ಎ.ಐ.ಸಿ.ಸಿ.ಟಿ.ಯು. ಸಂಘಟನೆ ಮೇ ಮಾಸ ಚಳುವಳಿಯ ಅಂಗವಾಗಿ ಮೇ ೧ ರಂದು ಫ್ರಿಡಂ ಪಾರ್ಕ್‌ನಿಂದ ಪ್ರಾರಂಬವಾದ ಚಳುವಳಿ ರಾಜ್ಯಾದ್ಯಾಂತ ಹೋರಾಟಗಳನ್ನು ನಡೆಸಿ ಸಮಾರೋಪವಾಗಿ ದಿನಾಂಕ ೩೧-೦೫-೨೦೧೪ ರಂದು ಗಂಗಾವತಿಯಲ್ಲಿ ಬೀದಿವ್ಯಾಪಾರಿಗಳ ಮತ್ತು ಸ್ಲಮ್ ಜನರ ಹಕ್ಕುಗಳಿಗಾಗಿ ಗಾಂಧಿವೃತ್ತದಿಂದ ನಗರಸಭೆವರೆಗೆ ರ‍್ಯಾಲಿ ನಡೆಸಿ, ನಗರಸಭೆಯ ಪೌರಾಯುಕ್ತರಿಗೆ ಮನವಿಗಳನ್ನು ಸಲ್ಲಿಸಿ ಮುಕ್ತಾಯಗೊಳಿಸಲಾಗಿದೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.
ಈ ಸಭೆಯಲ್ಲಿ ಎ.ಐ.ಸಿ.ಸಿ.ಟಿ.ಯು. ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ, ಸಿ.ಪಿ.ಐ.ಎಂ.ಎಲ್. ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೆಕಲ್, ಅಯ್ಯಾಲಾ ಜಿಲ್ಲಾಧ್ಯಕ್ಷ ಯೇಸಪ್ಪ, ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷಿಣಿ ಶಾಂತಕುಮಾರಿ, ಪ್ರಗತಿಪರ ಬೀದಿವ್ಯಾಪಾರಿಗಳ ತಾಲೂಕ ಅಧ್ಯಕ್ಷ ಖಾದರಭಾಷಾ, ಎ.ಐ.ಸಿ.ಸಿ.ಟಿ.ಯು. ತಾಲೂಕ ಅಧ್ಯಕ್ಷ ಬಿ.ಮೋಹನ್, ಕ್ರಾಂತಿಕಾರಿ ಯುವಜನ ಸಂಘದ ತಾಲೂಕ ಉಪಾಧ್ಯಕ್ಷ ಮುತ್ತಣ್ಣ ಮತ್ತು ನೂರಾರು ಕಾರ್ಮಿಕರು ಪಾಲ್ಗೊಂಡಿದ್ದಾರೆ
0 comments:
Post a Comment
Click to see the code!
To insert emoticon you must added at least one space before the code.