ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜಿ. ಹುನುಗುಂದರವರು ಕಳೆದ ಮೇ.೧೧ ರಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್‌ರೊಂದಿಗೆ ಗಂಗಾವತಿ ತಾಲೂಕಿನ ಹುಲಿಹೈದರ ಗ್ರಾಮಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮೇ.೨೨ ರಂದು ಸಭೆ ಕರೆದು ಚರ್ಚಿಸಿ ಕರಡಿ ಆಡಿಸುವ ಕುಟುಂಬದವರಿಗೆ ಜಿಲ್ಲಾಧಿಕಾರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.


ಕರಡಿ ಆಡಿಸುವವರ ಕರಡಿಗಳನ್ನು ಸರಕಾರ ವಶಕ್ಕೆ ಪಡೆದ ಹಿನ್ನಲೆಯಲ್ಲಿ ಬೀದಿಪಾಲಾದ ಕುಟುಂಬಗಳಿಗೆ ಪರಿಹಾರ ನೀಡಲು ಪಿಯುಸಿಎಲ್ ಘಟಕದಿಂದ ಕರಡಿ ಆಡಿಸುವರ ಹೋರಾಟ ಸಮಿತಿಯೊಂದಿಗೆ ಕಳೆದ ಆರು ವರ್ಷಗಳ ಹೋರಾಟದ ಫಲವಾಗಿ ಇದೀಗ ಆ ಜನಾಂಗದವರತ್ತ ಗಮನ ಹರಿಸಿದ್ದರಿಂದ ಆ ಜನರ ಸ್ಥಿತಿ ಗತಿಯನ್ನು ನೋಡಿದ ಜಿಲ್ಲಾಧಿಕಾರಿಗಳು ಮಾನವಿಯ ಕಳಕಳಿಯಿಂದ ಜಿಲ್ಲೆಯ ಹುಲಿಹೈದರ, ಚಿಕ್ಕಖೇಡಾ ಮತ್ತು ಮಂಗಳಾಪೂರ ಗ್ರಾಮದ ಕರಡಿ ಆಡಿಸುವ ೪೮ ಕುಟುಂಬಗಳಿಗೆ ಬಸವ ಇಂದಿರಾ ಯೋಜನೆಯಲ್ಲಿ ಮನೆ ಕಟ್ಟಿಸಿ ಕೊಡುವುದು, ಯಾರಿಗೆ ವೃದ್ಧಾಪ ವೇತನ ಮಂಜೂರಾತಿ, ಮಂಗಳಾಪೂರದ ೧೬ ಕುಟುಂಬದವರಿಗೆ ತಲಾ ೨ ಎಕರೆ ಜಮೀನು, ಕರಡಿ ಆಡಿಸುವ ಎಲ್ಲಾ ಕುಟುಂಬದವರಿಗೆಲ್ಲಾ ಬಿಪಿಎಲ್ ಕಾರ್ಡ ಹಾಗೂ ಅರ್ಹರಿಗೆ ಜುಲೈ ತಿಂಗಳ ಒಳಗಾಗಿ ಮಂಜೂರಾತಿಗೊಳಿಸಬೇಕು, ಅವರ ಮಕ್ಕಳಿಗೆ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅವಕಾಶ ಕಲ್ಪಿಸಲು ಆದೇಶಿಸಿದರು. ಅಲ್ಲದೇ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದಿಂದ ೪೮ ಜನರಿಗೆ ಸಾಲ ವಿತರಿಸಬೇಕು, ಹುಲಿಹೈದರ ಮತ್ತು ಚಿಕ್ಕಖೇಡಾದ ಒಟ್ಟು ೩೨ ಕುಟುಂಬಗಳಿಗೆ ಜಮೀನು ನೀಡಲು ಸರಕಾರಕ್ಕೆ ಪ್ರಸ್ತಾವನೆ ನೀಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಪಿಯುಸಿಎಲ್‌ನ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಸದಸ್ಯರಾದ ಭಾರದ್ವಾಜ, ಡಿ.ಎಚ್.ಪೂಜಾರ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರಹುಸೇನ ಕುಕನೂರ, ಗಂಗಾವತಿ ತಹಶಿಲ್ದಾರರು, ಆಹಾರ ಇಲಾಖೆಯ ಅಧಿಕಾರಿ ಬಗಲಿ ಕರಡಿ ಆಡಿಸುವವರ ಹೋರಾಟ ಸಮಿತಿಯ ರಾಜಾಸಾಬ ಮಂಗಳಾಪುರ, ರಾಜಾಹುಸೇನ ಮಂಗಳಾಪುರ, ಹುಲಿಹೈದರ ಗ್ರಾಮದ ಹುಸೇನಸಾಬ, ಮರ್ತುಜಾಸಾಬ, ಚಿಕ್ಕಖ್ಯೇಡಾದ ಹುಸೇನಸಾಬ ಮಹ್ಮದಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.