PLEASE LOGIN TO KANNADANET.COM FOR REGULAR NEWS-UPDATES

   
  ೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷಶಿಬಿರದ ಸಮಾರೋಪಸಮಾರಂಭದ ವರದಿ.
      ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ೨೦೧೧೩-೧೪ ರ ಸಾಲಿನ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ದಿನಾಂಕ ೨೭-೦೪-೨೦೧೪ ರಂದು ಸಮಾರೋಪ ಸಮಾರಂಭ ಜರುಗಿತು
ಸಮಾರೋಪ ಸಮಾರಂಭದ ಮುಖ್ಯ ಅಥಿತಿಗಳಾಗಿ ಮಾತನಾಡಿದ  ರಾಘವೇಂದ್ರ ಪಾನW೦ಟ್ಟಿ ಯವರು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿನ ಅನುಭವಗಳು ಬದುಕಿನುದ್ದಕ್ಕು ಮರೆಯಲು ಸಾಧ್ಯವಿಲ್ಲ. ಶಿಬಿರದ ಸಹಬಾಳ್ವೆ, ತಂಡದಸ್ಪೂರ್ತಿ, ನಾಯಕತ್ವದ ಗುಣ ಸಂವಹನ ಕೌಶಲ್ಯಗಳಂತಹ ಗುಣಗಳನ್ನು ಮೈಗೂಡಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಶಿಬಿರದಲ್ಲಿ ಅಳವಡಿಸಿಕೊಂಡ ಗುಣಗಳನ್ನು ಜೀವನದಲ್ಲಿ ವೃಧ್ದಿಸಿಕೊಂಡರೆ ಯ ಸಾಧಿಸಬಹುದೆಂದರು. 
         ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೋ||ಎಸ್.ಎಲ್.ಮಾಲಿಪಾಟೀಲ್ ರವರು ವಿದ್ಯಾರ್ಥಿಗಳು ಜೀವನದಲ್ಲಿ ಬಧ್ಧತೆಯ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿದೆಸೆಯಲ್ಲಿಯೇ ಶಿಸ್ತು, ಸಮಯ ಪಾಲನೆ, ಬಧ್ಧತೆ ಶ್ರಮ ಗೌರವ ಬೆಳೆಸಿಕೊಂಡರೆ ಬದುಕಿನಲ್ಲಿ ಯಶಸ್ಸನ್ನು ಸರಳವಾಗಿ ಪಡೆಯಬಹುದು ಇಂತಹ ಗುಣಗಳ ಬೆಳವಣಿಗೆಗೆ ಶಿಬಿರಗಳು ಸಹಾಯಕಾರಿ ಎಂದರು. 
         ಶಿಬಿರದ ಅವಧಿಯ ಸಾಧನೆಗಳ ಅವಲೋಕನಾ ವರದಿಯನ್ನು ಪೊ’ಶರಣಬಸಪ್ಪ ಮಂಡಿಸಿದರು ಪ್ರಾಸ್ತಾವಿಕವಾಗಿ ಡಾ||ಜೆ.ಎಸ್.ಪಾಟೀಲ್ ರವರು ಮಾತನಡಿದರು ಶಿಭಿರಾರ್ಥಿ ನವೀನ ಕುಲಕರ್ಣಿ ಕಾರ್ಯಕ್ರಮ  ನಿರೂಪಣೆಗೈದರು ಶಿಬಿರಾಧಿಕಾರಿ ಪ್ರೋ ಶರಣಬಸಪ್ಪ ರವರು ಶಿಬಿರದ ಯಶಸ್ಸಿಗೆ  ಧನ್ಯವಾದಗಳನ್ನು ಅರ್ಪಿಸಿದರು.

28 Apr 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top