ಚಿನ ಸಂದರ್ಭಗಳಲ್ಲಿ ನಾವು ಬಾಲ ಕಾರ್ಮಿಕರನ್ನು ನೋಡಿಯೂ ನೋಡದಂತೆ ವರ್ತಿಸುತ್ತೇವೆ. ಅವರನ್ನು ಆದರಿಂದ ಪಾರುಗೊಳಿಸುವ ಉಸಾಬರಿ ನಮಗ್ಯಾಕೆ ಎಂಬ ಮನೋಭಾವ ಒಂದಡೆಯಾದರೆ ಎಲ್ಲಿ ಅವರನ್ನು ರಕ್ಷಿಸಲು ಹೋಗಿ ಮುಂದಿನ ಅವರ ಕಲಿಕೆಯ ಖರ್ಚು ವೆಚ್ಚದ ಜವಾಬ್ದಾರಿ ನನ್ನ ಮೇಲೆಯೋ ಬಿಳುತ್ತದೆ ಎನ್ನುವ ಬೀತಿ ಇನ್ನೊಂದಡೆ. ಅನೇಕ ವೇಳೆ ನಮ್ಮ ವರ್ತೆನೆ ಹೇಗಿರುತ್ತದೆ ಎಂದರೆ, ನಮಗೊಂದು ಬಾಲ್ಯವೇ ಇದ್ದಿರಲ್ಲವೇನೋ ಎಂಬತೆ. ನೀವು ಅಕ್ಷರ ಕಲಿತಲ್ಲಿವಾದರೂ ನಿಮಗೆ ಈಗ ಆಗುತ್ತಿರುವ ನೋವು, ಕೀಳಿರುಮೆ ನಿಮ್ಮ ಮಕ್ಕಳಿಗೂ ಅಥವಾ ನೇರೆಯ ಮಕ್ಕಳಿಗೂ ಆಗಬೇಕೆಂದು ಬಯಸುತ್ತಿರಾ?  
ಬಾಲ ಕಾರ್ಮಿಕತೆಯಿಂದ ಮಕ್ಕಳನ್ನು ಮುಕ್ತಗೊಳಿಸೋಣ ಅದಕ್ಕೆ ಸಮಾಜದ ಸರ್ವ ಪ್ರಯತ್ನ, ಕಾಳಜೀಯ ಅಗತ್ಯವಿದೆ. ಒಂದು ನೋಟಿಸ, ಭಾಷಾಣ, ಪ್ಲೇ ಕಾರ್ಡುಗಳಿಂದ ಬಾಲ ಕಾರ್ಮಿಕತೆ ತನ ಇಲ್ಲವಾಗುತ್ತದೆ ಎಂದು ನಾವು ಖಂಡಿ ನಾವು ಹೇಳುತ್ತಿಲ್ಲ ಇದು ಒಂದು ಪ್ರಯತ್ನ ನೀವು ಇದರಲ್ಲಿ ಈ ಪ್ರಯತ್ನದಲ್ಲಿ ತೋಡಗಿದರೆ ಖಂಡಿತ ಬಾಲಕಾರ್ಮಿಕರಿಗೂ ಅಕ್ಷರ ಪ್ರೇಮಿಗಳೂ ಆದರು  ಎಂದು 
SIO (STUDENT ISLAMIC ORGANISATION OF INDIA, KARANATAKA)
 
ಕೊಪ್ಪಳ ಘಟವು ಬಾಲ ಕಾರ್ಮಿಕ ಪದ್ದತಿಯ ವಿರುದ್ದ ಜನಜಾಗೃತಿ ಅಭಿಯಾನವು ಕೊಪ್ಪಳ ನಗರದ ವಿವಿಧ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಹಾಗೂ ಶಾಲೆಗೆ ತೆರಳಿ ಬಾಲಕಾರ್ಮಿಕ ಪದ್ದತಿಯ ವಿರುದ್ದ ಕೊಪ್ಪಳ SIO ನಗರ ಘಟಕದ ಅಧ್ಯಕ್ಷರಾದ ಮಹಮ್ಮದ ಜಕ್ರಿಯಾ ಖಾನ್, ರಿಯಾಜ್  ಅಹ್ಮದ ಖಾನ್, ಟಿಪ್ಪು ಸುಲ್ತಾನ, ಪೇರೋಜ ಅಲಿ,  ಬಿತ್ತಿ ಪತ್ರಗಳನ್ನು ಹಂಚುವುದರ ಮೂಲಕ ಜನರಲ್ಲಿ. ಜಾಗೃತಿಯನ್ನು ಮೂಡಿಸಲಾಯಿತು. 
ಆದ್ದರಿಂದ ಸಮಾಜದ ಎಲ್ಲಾ ಸಹೋದರ-ಸಹೋದರಿಯಲ್ಲಿ SIO ವಿನಂತಿಸುವುದೆನೆಂಧರೆ ನಿಮ್ಮ ಮನೆಯಲ್ಲಿ ಇಂತಹ ಮಕ್ಕಳಿದ್ದರೆ, ಅವರ ವಿಧ್ಯಾಭ್ಯಾಸದ ಹೀಣೆಗಾರಿಕೆಯನ್ನು ನೀವು ವಹಿಸಿರಿ. ನಿಮಗೆ ಸಾಧ್ಯವಾಗದೆ ಇದ್ದರೆ ನಮಗೆ ತಿಳಿಸಿರಿ     ಮಹಮ್ಮದ ಜಕ್ರಿಯಾ ಖಾನ್, (   ೯೯೮೬೨೯೨೦೧೬ ) ವಿನಂತಿಸಿಕೊಂಡಿದ್ದಾರೆ.

Advertisement

0 comments:

Post a Comment

 
Top