ಕೊಪ್ಪಳ : ದಲಿತರ ಮನೆಯಲ್ಲಿ ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕ್ ನಿಕ್ ಮಾಡುತ್ತಾರೆ ಎಂಬ ಬಾಬಾ ರಾಮದೇವ್ ರ ಹೇಳಿಕೆಯನ್ನು ಖಂಡಿಸಿ ಕೊಪ್ಪಳದ ಅಶೋಕ್ ಸರ್ಕಲ್ ನಲ್ಲಿ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದವರು ರಾಮದೇವ್ ಪ್ರತಿಕೃತಿ ದಹನ ಮಾಡಿದರು. ನಂತರ ಮಾತನಾಡಿದ ಸಂಘಟಕರು ರಾಮದೇವ್ ವಿರುದ್ದ ಉಗ್ರ ಕ್ರಮಕ್ಕೆ ಆಗ್ರಹಿಸಿದರು.
ರಾಮದೇವ್ ದಲಿತ ವರ್ಗದವರನ್ನು ಕೀಳಾಗಿ ಕಾಣುವುದನ್ನು ಹಾಗೂ ಶೋಷಣೆಗಳಿಸುವದು ಅಪರಾದ ಎಂದು ಗೊತ್ತಿದ್ದರೂ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಇದನ್ನು ನಿಲ್ಲಿಸಬೇಕು. ಸರ್ವ ಜನಾಂಗಕ್ಕೆ ಸಮಾನ ಮನ್ನಣೆ ನೀಡಬೇಕು. ರಾಮ್ ದೇವ್ ರನ್ನು ಬಂಧಿಸಲು ಪೋಲಿಸರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು,ದೇಶದ ಶಾಂತಿ ಸೌಹಾರ್ಧ ಹದಗೆಡಿಸಲು ಹೊರಟಿರುವ ರಾಮದೇವ್ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ದಲಿತರ ವಿರುದ್ದವಾಗಿ ಜಾತಿನಿಂದನೆ ಮಾಡಿರುವ ರಾಮದೇವ್ ರನ್ನು ದೇಶದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಮತ್ತು ಪತಂಜಲಿ ಯೋಗಾಶ್ರಮವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಯೋಗದ ಹೆಸರಿನಲ್ಲಿ ಸ್ಥಾಪಿಸಿದ ಯೋಗ ಸಂಸ್ಥೆಗಳನ್ನ ರದ್ದುಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗಾಳೆಪ್ಪ ಪೂಜಾರ, ಹನುಂತಪ್ಪ ಮ್ಯಾಗಳಮನಿ, ಎಂ.ಪಾಶಾ ಕಾಟನ್, ದೇವಪ್ಪ ಕಟ್ಟಿಮನಿ, ಲತಾ ವಿ.ಸೊಂಡೂರ, ಮಲ್ಲಪ್ಪ ಕವಲೂರ, ಮುತ್ತುರಾಜ ನಗರಸಭೆ ಸದಸ್ಯರು, ಅಜ್ಜಪ್ಪ ಸ್ವಾಇ, ಮಹಾಂತೇಶ ಚೌಕ್ರಿ, ಅಜಯ್ ದೊಡ್ಡಮನಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ಪದಾಧಿಕಾರಿಗಳು ಸಂಘಟಕರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.