: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಬರಲಿರುವ ವರಮಹಾಲಕ್ಷ್ಮಿ ಹಬ್ಬ ಹಾಗೂ ರಂಜಾನ್ ಹಬ್ಬ ನಿಮಿತ್ಯ, ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜು. 03 ರಿಂದ 05 ರವರೆಗೆ ಮೂರು ದಿನಗಳ ಕಾಲ ಗಂಗಾವತಿ ಸಿಬಿಎಸ್ ವೃತ್ತ ಬಳಿಯ ಹೋಟೆಲ್ ಅಶೋಕ ದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದೆ. ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆಯನ್ನು ಜು. 03 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ನೆರವೇರಿಸುವರು. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಮೂರನೆ ಬಾರಿಗೆ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು, ಗಂಗಾವತಿ ಸಿಬಿಎಸ್ ವೃತ್ತ ಬಳಿಯ ಹೋಟೆಲ್ ಅಶೋಕ ದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಮಾರಾಟ ಮೇಳ ನಡೆಯಲಿದೆ. ವಿಶೇಷವಾಗಿ ಈ ಬಾರಿ ನಿಗಮವು ಎಲ್ಲಾ ಉತ್ಪನ್ನಗಳ ಮೇಲೆ ಶೇ. 30 ರ ರಿಯಾಯಿತಿ ನೀಡಲಿದೆ. ವರಮಹಾಲಕ್ಷ್ಮಿ ಪೂಜೆ ಹಬ್ಬದ ಹಾಗೂ ರಂಜಾನ್ ಹಬ್ಬದ ಸಡಗರವನ್ನು ಮೈಸೂರು ಸಿಲ್ಕ್ ರೇಷ್ಮೆ ಖರೀದಿಸುವುದರೊಂದಿಗೆ ಆಚರಿಸಲು ಇದು ಉತ್ತಮ ಅವಕಾಶವಾಗಿದ್ದು, ಸರ್ಕಾರಿ ನೌಕರರಿಗೆ ಮೊತ್ತವನ್ನು 10 ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಅರ್ಹ ಸರ್ಕಾರಿ ನೌಕರರು ತಿಂಗಳ ವೇತನದಲ್ಲಿ ಕಂತು ಕಡಿತಗೊಳಿಸುವ ಅಥವಾ ಮುಂದಿನ ದಿನಾಂಕಗಳನ್ನು ನಮೂದಿಸಿದ 10 ಚೆಕ್‍ಗಳನ್ನು ನೀಡುವ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ “ಮೈಸೂರ್ ಸಿಲ್ಕ್” ಹೇಗೆ ವಿಭಿನ್ನವಾಗಿದೆ? ಎಂದರೆ! ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡಿದೆ. ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ, ಮೈಸೂರ್ ಸಿಲ್ಕ್ ಬಟ್ಟೆಯು ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮವಾಗಿರುವುದಲ್ಲದೆ ಬಟ್ಟೆಗೆ ವಿಶೇಷ ಮೆರುಗನ್ನು ನೀಡಿದೆ. ಮೈಸೂರ್ ಸಿಲ್ಕ್‍ಗೆ ಉಪಯೋಗಿಸಲ್ಪಡುವ ಜರಿಯು ಪರಿಶುದ್ಧ ಚಿನ್ನದ್ದಾಗಿದ್ದು, ಶೇಕಡ 0.65 ಚಿನ್ನ ಮತ್ತು ಶೇಕಡ 65 ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನೀಕತೆಯಿಂದ ಕೂಡಿವೆ. ಕೆ.ಎಸ್.ಐ.ಸಿ.ಯು ಇತ್ತೀಚೆಗೆ ಇ-ಜಕಾರ್ಡ್ ಮಗ್ಗಗಳನ್ನು ಅಳವಡಿಸಿದ್ದು 15 ರಿಂದ 20 ನವನವೀನ ವಿನ್ಯಾಸಗಳ ಸೀರೆಗಳನ್ನು ಗ್ರಾಹಕರುಗಳಿಗೆ ಪರಿಚಯಿಸಿದೆ. ಕಂಪನಿಯು ಮೈಸೂರ್ ಸಿಲ್ಕ್ ಭೌಗೋಳಿಕ ಗುರುತಿನ ನೋಂದಣಿಯನ್ನು ಪಡೆದುಕೊಂಡಿದೆ. ಇದು ಸರಕುಗಳ ಭೌಗೋಳಿಕ ಗುರುತಿನ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999 ರಲ್ಲಿ ಲೋಕ ಸಭೆಯಲ್ಲಿ ಅನುಮೋದನೆಗೊಂಡಿದೆ. ಈ ನೋಂದಣಿಯ ಪ್ರಕಾರ ಕೆ.ಎಸ್.ಐ.ಸಿ.ಯು “ಮೈಸೂರ್ ಸಿಲ್ಕ್”ನ ಏಕೈಕ ಮಾಲೀಕತ್ವ ಹೊಂದಿದೆ. ಇದಲ್ಲದೆ ಕಂಪನಿಯು ISO 9001-2008, EMS 14001-2004 ಹಾಗೂ OHSAS 18001-1999 ರ ದೃಢೀಕರಣ ಪತ್ರವನ್ನು ಹೊಂದಿದೆ. ಕೆ.ಎಸ್.ಐ.ಸಿ ನಿಗಮಕ್ಕೆ 2010-11ನೇ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ ಪ್ರಧಾನ ಮಾಡಲಾಗುವ “ಮುಖ್ಯ ಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ” ಲಭಿಸಿದೆ ಹಾಗೂ ಕೆ.ಎಸ್.ಐ.ಸಿ.ಯು (ಮೈಸೂರು ಸಿಲ್ಕ್ ವೀವಿಂಗ್ ಫ್ಯಾಕ್ಟರಿ) 2012 ಕ್ಕೆ ಶತಮಾನೋತ್ಸವವನ್ನು ಪೂರೈಸಿದ ಕರ್ನಾಟಕ ಸರಕಾರದ ಮೊದಲ ಸರ್ಕಾರಿ ಉದ್ಯಮವಾಗಿರುತ್ತದೆ. ಇದೀಗ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆಯಲಿದ್ದು, ಜು. 03 ರಿಂದ 05 ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ತಿಳಿಸಿದೆ.
Home
»
»Unlabelled
» ಜು. 03 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ
Advertisement
Recent Posts
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Koppal New Business Centers - New Show Rooms
04 Aug 20180Koppal New Business Centers - New Show Rooms Mobi...Read more »
ಅಹ್ಮದ್ ಪಟೇಲ್ ಗೆ ಗೆಲುವು: ಮೋದಿ, ಅಮಿತ್ ಶಾಗೆ ಭಾರೀ ಮುಖಭಂಗ
08 Aug 20170ಅಹ್ಮದಾಬಾದ್, ಆ. 9: ಗುಜರಾತ್ ನ ವಿಧಾನಸಭೆಯಿಂದ ರಾಜ್ಯ ಸ...Read more »
ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಬದಲಾವಣೆಗೊಂಡಿರುವ ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆಗೆ ಬೇಟಿ ಕೊಡಿ
18 Apr 20161New Look and Style - Kannadanet.com online news p...Read more »
please login to kannadanet.com for regular news-updates
18 Apr 20160New Look and Style - Kannadanet.com online news p...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.